ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ದೇಶದ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಪಟ್ಟಣದ ಕಲ್ಮೇಶ್ವರನಿಗೆ ಅಭಿಷೇಕ ನೆರವೇರಿಸಿ ಪೂಜೆ ಸಲ್ಲಿಸುವುದರ ಮೂಲಕ ಅವರ ಆಯುಷ್ಯ, ಆರೋಗ್ಯ, ಯಶಸ್ಸಿಗಾಗಿ ಪ್ರಾರ್ಥಿಸಿದರು.
ಪಟ್ಟಣದ ಕಲ್ಮೇಶ್ವರ ದೇವಸ್ಥಾನಕ್ಕೆ ಗುರುವಾರ ಬೆಳಿಗ್ಗೆ ೬ ಗಂಟೆಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ನರೇಂದ್ರ ಮೋದಿಜೀಯವರ ಅಭಿಮಾನಿಗಳು ಶಾಸ್ತ್ರೋಕ್ತವಾಗಿ ಅಭಿಷೇಕ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ಜಂಗಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಸೋಮಶೇಖರ ಹಿರೇಮಠ, ಯುವ ಮೋರ್ಚಾ ಉಪಾಧ್ಯಕ್ಷ ಕಲ್ಮೇಶ ಬುದ್ನಿ, ಮಂಡಲ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದಾರ(ಡೋಣಿ ಬೂದಿಹಾಳ) ಮಾತನಾಡಿ, ಮೋದಿಯವರು ದೇಶ ಕಂಡ ಪ್ರಧಾನಿಗಳಲ್ಲಿ ತಮ್ಮ ವಿಚಾರಧಾರೆ, ಯೋಜನೆಗಳಿಂದ ವಿಶಿಷ್ಟ ಹಾಗೂ ವಿಭಿನ್ನ ಸ್ಥಾನವನ್ನು ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ದೇಶ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಮೋದಿಜೀ ಇಂದು ವಿಶ್ವದ ಎಲ್ಲ ದೇಶಗಳ ನಾಯಕರ ವಿಶ್ವಾಸರ್ಹತೆ ಹೊಂದಿದ ಏಕೈಕ ನಾಯಕರಾಗಿ ಗುರುತಿಸಲ್ಪಟ್ಟಿದ್ದಾರೆ. ಇಂಥ ವ್ಯಕ್ತಿಯ ನಾಯಕತ್ವ ದೇಶಕ್ಕೆ ಇನ್ನೂ ಅಗತ್ಯವಾಗಿದೆ. ಆದ್ದರಿಂದ ಇವರ ನಾಯಕತ್ವದಲ್ಲಿ ದೇಶ ಇನ್ನೂ ಹೆಚ್ಚಿನ ಪ್ರಗತಿ ಕಾಣಲಿ ಎಂದು ಪ್ರಾರ್ಥಿಸಿದರು.
ಶ್ರೀಶೈಲ ಯಂಭತ್ನಾಳ, ಚೇತನ ಇಂಡಿ, ಶಿವರಾಜ ತಳವಾರ, ರಮೇಶ ಈಳಗೇರ, ಮಲ್ಲಿಕಾರ್ಜುನ ಜಡಿಮಠ, ವಿಠ್ಠಲ ಯಂಕಂಚಿ, ಮಲ್ಕು ಬಾಗೇವಾಡಿ, ಹಣಮಂತ ಹೀರಾಪೂರ, ಪ್ರವೀಣ ದೇಸಾಯಿ, ಬಾಪುಗೌಡ ಪಾಟೀಲ, ಸುಮೀತ್ ಬುದ್ನಿ, ರಾಘವೇಂದ್ರ ಸಬ್ಬಸಗಿ, ವಿಶಾಲ್ ಭಾಸುತ್ಕರ, ಚಿನ್ನು ದಾನಗೊಂಡ, ಸಾಗರ ತೋಟದ, ಸುರೇಶ ಕುಂಬಾರ, ಇದ್ದರು.

