ವಿಜಯಪುರ: ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ ವಿಜಯಪುರ ವಲಯ ಕಚೇರಿಯಿಂದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯ ತಾಂಡಾಗಳಲ್ಲಿನ ನಿರುದ್ಯೋಗಿ ಮಹಿಳೆಯರಿಗೆ ಸಾಂಪ್ರಾದಾಯಿಕ ಕಸೂತಿ ಮತ್ತು ಪೂರಕ ಹೊಲಿಗೆ ತರಬೇತಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಕಾರ್ಯಕ್ರಮದಡಿ ಅರ್ಹ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಸೂಕ್ತ ದಾಖಲೆಗಳೊಂದಿಗೆ ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಬಂಜಾರಾ ಭವನ, ಕ್ರೀಡಾ ವಸತಿ ನಿಲಯದ ಹಿಂದುಗಡೆ, ಬಂಜಾರಾ ಕ್ರಾಸ್ ಹತ್ತಿರ, ರಾಜೇಂದ್ರ ನಗರ ವಿಜಯಪುರ ಕಚೇರಿಗೆ ದಿನಾಂಕ : ೦೪-೧೧-೨೦೨೩ ರೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ: ೦೮೩೫೨-೨೬೦೯೯೮ ಸಂಖ್ಯೆಗೆ ಸಂಪರ್ಕಿಸುವಂತೆ ನಿಗಮದ ಅಭಿವೃದ್ದಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment