Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ನೇಕಾರ ಸಮ್ಮಾನ್ ಯೋಜನೆಗೆ ಆರ್ಥಿಕ ನೆರವಿಗೆ ಅರ್ಜಿ ಆಹ್ವಾನ

ಜಿಲ್ಲಾ ಮಟ್ಟದ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಸಾಧನೆ

ಕೌಶಲ್ಯಕ್ಕೆ ಉದ್ಯಮದ ಸ್ಪರ್ಶ; ಮಹಿಳೆಗೆ ಸ್ವಾವಲಂಬನೆಯ ಶಕ್ತಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ರೇಷ್ಮೆ ಬೆಳೆಯಿಂದ ಎಕರೆಗೆ ₹5 ಲಕ್ಷ ಲಾಭ: ಡಾ.ನಾಯಕ್
(ರಾಜ್ಯ ) ಜಿಲ್ಲೆ

ರೇಷ್ಮೆ ಬೆಳೆಯಿಂದ ಎಕರೆಗೆ ₹5 ಲಕ್ಷ ಲಾಭ: ಡಾ.ನಾಯಕ್

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಚಡಚಣ: ಸರ್ಕಾರದ ಸಹಾಯಧನ ಹಾಗೂ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ರೈತರು ಒಂದು ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆ ಬೆಳೆಸುವ ಮೂಲಕ ವರ್ಷಕ್ಕೆ ಕನಿಷ್ಠ ₹5 ಲಕ್ಷದವರೆಗೆ ಲಾಭ ಪಡೆಯಬಹುದು ಎಂದು ವಿಜ್ಞಾನಿ ಡಾ. ಪರಮೇಶ್ವರ ನಾಯಕ್ ಹೇಳಿದರು.
ಭತಗುಣಕಿ ಗ್ರಾಮದ ಮುದ್ದೇಗೌಡ ಭೀಮನಗೌಡ ಪಾಟೀಲ ಅವರ ತೋಟದಲ್ಲಿ ಗುರುವಾರ ಆಯೋಜಿಸಿದ್ದ ರೇಷ್ಮೆ ತಾಂತ್ರಿಕ ಕಾರ್ಯಾಗಾರ ಹಾಗೂ ವಸ್ತು ಪ್ರದರ್ಶನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ರೇಷ್ಮೆ ಕೃಷಿ ಲಾಭದಾಯಕವಾಗಿದ್ದು, ಕಡಿಮೆ ವೆಚ್ಚದಲ್ಲಿ ಹಾಗೂ ರಾಸಾಯನಿಕ ರಸಗೊಬ್ಬರಗಳ ಬಳಕೆಯಿಲ್ಲದೆ ಸಾವಯವ ಪದ್ಧತಿಯಲ್ಲಿ ಕೈಗೊಳ್ಳಬಹುದಾಗಿದೆ. ರೇಷ್ಮೆ ಬೆಳೆಗೆ ಸರ್ಕಾರದಿಂದ ವಿವಿಧ ರೀತಿಯ ಸಹಾಯಧನ ಹಾಗೂ ಪ್ರೋತ್ಸಾಹ ದೊರೆಯುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ರೇಷ್ಮೆ ಕೃಷಿಯತ್ತ ಮುಖ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ವಿಜಯಪುರದ ರೇಷ್ಮೆ ಉಪನಿರ್ದೇಶಕ ಸಿದ್ದರಾಜು ಎಸ್. ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ವಿಜಯಪುರದ ರೇಷ್ಮೆ ಸಹಾಯಕ ನಿರ್ದೇಶಕ ಬಿ.ವೈ. ಬಿರಾದಾರ, ರೇಷ್ಮೆ ವಿಸ್ತರಣಾಧಿಕಾರಿ ಗಂಗಾಧರ ಬಿ. ಜೇವೂರ, ಸಿಂದಗಿ ರೇಷ್ಮೆ ವಿಸ್ತರಣಾಧಿಕಾರಿ ಎಸ್.ಐ. ಗೋಲಗೊಂಡ, ಇಂಡಿ ರೇಷ್ಮೆ ವಿಸ್ತರಣಾಧಿಕಾರಿ ವ್ಹಿ.ಡಿ. ಬಜೆಂತ್ರಿ, ಹಿರಿಯ ತಾಂತ್ರಿಕ ಸಹಾಯಕಿ ವಾಸಂತಿ ಜೆ., ಕ್ಷೇಮಾಭಿವೃದ್ಧಿ ನೌಕರ ಎಸ್.ಎಲ್. ದಶವಂತ ಹಾಗೂ ಅಧಿಕಾರಿಗಳಾದ ಬಸವರಾಜ ಮೋಫಗಾರ ಸೇರಿದಂತೆ ರೇಷ್ಮೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾವಯವ ಕೃಷಿಕರಾದ ಪಾಂಡು ಪ್ಯಾಟಿ, ಮುದ್ದೇಗೌಡ ಭೀಮನಗೌಡ ಪಾಟೀಲ ಸೇರಿದಂತೆ ಚಡಚಣ ಹಾಗೂ ಇಂಡಿ ತಾಲೂಕಿನ ನೂರಾರು ರೇಷ್ಮೆ ಬೆಳೆಗಾರರು ಕಾರ್ಯಾಗಾರದಲ್ಲಿ ಭಾಗವಹಿಸಿ ರೇಷ್ಮೆ ಕೃಷಿಗೆ ಸಂಬಂಧಿಸಿದ ತಾಂತ್ರಿಕ ಮಾಹಿತಿ ಹಾಗೂ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ನೇಕಾರ ಸಮ್ಮಾನ್ ಯೋಜನೆಗೆ ಆರ್ಥಿಕ ನೆರವಿಗೆ ಅರ್ಜಿ ಆಹ್ವಾನ

ಜಿಲ್ಲಾ ಮಟ್ಟದ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಸಾಧನೆ

ಕೌಶಲ್ಯಕ್ಕೆ ಉದ್ಯಮದ ಸ್ಪರ್ಶ; ಮಹಿಳೆಗೆ ಸ್ವಾವಲಂಬನೆಯ ಶಕ್ತಿ

ಭದ್ರಾ ಕಾಲುವೆಗೆ ಬಾಗಿನ ಅರ್ಪಿಸಿದ ಶಿವಾನಂದ ತಗಡೂರು

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ನೇಕಾರ ಸಮ್ಮಾನ್ ಯೋಜನೆಗೆ ಆರ್ಥಿಕ ನೆರವಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಜಿಲ್ಲಾ ಮಟ್ಟದ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಸಾಧನೆ
    In (ರಾಜ್ಯ ) ಜಿಲ್ಲೆ
  • ಕೌಶಲ್ಯಕ್ಕೆ ಉದ್ಯಮದ ಸ್ಪರ್ಶ; ಮಹಿಳೆಗೆ ಸ್ವಾವಲಂಬನೆಯ ಶಕ್ತಿ
    In (ರಾಜ್ಯ ) ಜಿಲ್ಲೆ
  • ಭದ್ರಾ ಕಾಲುವೆಗೆ ಬಾಗಿನ ಅರ್ಪಿಸಿದ ಶಿವಾನಂದ ತಗಡೂರು
    In (ರಾಜ್ಯ ) ಜಿಲ್ಲೆ
  • ಎಂಬತ್ತರ ದಶಕಕ್ಕೆ ಕರೆದೊಯ್ಯುತ್ತಿರುವ ಎಐ
    In (ರಾಜ್ಯ ) ಜಿಲ್ಲೆ
  • ಶ್ರಾವಣ ಸಪ್ತಾಹ ಸಮಾರೋಪ: ಸುಗಮ ಸಂಗೀತ
    In (ರಾಜ್ಯ ) ಜಿಲ್ಲೆ
  • ರೇಷ್ಮೆ ಬೆಳೆಯಿಂದ ಎಕರೆಗೆ ₹5 ಲಕ್ಷ ಲಾಭ: ಡಾ.ನಾಯಕ್
    In (ರಾಜ್ಯ ) ಜಿಲ್ಲೆ
  • ಆಲಮೇಲ: ‘ಪೀರ್‌ಗಾಲಿಬ್ ಸಾಹೇಬ್ ಅಗಸಿ’ ಲೋಕಾರ್ಪಣೆ
    In (ರಾಜ್ಯ ) ಜಿಲ್ಲೆ
  • ಪರೀಕ್ಷೆಯ ರಕ್ಷೆ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 11,2026
    In ದಿನಪತ್ರಿಕೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.