ಉದಯರಶ್ಮಿ ದಿನಪತ್ರಿಕೆ
ಅಥಣಿ: ಈಗಿನ ಕಾಲದಲ್ಲಿ ಸಮಾಜಮುಖಿ ಕೆಲಸ ಮಾಡುವವರು ಕಡಿಮೆಯಾಗಿದ್ದಾರೆ ಇಂತಹ ಕ್ಲಿಷ್ಟ ಸಮಯದಲ್ಲಿ ರವಿ ಕಾಂಬಳೆ ಅವರು ಒಳ್ಳೆಯ ಸಮಾಜಮುಖಿ ಕೆಲಸ ಮಾಡಲು ಮುಂದೆ ಬಂದಿದ್ದಾರೆ ಅವರಿಗೆ ಎಲ್ಲರೂ ಕೈಜೋಡಿಸಿದರೆ ಮಾತ್ರ ಶಕ್ತಿ ಬರುತ್ತದೆ ಎಂದು ಮಹಾರಾಷ್ಟ್ರದ ರಾಜ್ಯದ ಗೂಗವಾಡ ದಮ್ಮ ಭೂಮಿ ಸಂಸ್ಥಾಪಕ ಸಿ.ಆರ್. ಸಾಂಗ್ಲೀಕರ್ ಹೇಳಿದರು.
ಅವರು ಅಥಣಿ ಪಟ್ಟಣದ ಖೋತ ಸಭಾಭವನದಲ್ಲಿ ಶ್ರೀಮತಿ ಸಾಯವ್ವ ಶ್ರೀಕಾಂತ ಫೌಂಡೇಶನ್ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು, ಫೌಂಡೇಶನ್ ವತಿಯಿಂದ ಹಲವಾರು ಜನಪರ ಕೆಲಸಗಳನ್ನು ಮಾಡಲು ಅವಕಾಶವಿದೆ ಸರ್ಕಾರದಿಂದ ಹಲವಾರು ಯೋಜನೆಗಳಿದ್ದು ಅವು ಸರಿಯಾಗಿ ಬಡವರಿಗೆ ಮುಟ್ಟುತ್ತಿಲ್ಲ ಈ ಫೌಂಡೇಶನ್ ಮೂಲಕ ಬಡವರಿಗೆ ಸೌಲಭ್ಯ ಒದಗಿಸಿಕೊಡಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನೆ ಸಂಚಾಲಕ ಸಂಜಯ ತಳವಲಕರ್ ಮಾತನಾಡಿ, ರವಿ ಕಾಂಬಳೆ ಅವರು ತಮ್ಮ ತಾಯಿ ತಂದೆಯ ಹೆಸರಿನಲ್ಲಿ ಒಂದು ಫೌಂಡೇಶನ್ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ.
ಈ ಫೌಂಡೇಶನ್ ವತಿಯಿಂದ ಹಲವಾರು ಜನಪರ ಕೆಲಸಗಳನ್ನು ಮಾಡಲು ಮುಂದಾಗಿದ್ದಾರೆ. ಅದಕ್ಕೆ ಎಲ್ಲರೂ ಸಹಾಯ ಸಹಕಾರ ನೀಡಬೇಕು. ನಮ್ಮ ಸಂಘಟನೆ ಈ ಫೌಂಡೇಶನ್ ಜೊತೆ ಸದಾ ಇರುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಈ ಫೌಂಡೇಶನ್ ಹಲವಾರು ಜನಪರ ಕೆಲಸ ಮಾಡಲು ಮುಂದೆ ಬಂದಿದೆ ಇದು ಒಬ್ಬರಿಂದ ಆಗುವ ಕೆಲಸವಲ್ಲ ಎಲ್ಲರೂ ಸಹಕಾರ ಮಾಡಿದರೆ ಒಳ್ಳೆಯ ಜನಪರ ಕೆಲಸಗಳನ್ನು ಮಾಡಲು ಫೌಂಡೇಶನ್‌ಗೆ ಒಂದು ಶಕ್ತಿ ಬರುತ್ತದೆ ಎಂದರು.
ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಸೀತವ್ವ ಜೋಡಟ್ಟಿ, ಡಾ. ಆನಂದ ಗುಂಜಿಗಾಂವಿ, ಡಾ. ಕವಿತಾ ಕೋಟ್ರೆ, ಡಾ. ಸದಾಶಿವ ಭಜಂತ್ರಿ ಮಾತನಾಡಿದರು.
ದಿವ್ಯ ಸಾನಿಧ್ಯವನ್ನು ಹಾಲಹಳ್ಳಿ ಬುದ್ಧ ವಿಹಾರದ ಬಂತೇಜಿ ವಹಿಸಿ ಮಾತನಾಡಿದರು.
ಈ ವೇಳೆ ಕೃಷ್ಣ ಸಕ್ಕರೆ ಕಾರ್ಖಾನೆ ಸದಸ್ಯ ಘೂಳಪ್ಪ ಜತ್ತಿ, ಅಥಣಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಷ್ಟರ, ಅಥಣಿ ಕಾಂಗ್ರೆಸ್ ಮುಖಂಡ ರಮೇಶ ಸಿಂಧಗಿ, ಪುರಸಭೆ ಸದಸ್ಯ ರಾವಸಾಬ ಐಹೊಳೆ, ಕೋಮಲ ಕಾಂಬಳೆ, ಫೌಂಡೇಶನ್ ಅಧ್ಯಕ್ಷ ರವಿ ಕಾಂಬಳೆ, ಕಾರ್ಯದರ್ಶಿ ಭೀರಪ್ಪ ಕಾಂಬಳೆ, ಶಿವಾನಂದ ಗೋಲಬಾಂವಿ, ಕುಮಾರ ಪಾಟೀಲ, ಅಭಾ ಚವಾಣ, ಮಹೇಂದ್ರ ಖಾಂಡೇಕರ, ಕುಮಾರ ಬನಸೋಡಿ, ಪಂಡಿತ ಕಾಂಬಳೆ, ಅಶೋಕ ಚೌಗಲಾ, ನಿಜಾಮ್ ಮುಲ್ಲಾ, ದತ್ತು ಕಾಂಬಳೆ, ಪಾಂಡುರಂಗ ಕಾಂಬಳೆ, ರಮೇಶ ತಳಕೇರಿ, ಮಹಾದೇವ ಮಾದರ, ಅಮರ ಕಾಂಬಳೆ, ನೀಲಕಂಠ ಕಾಂಬಳೆ, ಅಶೋಕ ನಿಡೋಣಿ, ವಿಲಾಸ ಕಾಂಬಳೆ, ವಿಜಯ ಅಸೂದೆ, ಸುಧಾಕರ ಬಳವಾಡಕರ, ವಿಠ್ಠಲ ಕಾಂಬಳೆ, ತುಕಾರಾಮ ಭಜಂತ್ರಿ, ಚಂದು ಬನಸೋಡಿ, ರಾಜು ಕಾಂಬಳೆ,ರಮೇಶ ಕಾಂಬಳೆ, ಅಪ್ಪು ಪವಾರ, ಶಿವಶಂಕರ ಸಿಂಗೆ, ಮಧುಕರ ಕಾಂಬಳೆ, ಈಶ್ವರ ದೊಡಮನಿ, ಶಂಕರ ಕಾಂಬಳೆ, ರಾಘವೇಂದ್ರ ದೊಡಮನಿ,ಸೇರಿದಂತೆ ಇನ್ನಿತಿತರು ಉಪಸ್ಥಿತರಿದ್ದರು.

