Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಶ್ರಾವಣ ಸಪ್ತಾಹ ಸಮಾರೋಪ: ಸುಗಮ ಸಂಗೀತ

ರೇಷ್ಮೆ ಬೆಳೆಯಿಂದ ಎಕರೆಗೆ ₹5 ಲಕ್ಷ ಲಾಭ: ಡಾ.ನಾಯಕ್

ಆಲಮೇಲ: ‘ಪೀರ್‌ಗಾಲಿಬ್ ಸಾಹೇಬ್ ಅಗಸಿ’ ಲೋಕಾರ್ಪಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಪರೀಕ್ಷೆಯ ರಕ್ಷೆ
ವಿಶೇಷ ಲೇಖನ

ಪರೀಕ್ಷೆಯ ರಕ್ಷೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್.
ಮುಂಡರಗಿ
ಗದಗ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ಓರ್ವ ರೈತ ತನ್ನ ಹೊಲವನ್ನು ಉತ್ತು, ಹದ ಮಾಡಿ, ಬೀಜವನ್ನು ಬಿತ್ತಿ, ತಾನು ಮಾಡಿದ ಎಲ್ಲಾ ಕೆಲಸಗಳಿಗೆ ಪ್ರತಿಫಲವಾಗಿ ಒಳ್ಳೆಯ ಬೆಳೆಯ ನಿರೀಕ್ಷೆಯಲ್ಲಿ ತೊಡಗುತ್ತಾನೆ. ಆತನ ಪಾಲಿಗೆ ಬೀಜದಲ್ಲಿಯೇ ಬ್ರಹ್ಮಾಂಡವಿದೆ.ಅಂತೆಯೇ ಮಕ್ಕಳು ಕೂಡ ಬ್ರಹ್ಮಾಂಡ ಶಕ್ತಿಯ ಆಗರವಿದ್ದಂತೆ. ಮಕ್ಕಳ ಮೆದುಳು ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ವಿಷಯಗಳ ಕುರಿತು ಎಲ್ಲವನ್ನು ಸಮಾನ ಆಸಕ್ತಿಯಿಂದ ಕಲಿತು ತನ್ನಲ್ಲಿ ಅಡಕಗೊಳಿಸಿಕೊಳ್ಳಬೇಕು.ಅಂತೆಯೇ ಪರೀಕ್ಷೆ
ಎಂಬ ವಿಷಯ ಮಕ್ಕಳಿಗೆ ರಕ್ಷೆಯಾಗಿ ಭಾಸವಾಗಬೇಕು.
ಮಕ್ಕಳು ಪರೀಕ್ಷೆಯ ವಿಷಯದಲ್ಲಿ ಯಾವುದೇ ರೀತಿಯ ಆತಂಕವನ್ನು ಹೊಂದಿರದೆ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಲು ಮನೆಯೇ ಮೊದಲ ರಕ್ಷೆಯಾಗಬೇಕು.
“ಮನೆಯ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ನಾವೇ ಧನ್ಯರು” ಎಂಬ ಮಾತಿನಂತೆ ತಾಯಿಯು ಮಗುವಿನಲ್ಲಿ ಧೈರ್ಯ, ಭರವಸೆ ಮತ್ತು ಆತ್ಮವಿಶ್ವಾಸಗಳನ್ನು ಉದ್ದೀಪಿಸಬಲ್ಲಳು.
ಪಾಲಕರಾಗಲಿ ಶಿಕ್ಷಕರಾಗಲಿ ಮಕ್ಕಳಿಗೆ ಕುಳಿತರೆ ನಿಂತರೆ ಊಟ ಮಾಡುತ್ತಿರಲಿ, ಆಟ ಆಡುತ್ತಿರಲಿ ಪದೇ ಪದೇ ಪರೀಕ್ಷೆಯ ವಿಷಯವನ್ನು ನೆನಪಿಸಿ ಭೀತಿಯನ್ನು ಹುಟ್ಟಿಸಬಾರದು. ಪರೀಕ್ಷೆ ಎಂಬುದು ಅವರ ಇದುವರೆಗಿನ ಕಲಿಕಾ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಪ್ರಕ್ರಿಯೆ ಎಂಬಂತೆ ಮಕ್ಕಳಿಗೆ ಭಾಸವಾಗಬೇಕು. ಪರೀಕ್ಷೆಯ ಸಮಯದಲ್ಲಿ ನಿರಾಳ ಭಾವ ಮಕ್ಕಳಲ್ಲಿರಬೇಕು. ಇನ್ನೇನು ಪರೀಕ್ಷೆ ನಾಳೆಗೆ ಆರಂಭವಾಗುತ್ತದೆ ಎಂದರೆ ಮಕ್ಕಳು ಪರೀಕ್ಷೆಗೆ ಓದುವ ಕೆಲಸವನ್ನು ನಿಲ್ಲಿಸಿ ಆರಾಮದಾಯಕ ಮನಸ್ಥಿತಿಯನ್ನು ಹೊಂದಬೇಕು. ಪರೀಕ್ಷೆಗೆ ಬೇಕಾದ ಹಾಲ್ ಟಿಕೆಟ್, ಪೆನ್ನುಗಳು, ಜಾಮಿಟ್ರಿ ಬಾಕ್ಸ್ ಮುಂತಾದ ಪರಿಕರಗಳನ್ನು ಹಿಂದಿನ ದಿನ ಮಧ್ಯಾಹ್ನದ ನಂತರ ಹೊಂದಿಸಿಟ್ಟುಕೊಳ್ಳಬೇಕು. ಅತ್ಯಂತ ನಿರಾಳ ಭಾವದಿಂದ ಆಹಾರವನ್ನು ಸೇವಿಸಿ ಒಂದೊಳ್ಳೆಯ ಹರಟೆಯನ್ನು ಪಾಲಕರೊಂದಿಗೆ ಪೂರೈಸಿ ಬೇಗನೆ ನಿದ್ರಿಸಲು ಅನುವಾಗಬೇಕು. ಒಂದೊಳ್ಳೆಯ ನಿದ್ರೆ ಮಗುವಿನ ಮೆದುಳಿನಲ್ಲಿರುವ ನ್ಯೂರೋ ಟ್ರಾನ್ಸ ಮಿಟರ್ಗಳನ್ನು ಜಾಗೃತವಾಗಿಸಿ ಸಂಯೋಜಿಸಲ್ಪಡುತ್ತವೆ. ಮರುದಿನ ಮುಂಜಾನೆ ಸ್ವಸ್ಥ ಚಿತ್ತರಾಗಿ ಏಳುವ ಮಕ್ಕಳು ದೈನಂದಿನ ಕರ್ಮಗಳನ್ನು ಪೂರೈಸಿ ತಮ್ಮ ಆಯ್ಕೆಯ ತಿಂಡಿಯನ್ನು ಸೇವಿಸಿದಾಗ ಅವರಲ್ಲಿ ಸಂತೃಪ್ತಿ ಮನೆ ಮಾಡುತ್ತದೆ. ಇಂತಹ ಸಂತೃಪ್ತ ಮನಸ್ಥಿತಿಯಲ್ಲಿ ಮಕ್ಕಳು ಪರೀಕ್ಷೆಯ ಹಾಲ್ಗೆ ತೆರಳಿದಾಗ
ಒಳ್ಳೆಯ ಮನಸ್ಥಿತಿಯು ಅವರಿಗೆ ಪರೀಕ್ಷೆಯನ್ನು ಎದುರಿಸಲು ಸಹಾಯ ಮಾಡುತ್ತದೆ.


ಮಕ್ಕಳು ಪರೀಕ್ಷೆಯ ಸಮಯದಲ್ಲಿ ಇದುವರೆಗೂ ಮಾಡಿಕೊಂಡು ಬಂದಿರುವ ಕೆಲಸಗಳಿಂದ ಅವರಿಗೆ ವಿನಾಯಿತಿ ನೀಡಬೇಕು. ಒತ್ತಡ ರಹಿತರಾಗಿ ಮಕ್ಕಳು ಓದಿಕೊಳ್ಳಲು ಇದು ತುಸುಮಟ್ಟಿಗೆ ಒಳ್ಳೆಯದು. ಪರೀಕ್ಷೆಯ ಸಮಯದಲ್ಲಿ ಮಕ್ಕಳು ಆತಂಕ ರಹಿತರಾಗಿರುವುದು ಹೆಚ್ಚು ಲಾಭದಾಯಕ. ಪಾಲಕರೊಂದಿಗೆ ಮಾತನಾಡುತ್ತಾ, ಒಡನಾಡುತ್ತಾ ಮಕ್ಕಳು ತಮ್ಮ ಪರೀಕ್ಷಾ ಪರಿಕರಗಳನ್ನು ಹೊಂದಿಸಿಕೊಂಡು ಅಲ್ಲಿ ಹಾಲ್ ಟಿಕೆಟ್ ನಂಬರ್ ಎಂಟ್ರಿ ಮಾಡುವುದರಿಂದ ಹಿಡಿದು ಹೇಗೆ ಬರೆಯಬೇಕು ಎಂಬುದರ ಕುರಿತು ಸೂಕ್ಷ್ಮವಾಗಿ ಪಾಲಕರೊಂದಿಗೆ ಮಾತನಾಡುವುದು ಮರುದಿನದ ತಯಾರಿಗೆ ಒಳ್ಳೆಯ ಆರಂಭವನ್ನು ಕೊಡುತ್ತದೆ. ಪಾಲಕರ ವ್ಯಂಗ್ಯ ಮಾತುಗಳು ಮಗುವಿನಲ್ಲಿ ನಿರಾಶೆಯನ್ನು, ಹತಾಶೆಯನ್ನು ಮೂಡಿಸಬಹುದು ಯಾವಾಗಲೂ ಪಾಲಕರು ಮುಂದಿನ ಯೋಜನೆಯ ಕುರಿತು ಮಾತನಾಡಬೇಕು. ಮಕ್ಕಳ ವಿಚಾರಗಳನ್ನು ನಿಯಂತ್ರಿಸುವುದಲ್ಲ, ಪ್ರೋತ್ಸಾಹಿಸುವುದರ ಮೂಲಕ
ಅವರಿಗೆ ಉತ್ತೇಜಿಸಬೇಕು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಶ್ರಾವಣ ಸಪ್ತಾಹ ಸಮಾರೋಪ: ಸುಗಮ ಸಂಗೀತ

ರೇಷ್ಮೆ ಬೆಳೆಯಿಂದ ಎಕರೆಗೆ ₹5 ಲಕ್ಷ ಲಾಭ: ಡಾ.ನಾಯಕ್

ಆಲಮೇಲ: ‘ಪೀರ್‌ಗಾಲಿಬ್ ಸಾಹೇಬ್ ಅಗಸಿ’ ಲೋಕಾರ್ಪಣೆ

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 11,2026

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಶ್ರಾವಣ ಸಪ್ತಾಹ ಸಮಾರೋಪ: ಸುಗಮ ಸಂಗೀತ
    In (ರಾಜ್ಯ ) ಜಿಲ್ಲೆ
  • ರೇಷ್ಮೆ ಬೆಳೆಯಿಂದ ಎಕರೆಗೆ ₹5 ಲಕ್ಷ ಲಾಭ: ಡಾ.ನಾಯಕ್
    In (ರಾಜ್ಯ ) ಜಿಲ್ಲೆ
  • ಆಲಮೇಲ: ‘ಪೀರ್‌ಗಾಲಿಬ್ ಸಾಹೇಬ್ ಅಗಸಿ’ ಲೋಕಾರ್ಪಣೆ
    In (ರಾಜ್ಯ ) ಜಿಲ್ಲೆ
  • ಪರೀಕ್ಷೆಯ ರಕ್ಷೆ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 11,2026
    In ದಿನಪತ್ರಿಕೆ
  • ಆಲಮೇಲ ತಾಲೂಕು ಬರಗಾಲ ಘೋಷಣೆಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಹೋಮ-ಹವನ ೧ಸಸಿ ನೆಟ್ಟು ಪೋಷಿಸುವ ಕಾರ್ಯಕ್ಕೆ ಸಮಾನ
    In (ರಾಜ್ಯ ) ಜಿಲ್ಲೆ
  • ಶಿವಾನಂದ ತಗಡೂರ ವಿರುದ್ಧದ ಸುಳ್ಳು ಆರೋಪಗಳಿಗೆ ಖಂಡನೆ
    In (ರಾಜ್ಯ ) ಜಿಲ್ಲೆ
  • ಭರದಿಂದ ನಡೆದ ಕೃತಕ ಹೊಂಡ ನಿರ್ಮಾಣ ಕಾರ್ಯ
    In (ರಾಜ್ಯ ) ಜಿಲ್ಲೆ
  • ಜನಪದ ಕಲೆ ನಮ್ಮ ಇತಿಹಾಸದ ಜೀವಂತ ದಾಖಲೆ :ಚನ್ನವೀರ ಶ್ರೀ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.