ಕರ್ನಾಟಕ ಬಾಲವಿಕಾಸ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಸಂಗಮೇಶ್ವರ ಬಬಲೇಶ್ವರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಾಂತವೀರ ಶ್ರೀಗಳು ೨೦ ವರ್ಷ ಅಂಧರಾಗಿದ್ದರೂ ಸದ್ಭಕ್ತರ ಅಂತರಂಗದ ಬೆಳಕಾಗಿದ್ದರು. ಇಲ್ಲಿಯ ಭಕ್ತರಲ್ಲಿ ಆಧ್ಯಾತ್ಮಿಕ ತೆಯ ಹೊಳಹನ್ನು ಮೂಡಿಸಿದ ಇಂತಹ ಸತ್ಪುರುಷರ ಆಶೀರ್ವಾದದ ಬಲದ ಈ ಬಬಲೇಶ್ವರ ಭಕ್ತಿಯ ಪುರವಾಗಿದೆ, ಹೃದಯವಂತರ ಬೀಡಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಸಂಗಮೇಶ್ವರ ಬಬಲೇಶ್ವರ ಅಭಿಪ್ರಾಯಪಟ್ಟರು.
ಜಿಲ್ಲೆಯ ಬಬಲೇಶ್ವರದ ಶ್ರೀ ಗುರು ಗುರುಪಾದೇಶ್ವರ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡ ಶ್ರೀಗಳ ವಜ್ರಮಹೋತ್ಸವ ಹಾಗೂ ಗುರು ಪಟ್ಟಾಧಿಕಾರ ಮಹೋತ್ಸವದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಭಕ್ತಿಭಂಡಾರಿ ಬಸವಣ್ಣನವರ ನಂತರ ಈ ರಾಜ್ಯದಲ್ಲಿ ಎಲ್ಲಾದರೂ ಎಲ್ಲ ಭಕ್ತಿಯ ಮಾರ್ಗಗಳು ಸೇರಿದ್ದರೆ, ಅದು ಬದುಕಿನ ಸಾರ್ಥಕ್ಯ ತಂದುಕೊಡುತ್ತಿದ್ದರೆ ಅದು ಬಬಲೇಶ್ವರದ ಗುರುಪಾದೇಶ್ವರ ಕತೃಗದ್ದುಗೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ನಾಡಿನ ಹಲವು ಹರಗುರು ಚರಮೂರ್ತಿಗಳು ಪಾಲ್ಗೊಂಡಿದ್ದರು.

