ಕ್ರಮಕ್ಕೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆಯಿಂದ ತಹಸೀಲ್ದಾರರಿಗೆ ಮನವಿ
ದೇವರಹಿಪ್ಪರಗಿ: ಪಟ್ಟಣದಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣವಾಗುತ್ತಿರುವ ಮನೆಗಳಿಗೆ ಕಡಿಮೆ ಅನುದಾನ ನೀಡಿ ಬಡಜನರಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರು, ಅಧಿಕಾರಿಗಳು ಸೇರಿ ಬಡಜನರಿಗೆ ಮೋಸಮಾಡುತ್ತಿದ್ದಾರೆ ಸಂಘಟನೆ ಮೂಲಕ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ ಜಯಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ರೆಹಮಾನ ಕಣಕಾಲ, ಮನವಿ ಸಲ್ಲಿಸಿ ಮಾತನಾಡಿ, ಸರ್ಕಾರದಿಂದ ಮನೆಗಳ ನಿರ್ಮಾಣಕ್ಕೆ ೬.೮೬ ಲಕ್ಷ ಹಣ ನೀಡಲಾಗುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರದಿಂದ ೧.೫೦ ಲಕ್ಷ ರೂ. ಹಾಗೂ ರಾಜ್ಯ ಸರ್ಕಾರದಿಂದ ೧.೨೦ ಲಕ್ಷ ರೂಗಳ ಸಬ್ಸಿಡಿಯಿದೆ. ಈ ಯೋಜನೆ ಪಡೆದ ಫಲಾನುಭಾವಿಗಳು ಡಿಡಿ ಮುಖಾಂತರ ಸರ್ಕಾರಕ್ಕೆ ೧.೦೩ ಲಕ್ಷ ರೂ.ಗಳನ್ನು ತುಂಬಬೇಕು ಒಟ್ಟು ಸೇರಿ ೩.೭೩ ಲಕ್ಷರೂ. ಆಗಲಿದೆ. ಇನ್ನುಳಿದ ೩.೧೫ ಲಕ್ಷ ರೂ.ಗಳ ಮೊತ್ತವನ್ನು ಕಾರ್ಮಿಕ ಕಚೇರಿ ಅಥವಾ ವಿವಿಧ ಬ್ಯಾಂಕಗಳ ಸಹಾಯದಿಂದ ಪಡೆದಿರುತ್ತಾರೆ. ಎಂದು ತಿಳಿದುಬಂದಿದ್ದು. ಈಗ ನಾವು ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಭೇಟಿ ನೀಡಿದಾಗ ಇದು ಯಾವುದು ನಿಜವಲ್ಲ ಎಂದು ಹೇಳಿ, ಪಟ್ಟಣದಲ್ಲಿ ಸುಮಾರು ೨೦೦ ಕಡಿಮೆ ವೆಚ್ಚದ ಮನೆಗಳು ನಿರ್ಮಾಣಮಾಡಿರುವುದು ಕಂಡು ಬಂದಿದೆ.
ತಕ್ಷಣವೇ ಪ್ರತಿ ಮನೆಗೆ ಬರುವ ಅನುದಾನ ಹಾಗೂ ಸಬ್ಸಿಡಿ ಕುರಿತು ಸರಿಯಾದ ಮಾಹಿತಿ ಬಹಿರಂಗ ಪಡಿಸಬೇಕು ಹಾಗೂ ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಡಲು ಸೂಚಿಸಬೇಕು. ಮುಖ್ಯವಾಗಿ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ಮಾಡಿದರು.
ಸಿದ್ರಾಮಪ್ಪ ಅವಟಿ, ಇಮಾಮ ಮುಲ್ಲಾ, ಮಹಿಬೂಬ ವಾಲೀಕಾರ, ಪರಶುರಾಮ ಗೊಲ್ಲರ, ಸುನೀಲ ಕನಮಡಿ, ಪ್ರವೀಣ ಪವಾರ ಸೇರಿದಂತೆ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.