ಬಸವನಬಾಗೇವಾಡಿ: ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಭಾನುವಾರ ಸಂಜೆ ವೀರರಾಣಿ ಕಿತ್ತೂರು ಚನ್ನಮ್ಮಳ ೨೪೫ ನೇ ಜಯಂತ್ಯೋತ್ಸವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಕಾರ್ಯಕ್ರಮದ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಾಣಿ ಚನ್ನಮ್ಮಳ ಭಾವಚಿತ್ರದ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ರಾಣಿ ಚನ್ನಮ್ಮಳ ವೇಷಧಾರಿ ಮಕ್ಕಳು ಗಮನ ಸೆಳೆದರು.
ಗ್ರಾಮದ ಚನ್ನಮ್ಮ ವೃತ್ತದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಹೋರಾಡಿ ಶೌರ್ಯ ಮೆರೆದ ಸ್ತ್ರೀರತ್ನ ಕಿತ್ತೂರು ರಾಣಿ ಚನ್ನಮ್ಮ. ಬ್ರಿಟಿಷರ ಅನ್ಯಾಯದ ವಿರುದ್ಧ ಏಕಾಂಗಿಯಾಗಿ ಹೋರಾಡಿದ ದಿಟ್ಟ ಮಹಿಳೆ. ಜಾತಿ,ಮನೆತನಕ್ಕಾಗಿ ಹೋರಾಟ ಮಾಡದೇ ಜನತೆಯ ರಕ್ಷಣೆಗಾಗಿ, ಸ್ವಾತಂತ್ರಕ್ಕಾಗಿ ಹೋರಾಡಿದ ಧೀರ ಮಹಿಳೆ ಎಂದ ಅವರು, ಮಕ್ಕಳಲ್ಲಿ ಧೈರ್ಯ, ತ್ಯಾಗದ ಮನೋಭಾವನೆ ಬೆಳೆಸಬೇಕು. ಶಾಲಾ ಪಠ್ಯಪುಸ್ತಕಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಾಹಸಿ ಕಥೆಗಳು ಬರಬೇಕು. ಮಕ್ಕಳಲ್ಲಿ ಸ್ವಾಭಿಮಾನ, ದೇಶಭಕ್ತಿ ಬೆಳೆಸಿದರೆ ದೇಶಕ್ಕೆ ಭವಿಷ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಸುಭಾಷ ಕಲ್ಯಾಣಿ, ಮಲ್ಲುಗೌಡ ಇಂಡಿ, ಬಸಪ್ಪ ದೊಡ್ಡಮನಿ, ಮಲಕು ಮಸಬಿನಾಳ, ರಾಜು ಸಂಕಣ್ಣವರ, ನಂದಬಸು ಆಸಂಗಿ, ಸುಭಾಷ ಅರವಾಳ, ಗುರು ಓಜಿ, ರಮೇಶ ಮಸಬಿನಾಳ, ಕುಮಾರ ಬೆಲ್ಲದ, ಅನಿಲ ಕಲ್ಯಾಣಿ, ಶರಣು ಯಾತದ, ರವಿ ಬಿರಾದಾರ, ರಾಹುಲ ಕಲಗೊಂಡ, ಬಸು ಮನಗೂಳಿ, ದೇವರಾಜ ಮಸಳಿ ಇತರರು ಇದ್ದರು.
Related Posts
Add A Comment