Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಪ್ರೀತಿ.. ಹಕ್ಕಲ್ಲ, ಒಂದು ಸುಂದರ ಭಾವನೆ

ಮಹಿಳಾ ವಿವಿ: ಇಂದು ರಾಷ್ಟ್ರೀಯ ವಿಚಾರ ಸಂಕಿರಣ

ಜೆನ್–ಜಿ ಯುವಜನಾಂಗ: ಒಂದು ಜಿಜ್ಞಾಸೆ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಪ್ರೀತಿ.. ಹಕ್ಕಲ್ಲ, ಒಂದು ಸುಂದರ ಭಾವನೆ
ವಿಶೇಷ ಲೇಖನ

ಪ್ರೀತಿ.. ಹಕ್ಕಲ್ಲ, ಒಂದು ಸುಂದರ ಭಾವನೆ

By No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
*- *ಉಮಾ ಸುನಿಲ್.*
ಹಾಸನ

ಉದಯರಶ್ಮಿ ದಿನಪತ್ರಿಕೆ

“ನೀನಿಲ್ಲದೆ ಒಂದು ಕ್ಷಣವೂ ಬದುಕಿರಲಾರೆ” ಎಂದು ಸಿಗದ ಪ್ರೀತಿಗಾಗಿ ತನ್ನ ಬದುಕಿನ ಬಗ್ಗೆ ಅತ್ಯಂತ ದುಡುಕಿನ ನಿರ್ಧಾರ ತೆಗೆದುಕೊಂಡವರು ಹಾಗೂ
“ನನಗೆ ಸಿಗದೇ ಹೋದರೆ ಯಾರಿಗೂ ನೀನು ಸಿಗಲೇಬಾರದು” ಎಂಬ ಸ್ವಾರ್ಥದ ಮನೋಭಾವದಿಂದ ಅನ್ಯಾಯವಾಗಿ ಇನ್ನೊಂದು ಜೀವದ ಬದುಕನ್ನೇ ಹಾಳುಮಾಡಿದವರು.
ಇಂತಹ ಸುದ್ದಿಗಳನ್ನು ಲೆಕ್ಕವಿಲ್ಲದಷ್ಟು ಕೇಳುತ್ತಿದ್ದರೂ, ಅಷ್ಟೇ ವಿಷಾದನೀಯ ಸಂಗತಿ ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ನಾವು ಇಂತಹ ದುರ್ಘಟನೆಗಳಿಗೆ ಕಾರಣರಾದವರನ್ನು ಖಂಡಿಸಿ, ಘಟನೆಗೆ ಮರುಗುತ್ತೇವೆ. ಆದರೆ ಇಂತಹ ದುಡುಕಿನ ನಿರ್ಧಾರಗಳ ಹಿಂದೆ ಇದ್ದ ಮನಸ್ಥಿತಿ ಎಂತಹದ್ದಾಗಿತ್ತು? ಹೇಗಿತ್ತು? ಎಂದು ಒಮ್ಮೆ ಯೋಚಿಸೋಣ.


“ತನಗೆ ಬೇಕೇ ಬೇಕು” ಎನ್ನುವ ಹಠ ಹಾಗೂ “ತಾನು ಬಯಸಿದ್ದು ತನ್ನ ಸ್ವಂತದ್ದು” ಎನ್ನುವ ಮನೋಭಾವ ಮನಸ್ಸಿನಾಳಕ್ಕೆ ಇಳಿದಾಗ, ವ್ಯಕ್ತಿ ತನ್ನೊಳಗಿನ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳಬಹುದು. ಸ್ವತಃ ತನ್ನ ಮೇಲೆಯೇ ಕೀಳರಿಮೆ, ಜಗತ್ತೇ ಶೂನ್ಯ ಎನ್ನುವಷ್ಟು ಒಂಟಿತನ, ಆ ಕ್ಷಣಕ್ಕೆ ಆವರಿಸುವ ಅತಿಯಾದ ನಿರಾಶೆ ಇವೆಲ್ಲವೂ ವ್ಯಕ್ತಿಯನ್ನು ತಪ್ಪು ನಿರ್ಧಾರಗಳತ್ತ ಕೊಂಡೊಯ್ಯಬಹುದು.
ಇದನ್ನೇ ನಾವು ಇಲ್ಲಿ ಪ್ರೀತಿ ಎಂದುಕೊಂಡುಬಿಟ್ಟಿದ್ದೇವೆ. ಆದರೆ ಇದೊಂದು ಮಿತಿಮೀರಿದ ಸ್ವಾರ್ಥ, ವ್ಯಾಮೋಹ ತುಂಬಿದ ಮನಸ್ಸಿನ ಭ್ರಮೆ ಎನ್ನಬಹುದು.
ಒಮ್ಮೆ ಪ್ರೀತಿ ಅಥವಾ ಮೋಹ ಎನ್ನುವ ಬಂಧಕ್ಕೆ ಸಿಲುಕಿದರೆ, ಆರಂಭದಲ್ಲಿ ಹೊಸ ವ್ಯಕ್ತಿಯ ಬಗ್ಗೆ ಇರುವ ಕುತೂಹಲ, ಉತ್ಸಾಹ, ಉಲ್ಲಾಸ ನಮ್ಮೊಳಗೆ ಒಂದು ರೀತಿಯ ಖುಷಿಯ ಅನುಭವ ನೀಡುತ್ತಾ ಹೋಗುತ್ತದೆ. ಮನದೊಳಗೆ ಮೂಡಿದ ಹೊಸ ಭಾವನೆಗೆ ಕಳೆದುಹೋಗುವಷ್ಟು ಹಚ್ಚಿಕೊಂಡು, ಇನ್ನೊಂದು ಪ್ರಪಂಚವೇ ಇಲ್ಲ ಎನ್ನುವಷ್ಟು ಆ ಭಾವನೆ ನಮ್ಮನ್ನು ಆವರಿಸಿಬಿಡುತ್ತದೆ.
ಆದರೆ ದಿನದಿಂದ ದಿನಕ್ಕೆ ಪರಸ್ಪರರ ಭಾವನೆಗಳಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದೆ. ಪರಸ್ಪರರ ಮನೋಭಾವಗಳಲ್ಲಿ ಹೊಂದಾಣಿಕೆ ಇಲ್ಲದಿದ್ದಾಗ, ನಿರೀಕ್ಷೆಗಳು ಹಂತ ಹಂತವಾಗಿ ಹೆಚ್ಚುತ್ತಾ ಹೋದಾಗ, ಅದಕ್ಕೆ ಸ್ಪಂದಿಸಲು ಸಾಧ್ಯವಾಗದೇ ಹೋದಾಗ , ನಂಬಿಕೆಯ ಬೇರು ಗಟ್ಟಿಯಾಗದೆ ಅನುಮಾನಗಳು ಹೆಚ್ಚಾಗುವುದು. ಆಗ ಸಹಜವಾಗಿಯೇ ಆಸಕ್ತಿ ಕಡಿಮೆಯಾಗಬಹುದು.
ಇಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರತಿಕ್ರಿಯೆ ಸಿಗದೇ ಹೋದಾಗ ನಿರಾಶೆ, ಅಸಹನೆ, ದ್ವೇಷ, ಸೇಡು, ಸ್ವಾಭಿಮಾನಕ್ಕೆ ಹೊಡೆತ, ಅಹಂಕಾರ, ಅಸೂಯೆ—ಇವೆಲ್ಲವೂ ಒಟ್ಟಾಗಿ ವ್ಯಕ್ತಿಯನ್ನು ತಪ್ಪು ದಾರಿಯತ್ತ ಕೊಂಡೊಯ್ಯಬಹುದು.
ತಾನು ಅಂದುಕೊಂಡ ಬದುಕು ತನಗೆ ಸಿಗದೇ ಹೋದಾಗ, ಬದುಕಿಗೆ ಮಾರಕವಾಗುವ ದುಡುಕಿನ ನಿರ್ಧಾರಗಳನ್ನು ತೆಗೆದುಕೊಂಡು, ದುಷ್ಕೃತ್ಯಗಳಿಗೆ ಮುಂದಾಗಿ, ತಮ್ಮ ಅಮೂಲ್ಯ ಜೀವನವನ್ನೇ ಹಾಳುಮಾಡಿಕೊಳ್ಳುವ ಸಂದರ್ಭವೂ ಒದಗಬಹುದು. ಪಶ್ಚಾತ್ತಾಪ ಪಡುವ ವೇಳೆಗೆ ಸಮಯ ಬಹುದೂರ ಸಾಗಿರುತ್ತದೆ.


ಪ್ರೀತಿ ಎಂದರೆ, ಒಂದು ಜೀವದೊಳಗೆ ಇನ್ನೊಂದು ಜೀವಕ್ಕಾಗಿ ಹುಟ್ಟಿದ ಅನುರಾಗದ ಭಾವ. ಅದು ಹೂವಿನಷ್ಟೇ ಹಗುರವಾಗಿರಬೇಕು. ಅದು ಬೀರುವ ಘಮ ಇನ್ನೊಂದು ಜೀವಕ್ಕೆ ಜೀವ ತುಂಬುವಂತಿರಬೇಕು.
ಪರಸ್ಪರ ಅರಿಯಲು ಸಮಯ ನೀಡಬೇಕು. ಹೊಂದಾಣಿಕೆ ಇಲ್ಲಿ ಬಹುಮುಖ್ಯ. ಅಷ್ಟೇ ಮುಖ್ಯವಾಗಿ ಪರಸ್ಪರರಲ್ಲಿ ಗೌರವವಿರಬೇಕು. ಭಾವನೆಗಳಿಗೆ ಬೆಲೆ ಇರಬೇಕು. ಹೀಗೆ ಹುಟ್ಟುವ ಬಂಧಕ್ಕೆ ಹೆಚ್ಚಿನ ಆಯಸ್ಸು ಖಂಡಿತ ಇದೆ.
ಇಂತಹ ಸುಂದರ ಪ್ರೇಮ ಅರಳಲು ಮೊದಲು ನಮ್ಮಲ್ಲಿ ಸ್ವಯಂ ಪ್ರೀತಿ ಇರಬೇಕು. ಅದೇ ಇಲ್ಲದ ಮೇಲೆ ಇನ್ನೊಂದು ಜೀವದ ಪ್ರೀತಿ ಗಳಿಸಲೂ ಸಾಧ್ಯವಿಲ್ಲ, ಹಂಚಲೂ ಸಾಧ್ಯವಿಲ್ಲ.
ಅರಿಯಬೇಕಿರುವುದು ನಾವಿಲ್ಲಿ—
ಪ್ರೀತಿ ಎಂದರೆ ಇನ್ನೊಬ್ಬರ ಸ್ವಾತಂತ್ರ್ಯ ಕಿತ್ತುಕೊಳ್ಳುವುದಲ್ಲ; ಹಕ್ಕು ಚಲಾಯಿಸುವುದಲ್ಲ. ಅದು ತನ್ನೊಳಗೆ ಮೂಡಿರುವ ಸುಂದರವಾದ ಭಾವನೆ. ಅದು ನಿರೀಕ್ಷೆ ಎಂಬ ಉಸಿರುಗಟ್ಟಿಸುವ ಗೂಡೊಳಗೆ ಬಂಧಿಯಾಗದೇ, ಸ್ವತಂತ್ರವಾಗಿ, ಸ್ವಚ್ಛಂದವಾಗಿ, ನಿಸ್ವಾರ್ಥವಾಗಿ, ನಿರ್ಭಯವಾಗಿ ಉಸಿರಾಡುತ್ತಿರಬೇಕು.
ಈ ಒಂದು ಸುಂದರವಾದ ಭಾವನೆಯೇ ಪವಿತ್ರವಾದ ಪ್ರೀತಿ. ಈ ಪ್ರೀತಿ ಎನ್ನುವುದು ಜೀವಜಗತ್ತಿನ ಬಹುಮುಖ್ಯವಾದ ಒಂದು ಭಾಗವೇ ಹೌದು.
ಅತಿಯಾದ ನಿರೀಕ್ಷೆಗಳು ತುಂಬಿಕೊಂಡಿರುವ ಬಾಂಧವ್ಯಗಳನ್ನು ಪ್ರೀತಿ ಎನ್ನುವ ಹೆಸರಿನಿಂದ ಕರೆದಾಗ, ಅದು ಅಪಾರ್ಥವಾಗುವುದು. ಕೇವಲ ಆಕರ್ಷಣೆಯ ಬಾಂಧವ್ಯಗಳನ್ನು ಪ್ರೀತಿ ಎಂದು ಹೇಳಲು ಸಾಧ್ಯವೇ ಇಲ್ಲ.
ಪ್ರೀತಿಯನ್ನು ಮನಸ್ಫೂರ್ತಿಯಾಗಿ ಹಂಚಬೇಕೇ ಹೊರತು, “ತನಗೆ ಬೇಕೇ ಬೇಕು” ಎಂದು ಯಾರಿಂದಲೂ ಬಲಾತ್ಕಾರವಾಗಿ ಪಡೆಯುವ ಆಟದ ವಸ್ತುವಾಗಬಾರದು. ಹಾಗೆಯೇ ನಾವೇ ಅದರ ಹಸಿವಿನಿಂದ ನರಳಬಾರದು.
ಹೊರಗಿನಿಂದ ಪ್ರೀತಿಯ ನಿರೀಕ್ಷೆಯನ್ನು ಮಾಡುತ್ತಾ ಹೋದಾಗ, ನಮ್ಮೊಳಗಿನ ಸುಂದರ ಲೋಕದಲ್ಲಿ ಸ್ವಾರ್ಥ ಎಂಬ ಬೇಡದ ಕಳೆಗಳು ಹುಟ್ಟಿಬಿಡುತ್ತವೆ. ಮಾನವರಾದ ನಾವು ಪ್ರೀತಿ ಎನ್ನುವ ಹೆಸರಿನಲ್ಲಿ ಕ್ಷಣಿಕ ಆಕರ್ಷಣೆಗೆ ದಾಸರಾಗಿಬಿಟ್ಟರೆ, ಪ್ರೀತಿ ತನ್ನ ನಿಜವಾದ ಅರ್ಥವನ್ನೇ ಕಳೆದುಕೊಳ್ಳುವುದು.
ಮನಸುಗಳು ಗೌರವ ಭಾವದಿಂದ ಒಂದಾಗಬೇಕು.
ಹಾಗಾದರೆ ಇಲ್ಲಿ ಯಾವುದು ನಿಸ್ವಾರ್ಥವಾದ ಪ್ರೀತಿ? ಎಂದು ಒಮ್ಮೊಮ್ಮೆ ಗೊಂದಲಕ್ಕೆ ಬಿದ್ದು ಒದ್ದಾಡುವುದುಂಟು.
ಅತಿಯಾದ ಅಪೇಕ್ಷೆ ಇಲ್ಲದೇ ಪ್ರೀತಿಸಿ. ಸ್ವತಂತ್ರವಾಗಿ ನಮ್ಮ ಪ್ರೀತಿಯನ್ನು ಅತಿಯಾದ ಭಾವನೆಯ ಪಂಜರದಲ್ಲಿ ಕೂಡಿ ಹಾಕದೆ ಹಾರಲು ಬಿಡಬೇಕು. ಅದು ನಮ್ಮನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ. ಮತ್ತೆ ಬಂದು ನಮ್ಮನ್ನೇ ಸೇರುವುದು. ಅಷ್ಟಾದರೂ ನಮ್ಮಿಂದ ದೂರ ಹಾರಿ ಹೋದರೆ, ನಿರಾಶರಾಗದೆ ನಿರಾಳವಾಗಿ ನಿಟ್ಟುಸಿರು ಬಿಡಬೇಕು.
ನಾವು ನಮ್ಮನ್ನು ಗೌರವಿಸುವ ಭಾವಕ್ಕಷ್ಟೇ ಮಾನ್ಯತೆ ಕೊಟ್ಟಾಗ, ನಮ್ಮನ್ನು ನಾವೇ ಗೆದ್ದಂತೆ.
ಒಮ್ಮೊಮ್ಮೆ ಇಂತಹ ಸಂಬಂಧಗಳಿಂದ ಮನಸ್ಸಿನಾಳಕ್ಕೆ ಪೆಟ್ಟು ಬಿದ್ದರೆ, ಚೇತರಿಸಿಕೊಳ್ಳಲು ಆಗದಷ್ಟು ಕುಗ್ಗಿಹೋಗುವ ಸಂದರ್ಭದಲ್ಲಿ ನಮಗೆ ನಾವೇ ಧೈರ್ಯ ತುಂಬುವ ಕೆಲಸ ಮಾಡಬೇಕು.
ನಮ್ಮೊಳಗಿನ ಅಮೂಲ್ಯ ಪ್ರೀತಿಯನ್ನು ಅಯೋಗ್ಯರಿಗೆ ಹಂಚುವ ಬದಲು, ನಮಗಾಗಿ ಬದುಕು ಕೊಟ್ಟ ಹೆತ್ತವರನ್ನು ಸ್ಮರಿಸಿ ಅವರೊಂದಿಗೆ ಪ್ರೀತಿಯಿಂದ ಇರಬೇಕು.
ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸದೆ, ತಮ್ಮ ಸರ್ವಸ್ವವನ್ನೇ ಮಕ್ಕಳಿಗಾಗಿ ಮುಡಿಪಾಗಿಟ್ಟು, ತಾವು ತ್ಯಾಗಮಯಿ ಎಂದೆನಿಸಿಕೊಳ್ಳುವ ಅವರ ಪ್ರೀತಿಯೇ ನಿಸ್ವಾರ್ಥವಾದ ಪ್ರೀತಿ.
ಇದರ ಹೊರತಾಗಿ, ಪ್ರೀತಿ ಎಂಬ ಹೆಸರಿನಲ್ಲಿ ಉಂಟಾಗಿರುವ ಹಲವಾರು ಸಂಬಂಧಗಳು ಆರಂಭದಲ್ಲಿ ಬಲಿಷ್ಠವಾಗಿದ್ದರೂ, ಕಾಲಕ್ರಮೇಣ ಅತಿಯಾದ ವ್ಯಾಮೋಹದಿಂದ ಕುಸಿಯುತ್ತಾ ಹೋಗುವುದರಿಂದ, ಇಂತಹ ಪ್ರೀತಿಗಳು ತಾತ್ಕಾಲಿಕವಾಗಿರಬಹುದು.


ಹೌದು, ಮೊದಲು ನಮ್ಮ ಅಂತರಾತ್ಮದೊಳಗೆ ಹೊಕ್ಕಾಗಲೇ ಪ್ರೀತಿ ಏನು ಎಂಬುದರ ಅರಿವಾಗುವುದು.
ನಮ್ಮ ನಂಬಿಕೆಗಳ ಮೇಲೆ ಪ್ರೀತಿ ಇಡಬೇಕು. ಇದರಿಂದ ನಮ್ಮ ನಂಬಿಕೆಗಳು ಬಲವಾಗುತ್ತವೆ. ನಮ್ಮೊಳಗಿನ ಶಕ್ತಿಯ ಮೇಲೆ ಪ್ರೀತಿ ತೋರಬೇಕು. ಇದು ನಮ್ಮನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವ ಶಕ್ತಿಯಾಗುವುದು.
ನಮ್ಮ ದಿನನಿತ್ಯದ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ನಮ್ಮನ್ನು ಬೆಳೆಸುತ್ತಿರುವ ಈ ಹಸಿರು ವರ್ಣದ ಪ್ರಕೃತಿ ದೇವತೆಯ ಮೇಲೆ ಪ್ರೀತಿ ಉಂಟಾಗಬೇಕು. ನಮಗೆ ಅರಿವಿಲ್ಲದೆ, ಅವಳ ಮೇಲೆ ಧನ್ಯತೆಯ ಭಾವ ಉಂಟಾಗಿ ಪ್ರೀತಿ ಅರಳಲು ಸಾಧ್ಯವಾಗುವುದು.
ಮೂಕ-ಮುಗ್ಧ ಪ್ರಾಣಿ-ಪಕ್ಷಿಗಳಲ್ಲಿ ಪ್ರೀತಿ ಉಂಟಾಗಬೇಕು. ಅದು ನಿಯತ್ತಿನ ಪ್ರೀತಿಯನ್ನು ಮರಳಿ ನೀಡುವುದು.
ನೊಂದು ಬೆಂದುಕೊಂಡಿರುವ ಹಲವಾರು ಅಸಹಾಯಕ, ಮುಗ್ಧ ಮಾನವ ಜೀವಿಗಳೊಳಗೆ ಮಮಕಾರವು ಹುಟ್ಟಿ, ಅಲ್ಲಿ ಪ್ರೀತಿ ಹರಿಸಬೇಕು.
ಆಗ ನಮ್ಮ ಪ್ರೀತಿ ಕರುಣಾಜನಕ ಸ್ಥಿತಿಯಲ್ಲಿರುವವರನ್ನು ಎದ್ದು ನಿಲ್ಲಿಸಲು ಪ್ರೇರಣೆಯಾಗುವುದು. ನಮಗೂ ಆತ್ಮತೃಪ್ತಿಯಾಗುವುದು. ಇಲ್ಲೇ ನಾವು ಪ್ರೀತಿಯನ್ನು ಗೆದ್ದುಬಿಡಬಹುದು.
ಜಗತ್ತಿನಲ್ಲಿ ಯಾರನ್ನಾದರೂ, ಯಾವ ಜೀವಿಯನ್ನಾದರೂ ಪ್ರೀತಿಸಿ. ಆದರೆ ಅಲ್ಲಿ ಆದಷ್ಟು ನಿರೀಕ್ಷೆಗಳಿಗೆ ಕಡಿವಾಣ ಹಾಕಿ. ಯಾಕೆಂದರೆ, ಯಾವುದೇ ಒಂದು ಸ್ವಾರ್ಥ ಸಾಧನೆಗಾಗಿ ಮೂಡುವ ನಿರೀಕ್ಷೆಗಳು ಕೊನೆಗೆ ನಿರಾಶೆಯನ್ನೇ ಕೊಡಬಲ್ಲವು.
ನಮ್ಮನ್ನು ಕುಗ್ಗಿಸುವ ಪ್ರೀತಿ ಎಂದಿಗೂ ಪ್ರೀತಿಯಾಗದು. ನಮ್ಮನ್ನು ಹಂತ ಹಂತವಾಗಿ ಮೇಲೆತ್ತುವ ಪ್ರೀತಿಯನ್ನು ಎಂದಿಗೂ ದೂರವಿಡಬಾರದು.
ಜೊತೆಗೆ, ನಾವು ಮಾಡುವ ಸೇವೆ ಎನ್ನುವ ನಿಸ್ವಾರ್ಥ ಪ್ರೀತಿಯೇ ನಾವು ಈ ಜಗತ್ತಿಗೆ ನೀಡುವ ಅತ್ಯಮೂಲ್ಯ ಕೊಡುಗೆ. ಬದುಕಿಗೂ ಒಂದು ಸಾರ್ಥಕತೆಯ ಭಾವ ಮೂಡುವುದು. ನಮ್ಮ ಹುಟ್ಟಿಗೂ ಹಾಗೂ ಪ್ರೀತಿ ಎನ್ನುವ ಹೆಸರಿಗೂ ಒಂದು ಸುಂದರ ಅರ್ಥ ಸಿಗುವುದು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಹಿಳಾ ವಿವಿ: ಇಂದು ರಾಷ್ಟ್ರೀಯ ವಿಚಾರ ಸಂಕಿರಣ

ಜೆನ್–ಜಿ ಯುವಜನಾಂಗ: ಒಂದು ಜಿಜ್ಞಾಸೆ!

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 29,2026

₹೨,೫೦೦ ಪರಿಹಾರಕ್ಕೆ ರೈತರ ಆಕ್ರೋಶ :ವಿನೂತನ ಪ್ರತಿಭಟನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಪ್ರೀತಿ.. ಹಕ್ಕಲ್ಲ, ಒಂದು ಸುಂದರ ಭಾವನೆ
    In ವಿಶೇಷ ಲೇಖನ
  • ಮಹಿಳಾ ವಿವಿ: ಇಂದು ರಾಷ್ಟ್ರೀಯ ವಿಚಾರ ಸಂಕಿರಣ
    In Uncategorized
  • ಜೆನ್–ಜಿ ಯುವಜನಾಂಗ: ಒಂದು ಜಿಜ್ಞಾಸೆ!
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 29,2026
    In ದಿನಪತ್ರಿಕೆ
  • ₹೨,೫೦೦ ಪರಿಹಾರಕ್ಕೆ ರೈತರ ಆಕ್ರೋಶ :ವಿನೂತನ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ನೇಮಕಾತಿ ಪರೀಕ್ಷೆ ಸುಸೂತ್ರ ನಿರ್ವಹಣೆಗೆ ಡಿಸಿ ಡಾ.ಆನಂದ ಕೆ ಸೂಚನೆ
    In (ರಾಜ್ಯ ) ಜಿಲ್ಲೆ
  • ರೈತರ ಆರ್ಥಿಕ ಸ್ವಾವಲಂಬನೆಗೆ ಹೊಸ ಹೆಜ್ಜೆ
    In (ರಾಜ್ಯ ) ಜಿಲ್ಲೆ
  • ಕ್ರೀಡೆ: ಶಾಕಂಬರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಥಮ
    In (ರಾಜ್ಯ ) ಜಿಲ್ಲೆ
  • ಸಹಕಾರಿ ಸಂಘಗಳ ಪ್ರಗತಿಯಲ್ಲಿ ರೈತರ ಸಹಕಾರ ಮುಖ್ಯ
    In (ರಾಜ್ಯ ) ಜಿಲ್ಲೆ
  • ಸಹಕಾರ, ತಾಳ್ಮೆ, ಭಾತೃತ್ವದಿಂದ ಸಂಘ ಪ್ರಗತಿ ಕಾಣಲು ಸಾಧ್ಯ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.