Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಆಂಗ್ಲರನ್ನು ಸೋಲಿಸಿದ ಮೊದಲ ರಾಣಿ ಕಿತ್ತೂರು ಚೆನ್ನಮ್ಮ

ಅಂತರಾಷ್ಟ್ರೀಯ ಕ್ರೀಡೆಯಾಗಿ ಬೆಳೆದ ಕುಸ್ತಿ :ಉಮಾಶ್ರೀ

ವಿಜಯಪುರ ಜಿಲ್ಲಾ ಸಹಕಾರ ಯುನಿಯನ್ ವಾರ್ಷಿಕ ಮಹಾಸಭೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಆಂಗ್ಲರನ್ನು ಸೋಲಿಸಿದ ಮೊದಲ ರಾಣಿ ಕಿತ್ತೂರು ಚೆನ್ನಮ್ಮ
(ರಾಜ್ಯ ) ಜಿಲ್ಲೆ

ಆಂಗ್ಲರನ್ನು ಸೋಲಿಸಿದ ಮೊದಲ ರಾಣಿ ಕಿತ್ತೂರು ಚೆನ್ನಮ್ಮ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಆರ್.ಸಿ.ಯು ಕಿತ್ತೂರು ರಾಣಿ ಚೆನ್ನಮ್ಮ ಅಧ್ಯಯನ ಪೀಠದಿಂದ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡಾ.ಎಸ್.ಎಮ್.ಗಂಗಾಧರಯ್ಯ ಹೇಳಿಕೆ

ಉದಯರಶ್ಮಿ ದಿನಪತ್ರಿಕೆ

ತಿಕೋಟಾ: ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮೂಲ ತಳಪಾಯ ಹಾಕಿದ ಕೀರ್ತಿ ಕಿತ್ತೂರು ಸಂಸ್ಥಾನದ ರಾಣಿ ಚೆನ್ನಮ್ಮಳಿಗೆ ಸಲ್ಲುತ್ತದೆ ಎಂದು ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿರ್ದೇಶಕ, ರಾಣಿ ಚೆನ್ನಮ್ಮ ಅಧ್ಯಯನ ಪೀಠದ ಅಧ್ಯಕ್ಷ ಡಾ.ಎಸ್.ಎಮ್.ಗಂಗಾಧರಯ್ಯ ಹೇಳಿದರು.
ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ತಿಕೋಟಾ ಇವರ ಸಹಯೋಗದಲ್ಲಿ “ಕಿತ್ತೂರು ಸಂಸ್ಥಾನ ಮತ್ತು ರಾಣಿ ಚನ್ನಮ್ಮನ ಸ್ವಾತಂತ್ರ್ಯ ಹೋರಾಟ” ಎಂಬ ವಿಷಯದ ಕುರಿತು ಬುಧವಾರ ಆಯೋಜಿಸಿದ್ದ ಸರಣಿ ಉಪನ್ಯಾಸದ ಮೊದಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಣಿ ಚೆನ್ನಮ್ಮ ಒಬ್ಬ ದಿಟ್ಟ ಮಹಿಳೆ. ಅಲ್ಲದೇ ದಿಟ್ಟ ಹೋರಾಟಗಾರ್ತಿ. ಇಲ್ಲ ಸಲ್ಲದ ನೆಪದಿಂದ, ಷರತ್ತುಗಳ ಕಾರಣವಾಗಿ ಕಿತ್ತೂರು ಸಂಸ್ಥಾನದ ಮೇಲೆ ಹಿಡಿತ ಸಾಧಿಸಲು ನಿರಂತರ ಪ್ರಯತ್ನ ಮಾಡುತ್ತಲೇ ಬಂದ ಬ್ರಿಟೀಷ ಅಧಿಕಾರಿಗಳಿಗೆ ತನ್ನ ಚತುರ ಸೇನಾ ಬಲದಿಂದ ಸೋಲಿನ ರುಚಿ ಉಣ್ಣಿಸಿದ ಅಪ್ರತಿಮ ಹೋರಾಟಗಾರ್ತಿ. ಆದರೆ ಒಳ ಶತ್ರುಗಳ ಸಂಚಿಗೆ ಬಲಿಯಾದ ರಾಣಿ ಚೆನ್ನಮ್ಮ ಬ್ರಿಟಿಷರ ಬಂಧನಕ್ಕೆ ಒಳಗಾಗಿ ವೀರ ಮರಣಕ್ಕೆ ತುತ್ತಾಗುವ ಅನಿವಾರ್ಯ ಒದಗಿ ಬಂದಿತು. ನಾಡಿನ ಅಭಿಮಾನ, ಜನರ ಪ್ರೀತಿ ಸ್ವಾತಂತ್ರ್ಯದ ಬದುಕಿಗಾಗಿ ರಾಣಿ ಚೆನ್ನಮ್ಮ ಮಾಡಿರುವ ಹೋರಾಟ, ತ್ಯಾಗ , ಶೌರ್ಯ ತಮಗೆಲ್ಲರಿಗೂ ಪ್ರೇರಣಾದಾಯಕವಾಗಿದೆ. ತಾವೆಲ್ಲ ರಾಣಿ ಚೆನ್ನಮ್ಮಳ ಜೀವನ ಸಾಧನೆಗಳ ಬಗೆಗೆ ತಿಳಿದು ತಮ್ಮ ಜೀವನದಲ್ಲಿ ರಾಣಿಯ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದಕ್ಕೂ ಮುನ್ನ ಹಿರಿಯ ಪ್ರಾಧ್ಯಾಪಕ ಕೆ.ಎನ್. ದೊಡಮನಿ ಅವರು ಕಿತ್ತೂರು ಸಂಸ್ಥಾನದ ಕಥೆ-ವ್ಯಥೆಯ ಕುರಿತು ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಎಸ್.ತೋಳನೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದೇ ವೇಳೆ ವಿಶ್ವ ಓಜೋನ್ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ
ಪ್ರೊ.ಎಸ್.ಎಮ್.ಗಂಗಾಧರಯ್ಯ, ಪ್ರೊ.ಕೆ.ಎನ್.ದೊಡಮನಿ, ಪ್ರೊ .ಪಿ.ಎಸ್.ತೋಳನೂರ, ಮಹಾವಿದ್ಯಾಲಯದ
ಐಕ್ಯೂಎಸಿ ಸಂಯೋಜಕ ಪ್ರೊ.ಬಿ.ಎಸ್.ಬೆಳಗಲಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ದೊಡಮನಿ, ಇತಿಹಾಸ ವಿಭಾಗದ ಮುಖ್ಯಸ್ಥ ನಾಗರಾಜ ನರಳೆ, ಎನ್. ಎಸ್.ಎಸ್.ಅಧಿಕಾರಿಗಳಾದ ಡಾ.ರವೀಚಂದ್ರ ವಾಲೀಕಾರ, ಡಾ.ಎಮ್.ಬಿ.ಹೂಗಾರ, ಪ್ರೊ . ಎಸ್.ಬಿ.ಉಪ್ಪಾರ, ಪ್ರೊ.ಎಸ್.ಎಲ್.ರಾಠೋಡ, ಪ್ರೊ.ಸುಶಾಂತ ಜವನರ, ದೇವರಾಜ ಪಾಟೀಲ, ಮಂಜುನಾಥ ಕಾಸೆ, ಪ್ರೊ. ಎಲ್.ಬಿ.ದೇಸಾಯಿ, ಉಪನ್ಯಾಸಕಿ ಲಕ್ಷ್ಮೀ ಕಾತ್ರಾಳ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ.ಶ್ರೀನಿವಾಸ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು, ನಾಗರಾಜ ನರಳೆ ವಂದಿಸಿದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಂತರಾಷ್ಟ್ರೀಯ ಕ್ರೀಡೆಯಾಗಿ ಬೆಳೆದ ಕುಸ್ತಿ :ಉಮಾಶ್ರೀ

ವಿಜಯಪುರ ಜಿಲ್ಲಾ ಸಹಕಾರ ಯುನಿಯನ್ ವಾರ್ಷಿಕ ಮಹಾಸಭೆ

ದೇಶಿ ಕ್ರೀಡೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಅಗತ್ಯವಿದೆ

ಸಾಮಾನ್ಯ ಪ್ರಜೆಗೂ ಅಧಿಕಾರ ನೀಡಿದ್ದು ಸಂವಿಧಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಆಂಗ್ಲರನ್ನು ಸೋಲಿಸಿದ ಮೊದಲ ರಾಣಿ ಕಿತ್ತೂರು ಚೆನ್ನಮ್ಮ
    In (ರಾಜ್ಯ ) ಜಿಲ್ಲೆ
  • ಅಂತರಾಷ್ಟ್ರೀಯ ಕ್ರೀಡೆಯಾಗಿ ಬೆಳೆದ ಕುಸ್ತಿ :ಉಮಾಶ್ರೀ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲಾ ಸಹಕಾರ ಯುನಿಯನ್ ವಾರ್ಷಿಕ ಮಹಾಸಭೆ
    In (ರಾಜ್ಯ ) ಜಿಲ್ಲೆ
  • ದೇಶಿ ಕ್ರೀಡೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಅಗತ್ಯವಿದೆ
    In (ರಾಜ್ಯ ) ಜಿಲ್ಲೆ
  • ಸಾಮಾನ್ಯ ಪ್ರಜೆಗೂ ಅಧಿಕಾರ ನೀಡಿದ್ದು ಸಂವಿಧಾನ
    In (ರಾಜ್ಯ ) ಜಿಲ್ಲೆ
  • ವೃಕ್ಷಥಾನ್ ಹೆರಿಟೇಜ್ ರನ್ ಗೆ ಜಾಗತಿಕ ಮನ್ನಣೆ
    In (ರಾಜ್ಯ ) ಜಿಲ್ಲೆ
  • ಸೇನಾಧಿಕಾರಿಯಾಗಲು ಸತತ ಅಧ್ಯಯನ ಮತ್ತು ಪರಿಶ್ರಮ ಅಗತ್ಯ
    In (ರಾಜ್ಯ ) ಜಿಲ್ಲೆ
  • ರಾಣಿ ಚನ್ನಮ್ಮಳ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ
    In (ರಾಜ್ಯ ) ಜಿಲ್ಲೆ
  • ಬೆಳಗಾವಿ ಮಾಹಿತಿ ಆಯುಕ್ತರಿಂದ ದಂಡಕ್ಕೆ ಆದೇಶ
    In (ರಾಜ್ಯ ) ಜಿಲ್ಲೆ
  • ಯಾರಿಗೆ ಬಂತು? ಎಲ್ಲಿಗೆ ಬಂತು? ಹೈ.ಕ ವಿಮೋಚನಾ ದಿನಾಚರಣೆ ಸ್ವಾತಂತ್ರ್ಯ?
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.