ಮೋರಟಗಿ: ತಂದೆಯ ಕೊಟ್ಟ ಬಹುದೊಡ್ಡ ಬಳುವಳಿಯಲ್ಲಿ ನನ್ನ ರಾಜಕೀಯವೂ ಸೇರಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಮೀಪದ ಕುಳೇಕುಮಟಗಿ ಗ್ರಾಮದಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ಪ್ರಯುಕ್ತ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದ ಅವರು,
ಅಶೋಕ ಮನಗೂಳಿ ಯಾರು ಅನ್ನುವುದು ಜನತೆಯ ಹೃದಯದಲ್ಲಿ ಮೂಡುವಂತೆ ಮಾಡಿದ್ದು ನಮ್ಮ ದಿ.ತಂದೆಯವರು. ನನ್ನ ತಂದೆ ಕಷ್ಟದ ಜೀವನ ಮೆಟ್ಟಿ ಜನರ ಕಷ್ಟ ಪರಿಹರಿಸುವ ಶಾಸಕರಾಗಿ, ಸಚಿವರಾಗಿ, ನೂರಾರು ಗ್ರಾಮಗಳಲ್ಲಿ ಮೂಲ ಸೌಕರ್ಯ, ದೇವಸ್ಥಾನಗಳ ಜೀರ್ಣೋದ್ಧಾರ, ರಸ್ತೆ ಕಾಮಗಾರಿ ಹೀಗೆ ಹತ್ತು ಹಲವು ಯೋಜನೆಗಳನ್ನು ಕೈಗೊಂಡು, ರೈತರ ಕಷ್ಟ ಅರಿತು ಗುತ್ತಿ ಬಸವಣ್ಣ ಏತ ನೀರಾವರಿಗೆ ಕಂಕಣತೊಟ್ಟು ಕಾರ್ಯಗತ ಮಾಡಿದವರು ನನ್ನ ತಂದೆ. ಅವರ ರಾಜಕೀಯದಲ್ಲಿ ಪಳಗಿದ ನಾನು ಜನ ಸಾಮಾನ್ಯರಿಗೆ ಸ್ಪಂದಿಸುವ ಅನುಭವ ಪಡೆದೆ. ತಂದೆಯಿಂದ ಕಲಿತ ರಾಜಕೀಯದಿಂದಾಗಿ ಇಂದು ಶಾಸಕನಾಗಿ ಆಯ್ಕೆಯಾಗಿರುವೆ. ನೀವು ಇಟ್ಟ ಪ್ರೀತಿ ವಿಶ್ವಾಸ ಮುಂದಿನ ಬಾರಿ ಅಂದರೆ ಐದು ವರ್ಷ ಕಳೆದ ಮೇಲೆ ನಾನು ಪ್ರಾಮಾಣಿಕವಾಗಿ ಸೇವೆ ಮಾಡಿ ನಿಮ್ಮಭರವಸೆ ಉಳಿಸಿಕೊಂಡು ನಿಮ್ಮಿಂದ ಅಭಿವೃದ್ದಿ ಹರಿಕಾರ ಅಶೋಕ ಮನಗೂಳಿ ಎಂದು ಬಿರುದು ಪಡೆದಾಗ ನನ್ನ ರಾಜಕೀಯಕ್ಕೆ ಸಾರ್ಥಕತೆ ಸಿಗುವುದು ಎಂದು ಹೇಳಿದರು.
ಅವರು ನನ್ನ ಅವಧಿಯಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವೆ. ಕುಳೇಕುಮಟಗಿ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಂಟನೇ ತರಗತಿ ವಿದ್ಯಾರ್ಥಿಗಳಿದ್ದು, ಒಂಬತ್ತು ಹತ್ತನೆ ತರಗತಿ ಶಿಕ್ಷಣ ಇಲ್ಲಿಯೇ ಮುಂದುವರೆಸುವಂತೆ ಮಾಡುವೆ ಎಂದರು.
ಮಾಜಿ ಜಿಲ್ಲಾ ಪಂಚಾಯತ ಸದಸ್ಯ ನರಸಿಂಗ್ ಪ್ರಸಾದ ತಿವಾರಿ, ಅಂಜುಮನ್ ಕಮೀಟಿ ಕಾರ್ಯದರ್ಶಿ ಮೈಬೂಬಸಾಬ ಕಣ್ಣಿ, ಪಿಕೆಪಿಎಸ್ ಅಧ್ಯಕ್ಷ ವೀರನಗೌಡ ಪಾಟೀಲ, ಬಸಯ್ಯಸ್ವಾಮಿ ರಾಮಗೀರಿಮಠ, ಗುರುಲಿಂಗಯ್ಯ ನಡಕಟ್ಟಿ, ಬಗಲೂರ ಪಿಕೆಪಿಎಸ್ ಅಧ್ಯಕ್ಷ ಪಾವಡೆಪ್ಪಗೌಡ ಪಾಟೀಲ, ಗುರುಪಾದಪ್ಪಗೌಡ ಹಿರಬಟ್ಟಿ, ಕಾಂತು ಮೋರಟಗಿ, ಭೂ ನ್ಯಾಯ ಮಂಡಳಿ ನಿರ್ದೇಶಕ ಧರ್ಮಣ್ಣ ಯಂಟಮಾನ ಸೇರಿದಂತೆ ಹಲವರಿದ್ದರು.
Related Posts
Add A Comment