ವಿಜಯಪುರ: ನಗರದ ಜಿಲ್ಲಾ ಆಸ್ಪತ್ರೆ ಯ krsna CT& MRI ವಿಭಾಗದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಹಾಗೂ krsna CT& MRI ವಿಭಾಗದ ಮುಖ್ಯಸ್ಥ ಡಾ.ರಾಜಶೇಖರ ಮುಚ್ಚಂಡಿ ಮಾತನಾಡಿ, ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ತುಂಬಿದ ಸುವರ್ಣ ಸಂದರ್ಭದಲ್ಲಿ ನಾವಿದ್ದೇವೆ. ಈ ಸಂಭ್ರಮದಲ್ಲಿರುವ ನಾವು ಕನ್ನಡ ನಾಡು-ನುಡಿಯ ಬೆಳವಣಿಗೆಗೆ ಹಾಗೂ ನಮ್ಮ ನೆಲ-ಜಲದ ಉಳಿವಿಗೆ ಕಂಕಣಬದ್ಧರಾಗೋಣ. ಅನ್ನದ ಭಾಷೆಯಾಗಿರುವ ಕನ್ನಡವನ್ನು ಉಳಿಸಿ ಬೆಳೆಸೋಣ ಎಂದು ಕರೆ ನೀಡಿದರು.
ವೈದ್ಯಾಧಿಕಾರಿ ಡಾ.ಸಿಎಂ.ರಾಠೋಡ, ಉಪ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಸುರೇಶ ಚವ್ಙಾಣ, ಡಾ.ಎ.ಜಿ.ಬಿರಾದಾರ, ಹಿರಿಯ ತಜ್ಞ ವೈದ್ಯರಾದ ಡಾ.ಪರಶುರಾಮ ದೇವಮಾನೆ, ಡಾ.ಮಹೇಶ ಮೋರೆ, ಹಿರಿಯ ವೈದ್ಯಾಧಿಕಾರಿ ಡಾ. ಎಸ್. ಎಂ. ತಿಮ್ಮಾಪೂರ, ಡಾ.ಪಾಂಡುರಂಗ ದೊಡಮನಿ, ಕೇಂದ್ರ ವ್ಯವಸ್ಥಾಪಕ ವಿಶಾಲ ಜಂಗಮ ಮತ್ತು krsna CT& MRI ವಿಭಾಗದ ಸಿಬ್ಬಂದಿ ಸೇರಿದಂತೆ ಹಲವರಿದ್ದರು.
ಡಾ.ಮಹೇಶ ಮೋರೆ ನಾಡಗೀತೆ ಹಾಡಿದರು.
Related Posts
Add A Comment