ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಕುಪಕಡ್ಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಓಝೋನ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಓಝೋನ (OZONE) ಅಕ್ಷರಗಳ ರೂಪದಲ್ಲಿ ಮಕ್ಕಳು ಕುಳಿತುಕೊಂಡು ಓಝೋನ ದಿನವನ್ನು ಆಚರಿಸಿದರು. ಜಿ.ಪಿ.ಟಿ ಶಿಕ್ಷಕರಾದ ಸಂಗಮೇಶ ಎಲಿಬಳ್ಳಿ ಯವರು ಮಾತನಾಡಿ, ಮೊಬೈಲ್ ಅನ್ನು ಆ್ಯಂಟಿವೈರಸ್ ಸಾಪ್ಟವೇರ್ ಹೇಗೆ ರಕ್ಷಣೆ ಮಾಡುತ್ತದೆ ಅದೇ ರೀತಿಯಲ್ಲಿ ಭೂಮಂಡಲವನ್ನು ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ಮಾಡುತ್ತದೆ. ನಾವೆಲ್ಲರೂ ಅದೇ ಓಝೋನ ಪದರದ ಅಡಿಯಲ್ಲಿ ಸುರಕ್ಷಿತವಾಗಿ ಇದ್ದೆವೆ. ಓಝೋನ ರಕ್ಷಣೆ ಕೆಲಸ ನಮ್ಮೇಲ್ಲರ ಆದ್ಯ ಕರ್ತವ್ಯ. ಹಸಿರು ಪರಿಸರ ನಿರ್ಮಾಣ ಹಾಗೂ ವಾಹನಗಳ ಮಿತವಾದ ಬಳಕೆ, ವಾಯುಮಾಲಿನ್ಯ ಕಡಿಮೆಮಾಡಿ ಓಝೋನ ರಕ್ಷಣೆ ಮಾಡೋಣ. ನಮ್ಮ ಭವಿಷ್ಯ ಓಝೋನ ಪದರದ ಮೇಲಿದ್ದು ಅದನ್ನು ಮಗುವಿನಂತೆ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿಗಳಾದ ಗಂಗೂಬಾಯಿ ಕರಣೆ, ಹೇಮಾವತಿ, ಹಣಮಂತ ಬಿರಾದಾರ, ಸಿದ್ದಪ್ಪ ಕೋಟ್ಯಾಳ, ಶಾಂತಪ್ಪ ನಾಗರಳ್ಳಿ, ಕವಿತಾ ಹಿರೇಮಠ, ಲಕ್ಷ್ಮೀ ವನೇಶಿ, ನಂದಾ ಹಲಗಲಿ ಹಾಜರಿದ್ದರು.

