ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ೨೦೨೬-೨೭ನೇ ಸಾಲಿಗೆ ಒಕ್ಕಲಿಗ ಸಮುದಾಯದ ಅರ್ಹರಿಂದ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಸಾಲ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನಿಸಿದೆ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ: ೨.೦೦ ಲಕ್ಷಗಳ ಘಟಕ ವೆಚ್ಚದಲ್ಲಿ ಗರಿಷ್ಠ ೩೦,೦೦೦ ಸಹಾಯಧನ ಹಾಗೂ ಶೇ. ೪ರ ಬಡ್ಡಿದರದಲ್ಲಿ ೧.೭೦ ಲಕ್ಷ ಸಾಲ ಸೌಲಭ್ಯ ನೀಡಲಾಗುವುದು. ವಯೋಮಿತಿ: ೧೮-೫೫ ವರ್ಷದೊಳಗಿರಬೇಕು.
ಗಂಗಾ ಕಲ್ಯಾಣ ನೀರಾವರಿ ಯೋಜನೆ: ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ೩.೭೫ ಲಕ್ಷ ಘಟಕ ವೆಚ್ಚದಲ್ಲಿ ೩.೨೫ ಲಕ್ಷ ಸಹಾಯಧನ ನೀಡಲಾಗುವುದು. ಸ್ವಾವಲಂಬಿ ಸಾರಥಿ ಯೋಜನೆ: ೪-ಚಕ್ರ ವಾಹನ ಖರೀದಿಗಾಗಿ ಸಾಲದ ಶೇ. ೫೦ ರಷ್ಟು (ಗರಿಷ್ಠ ೩.೦೦ ಲಕ್ಷ) ಸಹಾಯಧನ ಮಂಜೂರು (ವಯೋಮಿತಿ: ೨೧-೪೫ ವರ್ಷ). ಸ್ವಯಂ ಉದ್ಯೋಗ ಸಾಲ ಯೋಜನೆ (ಬ್ಯಾಂಕುಗಳ ಸಹಯೋಗದೊಂದಿಗೆ): ಬ್ಯಾಂಕ್ ಸಾಲ ಪಡೆಯುವವರಿಗೆ ಶೇ. ೨೦ ರಷ್ಟು (ಗರಿಷ್ಠ ೧.೦೦ ಲಕ್ಷ) ಸಹಾಯಧನ ನೀಡಲಾಗುವುದು. ಶೈಕ್ಷಣಿಕ ಸಾಲ ಯೋಜನೆ: ದೇಶೀಯ ಉನ್ನತ ಶಿಕ್ಷಣ: ಶೇ.೨ರ ಬಡ್ಡಿದರದಲ್ಲಿ ಕೋರ್ಸ್ ಅವಧಿಗೆ ಗರಿಷ್ಠ ೪.೦೦ ಲಕ್ಷದಿಂದ ೫.೦೦ ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುವುದು. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ: ಕ್ಯೂಎಸ್ ವರ್ಡ್ಲ್ ಯುನಿವರ್ಸಿಟಿ ರ‍್ಯಾಕಿಂಗ್ ೧೦೦೦ ರೊಳಗಿನ ವಿದೇಶಿ ವಿವಿಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಶೂನ್ಯ ಬಡ್ಡಿದರದಲ್ಲಿ ಗರಿಷ್ಠ ೫೦.೦೦ ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುವುದು.
ಸ್ವಾತಂತ್ರ‍್ಯ ಅಮೃತ ಮುನ್ನಡೆ ಯೋಜನೆ: ಉದ್ಯೋಗಾಕಾಂಕ್ಷಿಗಳಿಗೆ ಐಟಿಐ, ಜಿಟಿಟಿಸಿ,ವಿಟಿಯು ಮುಂತಾದ ಸಂಸ್ಥೆಗಳ ಮೂಲಕ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗವುದು.
ಅರ್ಜಿದಾರರು ಒಕ್ಕಲಿಗ ಸಮುದಾಯಕ್ಕೆ (ಪ್ರವರ್ಗ-೩ಎ) ಸೇರಿರಬೇಕು. ಕುಟುಂಬದ ವಾರ್ಷಿಕ ಆದಾಯ ಮಿತಿ ಗ್ರಾಮೀಣ ಪ್ರದೇಶದವರಿಗೆ ೯೮,೦೦೦ ರೂ. ಹಾಗೂ ನಗರ ಪ್ರದೇಶದವರಿಗೆ ೧,೨೦,೦೦೦ ರೂ. ಇರಬೇಕು (ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಅವಕಾಶವಿದೆ). ಅರ್ಜಿ ಸಲ್ಲಿಕೆಗೆ ಸೆ. ೩೦ ಕೊನೆಯ ದಿನಾಂಕ. ಆಸಕ್ತರು ಸೇವಾ ಸಿಂಧು ಪೋರ್ಟಲ್ (ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್) ಮೂಲಕ ಅರ್ಜಿ ಸಲ್ಲಿಸಬಹುದು.
ಸ್ವಾತಂತ್ರ‍್ಯ ಅಮೃತ ಮುನ್ನಡೆ ಯೋಜನೆಗೆ [hಣಣಠಿs://ತಿತಿತಿ.ಞಚಿushಚಿಟಞಚಿಡಿ.ಛಿom](hಣಣಠಿs://ತಿ
ತಿತಿ.ಞಚಿushಚಿಟಞಚಿಡಿ.ಛಿom) ತಂತ್ರಾAಶದಲ್ಲಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ನಿಗಮದ ಅಧಿಕೃತ ವೆಬ್‌ಸೈಟ್: hಣಣಠಿs://ಞvಛಿಜಛಿ.ಞಚಿಡಿಟಿಚಿಣಚಿಞಚಿ
.gov.iಟಿ ಅಥವಾ ನಿಗಮದ ದೂರವಾಣಿ ಸಂಖ್ಯೆ: ೦೮೩೫೨-೨೫೮೧೨೮ ಅಥವಾ ಜಿಲ್ಲಾ ವ್ಯವಸ್ಥಾಪಕರು, ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ವಿಜಯಪುರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಒಕ್ಕಲಿಗ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.
