Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 11,2026

ಆಲಮೇಲ ತಾಲೂಕು ಬರಗಾಲ ಘೋಷಣೆಗೆ ಆಗ್ರಹ

ಹೋಮ-ಹವನ ೧ಸಸಿ ನೆಟ್ಟು ಪೋಷಿಸುವ ಕಾರ್ಯಕ್ಕೆ ಸಮಾನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ವಚನಗಳಲ್ಲಿರುವ ತತ್ವಗಳನ್ನು ಅಳವಡಿಸಿಕೊಳ್ಳಿ :ಹಿರೇಮಠ
(ರಾಜ್ಯ ) ಜಿಲ್ಲೆ

ವಚನಗಳಲ್ಲಿರುವ ತತ್ವಗಳನ್ನು ಅಳವಡಿಸಿಕೊಳ್ಳಿ :ಹಿರೇಮಠ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಮುದ್ದೇಬಿಹಾಳ: ಸನಾತನ ಧರ್ಮದ ಪವಿತ್ರ ಶ್ರಾವಣ ಮಾಸದಲ್ಲಿ ಪುರಾಣ-ಪ್ರವಚನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದು ಆ ಭಾಗದ ಜನತೆಯಲ್ಲಿ ಸತ್ಯ, ಧರ್ಮ, ಮಾನವೀಯತೆ, ಸಹಬಾಳ್ವೆ ಮತ್ತು ಸದಾಚಾರದ ಮೌಲ್ಯಗಳನ್ನು ಬೆಳೆಸುವದಕ್ಕಾಗಿ ಎಂದು ಮಿಣಜಗಿ ಗ್ರಾಮದ ಗುರುಪಾದೇಶ್ವರ ಮಠದ ಆಡಳಿತಾಧಿಕಾರಿಗಳು ಹಾಗೂ ಪ್ರವಚನಕಾರರಾದ ಪ್ರೊ.ಡಾ.ಸೋಮಶೇಖರ ಹಿರೇಮಠ ಹೇಳಿದರು.
ಮಿಣಜಗಿ ಗ್ರಾಮದ ಮಾಯಮ್ಮ ದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಶಿವಶರಣೆ ಅಕ್ಕಮಹಾದೇವಿಯವರ ಪ್ರವಚನ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.
ಅಕ್ಕಮಹಾದೇವಿಯವರ ವಚನಗಳು ಕೇವಲ ಆಧ್ಯಾತ್ಮಿಕ ವಿಚಾರಗಳಲ್ಲ. ಅವು ಮನುಷ್ಯನ ಬದುಕಿಗೆ ಸತ್ಯ, ನಿಷ್ಠೆ, ವೈರಾಗ್ಯ ಹಾಗೂ ಆತ್ಮಶುದ್ಧಿಯ ಮಾರ್ಗವನ್ನು ತೋರಿಸುವ ಜೀವನ ಸಂದೇಶಗಳಾಗಿವೆ. ಅಕ್ಕಮಹಾದೇವಿಯವರು ತಮ್ಮ ಬದುಕಿನ ಮೂಲಕ ಮಹಿಳಾ ಸ್ವಾತಂತ್ರ‍್ಯ, ಆತ್ಮಗೌರವ ಮತ್ತು ಭಕ್ತಿಯ ಮಹತ್ವವನ್ನು ಸಾರಿದ್ದಾರೆ. ಅವರ ವಚನಗಳಲ್ಲಿರುವ ತತ್ವಗಳನ್ನು ಇಂದಿನ ಯುವಜನತೆ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಾನಿಧ್ಯ ವಹಿಸಿದ್ದ ವಡವಡಗಿಯ ಭೃಂಗೇಶ್ವರ ಶಿವಾಚಾರ್ಯರು ಮಾತನಾಡಿ, ಪುರಾಣ-ಪ್ರವಚನಗಳಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಮ್ಮ ಹಿರಿಯರು ಬೆಳೆಸಿಕೊಂಡು ಬಂದಿರುವ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಕಾರ್ಯವಾಗುತ್ತಿರೋದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ ಅವು ನಮ್ಮ ಬದುಕನ್ನು ಬದಲಿಸುವ ಜೀವನದರ್ಶನಗಳಾಗಬೇಕು. ಸತ್ಯವನ್ನು ಪಾಲಿಸುವುದು, ಧರ್ಮದ ಹಾದಿಯಲ್ಲಿ ನಡೆಯುವುದು, ಹಿರಿಯರನ್ನು ಗೌರವಿಸುವುದು, ದುರ್ಬಲರಿಗೆ ನೆರವಾಗುವುದು, ಪರಸ್ಪರ ಪ್ರೀತಿ-ಸೌಹಾರ್ದದಿಂದ ಬದುಕುವುದು ಹಾಗೂ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.
ಎಲ್ಲ ಮಾತೆಯರು ತಮ್ಮ ಇಷ್ಟಾರ್ಥಸಿದ್ಧಿಗಾಗಿ ಇಷ್ಟಲಿಂಗ ಪೂಜೆ ಮಾಡಿಕೊಂಡರು. ಮಹದೇವಿ ಬಿರಾದಾರ, ಬಸ್ಸಮ್ಮ ಬಿರಾದಾರ, ಚೆನ್ನಮ್ಮ ವಾಲಿ, ಪದ್ಮಾವತಿ ಬಿರಾದಾರ, ಬಸಮ್ಮ ತೆಕ್ಕೂರ್, ಜೆ.ಡಿ.ಪಾಟೀಲ, ಡಿ.ಕೆ.ಪಾಟೀಲ, ಸಂಗನಗೌಡ ಪಾಟೀಲ, ಮಲ್ಲನಗೌಡ ಬಿರಾದಾರ, ಮಹಾಂತೇಶ ಬಿರಾದಾರ, ಈರಯ್ಯ ಹಿರೇಮಠ, ಸಾಬಣ್ಣ ಅಗ್ನಿ, ಎಂ.ಜಿ.ಯರನಾಳ, ಎಮ್ ಸರ್ಜಾಪುರ್ ಸೇರಿದಂತೆ ಸಾಕಷ್ಟು ಜನ ಭಾಗಿಯಾಗಿ ಪ್ರವಚನ ಆಲಿಸಿದರು. ಸಂಗೀತಗಾರರಾದ ಮಹಾಂತೇಶ ಬಿರಾದಾರ, ತಬಲಾವಾದಕರಾದ ಆಕಾಶ್ ಹಿರೇಮಠರು ಪ್ರವಚನಕಾರರಿಗೆ ಸಾಥ್ ನೀಡಿದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 11,2026

ಆಲಮೇಲ ತಾಲೂಕು ಬರಗಾಲ ಘೋಷಣೆಗೆ ಆಗ್ರಹ

ಹೋಮ-ಹವನ ೧ಸಸಿ ನೆಟ್ಟು ಪೋಷಿಸುವ ಕಾರ್ಯಕ್ಕೆ ಸಮಾನ

ಶಿವಾನಂದ ತಗಡೂರ ವಿರುದ್ಧದ ಸುಳ್ಳು ಆರೋಪಗಳಿಗೆ ಖಂಡನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 11,2026
    In ದಿನಪತ್ರಿಕೆ
  • ಆಲಮೇಲ ತಾಲೂಕು ಬರಗಾಲ ಘೋಷಣೆಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಹೋಮ-ಹವನ ೧ಸಸಿ ನೆಟ್ಟು ಪೋಷಿಸುವ ಕಾರ್ಯಕ್ಕೆ ಸಮಾನ
    In (ರಾಜ್ಯ ) ಜಿಲ್ಲೆ
  • ಶಿವಾನಂದ ತಗಡೂರ ವಿರುದ್ಧದ ಸುಳ್ಳು ಆರೋಪಗಳಿಗೆ ಖಂಡನೆ
    In (ರಾಜ್ಯ ) ಜಿಲ್ಲೆ
  • ಭರದಿಂದ ನಡೆದ ಕೃತಕ ಹೊಂಡ ನಿರ್ಮಾಣ ಕಾರ್ಯ
    In (ರಾಜ್ಯ ) ಜಿಲ್ಲೆ
  • ಜನಪದ ಕಲೆ ನಮ್ಮ ಇತಿಹಾಸದ ಜೀವಂತ ದಾಖಲೆ :ಚನ್ನವೀರ ಶ್ರೀ
    In (ರಾಜ್ಯ ) ಜಿಲ್ಲೆ
  • 10 ದಿನ ಪೂರೈಸಿದ ರೈತರ ಧರಣಿ ಸತ್ಯಾಗ್ರಹ
    In (ರಾಜ್ಯ ) ಜಿಲ್ಲೆ
  • ಸಮಯಕ್ಕೆ ಗೌರವ ಕೊಟ್ಟರೆ ಜೀವನದಲ್ಲಿ ಸಾಧನೆ ಸಾಧ್ಯ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಜೆಡಿಎಸ್ ಪಕ್ಷ ಸಂಘಟನೆಗೆ ಒತ್ತು ನೀಡಿ :ತೊರವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.