ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ವಿಶ್ವಸೃಷ್ಟಿಯ ವಿಶ್ವಕರ್ಮರು ಪರಬ್ರಹ್ಮ ಸ್ವರೂಪಿಯಾಗಿ ಎಲ್ಲರಿಗೂ ಮಾರ್ಗದರ್ಶನ ನೀಡಲಿ ಎಂದು ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎನ್.ಬಸವರಡ್ಡಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಗುರುವಾರ ಜರುಗಿದ ವಿಶ್ವಕರ್ಮ ಜಯಂತ್ಯೋತ್ಸವದಲ್ಲಿ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ವಿಶ್ವಕರ್ಮ ಸಮುದಾಯ ಕಲೆ ಮತ್ತು ಕಾಯಕಕ್ಕೆ ಹೆಸರಾಗಿದ್ದು, ಸಮಾಜದ ಅವಿಭಾಜ್ಯ ಅಂಗವೆನಿಸಿದೆ. ವಿಶ್ವಕರ್ಮ ಸಮುದಾಯದ ಪ್ರತಿಯೊಬ್ಬ ವ್ಯಕ್ತಿ ಕಲೆಯ ಸೂಕ್ಷ್ಮತೆಯನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ತನ್ನದೇಯಾದ ಕೊಡುಗೆ ನೀಡುವುದರ ಮೂಲಕ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ ಎಂದರು.
ತಹಶೀಲ್ದಾರ ನಿಂಗಣ್ಣ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.
ಗ್ರೇಡ್-೨ ತಹಶೀಲ್ದಾರ ಎಂ.ಜಿ.ಬಿರಾದಾರ, ಶಿರಸ್ತೇದಾರ ಸುರೇಶ ಮ್ಯಾಗೇರಿ, ಮೂರುಜಾವದಮಠದ ವಿಶ್ವನಾಥ ಸ್ವಾಮೀಜಿ, ನಾಗಯ್ಯ ಮೂರುಜಾವದಮಠ, ಮೋನಯ್ಯ ಪಂಚಾಳಮಠ ವಿಶ್ವಕರ್ಮ ಸಂಘದ ಕಾರ್ಯದರ್ಶಿ ಸುರೇಶ ಬಡಿಗೇರ, ಮಹಾರುದ್ರ ಕಕ್ಕಳಮೇಲಿ, ಮಹೇಶ ದೊಡಮನಿ, ರಾಜು ಮಿರಗಿ, ಪ್ರಶಾಂತ ದೊಡಮನಿ, ಪ್ರಶಾಂತ ಬಡಿಗೇರ, ಸಿಬ್ಬಂದಿ ಶಿಲ್ಪಾ ಶಿಂಪಿ, ರಾಜು ಕಂಠಿ, ಸಂತೋಷ ತಳವಾರ, ಸುರೇಶ ಮಣೂರ ಇದ್ದರು.

