ಚಿಮ್ಮಡ ಗ್ರಾಮದಲ್ಲಿ ಗರಡಿಮನೆ ನಿರ್ಮಾಣಕ್ಕೆ ಭೂಮಿಪೂಜೆ
ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮೀಣ ಭಾಗಗಳಲ್ಲಿ ಅನಾದಿಕಾಲದಿಂದಲೂ ಆಡುತ್ತಾ ಬಂದಿರುವ ದೇಶದ ಸಾಂಸ್ಕೃತಿಕ ಕ್ರೀಡೆಯಾದ ಕುಸ್ತಿ ಕ್ರೀಡೆ ಬರೀ ದೈಹಿಕ ಸಾಮರ್ಥ್ಯ ಬೆಳೆಸಿಕೊಳ್ಳುವ ಕ್ರೀಡೆಯಾಗಿರದೆ, ಅಂತರಾಷ್ಟ್ರೀಯ ಸ್ಪರ್ಧಾತ್ಮಕ ಕ್ರೀಡೆಯಾಗಿ ಬೆಳೆದುಬಂದಿದೆ ಎಂದು ವಿಧಾನಪರಿಷತ್ ಉಪ ಸಭಾಪತಿ ಉಮಾಶ್ರೀ ಹೇಳಿದರು.
ಗ್ರಾಮದ ಭೀಮ ನಗರ (ಜನತಾ ಪ್ಲಾಟ್) ದಲ್ಲಿ ೨೦೨೩-೨೪ನೇ ಸಾಲಿನ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಹತ್ತು ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಗರಡಿಮನೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗರಡಿಮನೆ ಎಂದರೆ ಶಿಸ್ತು, ಸಂಯಮ, ದೈಹಿಕ ಹಾಗೂ ಮಾನಸಿಕವಾಗಿ ಸಧ್ರಢತೆಯನ್ನು ಪಡೆಯುವ ಶಾಲೆಯಾಗಿದ್ದು ಸ್ಪರ್ದಾತ್ಮಕ ಮನೋಭಾವವನ್ನು ಗಟ್ಟಿಗೊಳಿಸಿಕೊಳ್ಳಲು ಪ್ರತಿಯೊಬ್ಬ ಯುವಕ ಇದರ ಸಹಾಯ ಪಡೆದುಕೊಂಡು ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಬೇಕಾಗಿದೆ ಎಂದು ಹೇಳಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ತೇರದಾಳ ಮತಕ್ಷೇತ್ರ ಕುಸ್ತಿ ಕ್ರೀಡೆಗೆ ಹೆಸರುವಾಶಿಯಾಗಿದ್ದು, ರಾಷ್ಟ್ರಮಟ್ಟದಲ್ಲಿ ಈ ಭಾಗದ ಕುಸ್ತಿಪಟುಗಳು ಮಿಂಚುತಿದ್ದಾರೆ, ಗ್ರಾಮದಲ್ಲಿ ಈಗಾಗಲೇ ಎರಡು ಗರಡಿ ಮನೆಗಳಿದ್ದು ಪರಸ್ಪರ ಸಹಕಾರದೊಂದಿಗೆ ಸಾಂಸ್ಕೃತಿಕ ಕ್ರೀಡೆಯಾಗಿರುವ ಕುಸ್ತಿ ಕ್ರೀಡೆಯಲ್ಲಿ ಆಸಕ್ತಿಯಿಂದ ಆಡುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಹಾರೈಸಿದರು.
ಕಾಂಗ್ರೆಸ್ ಗ್ರಾಮಘಟಕದ ಅಧ್ಯಕ್ಷ ಉಮೇಶ ಪೂಜಾರಿ, ಮಹಾಲಿಂಗ ಬಳಗಾರ, ಶ್ರೀಶೈಲ ಮಠಪತಿ, ಅಶೋಕ ಚಿಮ್ಮಡ, ಅಂಬೇಡ್ಕರ ಸಂಘದ ಅಧ್ಯಕ್ಷ ದಶರಥ ಗೋವಿಂದಗೋಳ, ಪ್ರಭು ದೊಡವಾಡ, ಭೀಮು ಶೀಡ್ಲೆವ್ಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಪೂಜಾರಿ ನಿರ್ವಹಿಸಿದರು.

