ವಿಜಯಪುರ: ಶರೀರ ಕ್ರಿಯಾ ಶಾಸ್ತ್ರಜ್ಞರ ರಾಷ್ಟ್ರೀಯ 34ನೇ ಸಮ್ಮೇಳನ ನವೆಂಬರ್ 1ರಿಂದ ನವೆಂಬರ್ 3ರ ವರೆಗೆ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.
ಸಮ್ಮೇಳನ ಆರಂಭದ ಒಂದು ದಿನ ಮುಂಚೆ ನಿರಂತರ ವೈದ್ಯಕೀಯ ಶಿಕ್ಷಣ ಅಂಗವಾಗಿ ಆರೋಗ್ಯ ಮತ್ತು ಸುಖಃಸ್ಥಿತಿ ಶಾರೀರಿಕ ಶಾಸ್ತ್ರ ಕುರಿತು ಕಾರ್ಯಾಗಾರ ನಡೆಯಲಿದೆ.
ಈ ರಾಷ್ಟ್ರಿಯ ಸಮ್ಮೇಳನದಲ್ಲಿ ದೆಹಲಿಯ, ಎ.ಐ.ಐ.ಎಂ.ಎಸ್. ನ ನಿವೃತ್ತ ಡೀನ್ ಹಾಗೂ ಐಐಟಿ ಯ ಪ್ರಾಧ್ಯಾಪಕ ಡಾ. ಕೆ. ಕೆ. ದೀಪಕ ಮುಖ್ಯ ಅತಿಥಿಯಾಗಿ ಪಾಲ್ಗೋಳ್ಳುತ್ತಿದ್ದು, 88 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಭಾಷಣಕಾರರ ಪ್ರಬಂಧ ಮಂಡನೆ ಸೇರಿದಂತೆ ಸುಮಾರು 250 ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಶರೀರಕ್ರಿಯಾ ಶಾಸ್ತ್ರಜ್ಞರ ಸೊಸೈಟಿ ನೀಡುವ 6 ರಾಷ್ಟ್ರೀಯ ಭಾಷಣ ಪ್ರಶಸ್ತಿಗಳನ್ನು ಈ ಸಮ್ಮೇಳನದಲ್ಲಿ ನೀಡಿ ಗೌರವಿಸಲಾಗುವುದು.
ರಕ್ತನಾಳ, ನರಮಂಡಲ, ನಿರ್ನಾಕಗ್ರಂಥಿ ಶರೀರಕ್ರಿಯಾ ಶಾಸ್ತ್ರ್ರ, ರೋಗವಿಜ್ಞಾನ ಮುಂತಾದ ವಿಷಯಗಳ ಕುರಿತು ವಿಚಾರ ಸಂಕಿರಣಗಳನ್ನು ನಡೆಸಿಕೊಡಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಬ್ರೆಝಿಲ್ ನ ಸಾವೋ ಪಾಲೋ ವಿಶ್ವವಿದ್ಯಾಲಯದ ಡಾ. ಬೆಸಿಡಿಟೊ ಮಶಾಡೋ, ಮಕ್ಸಿಕೋ ವಿಶ್ವವಿದ್ಯಾಲಯದ ಡಾ. ಜೋಸ್ ಎಂಟೋನಿಯೋ, ಅಮೆರಿಕರ ಪ್ರಿಟಚೋರಿಯಾ ವಿವಿಯ ಡಾ. ಟ್ರೆವರ್ ಎನ್., ರಾಜೀವ ಗಾಂಧಿ ಆರೋಗ್ಯ ವಿವಿಯ ಡಾ. ಪಿ. ಎಸ್. ಶಂಕರ, ಬೆಳಗಾವಿ ಕೆ.ಎಲ್.ಇ ವಿವಿಯ ಡಾ. ಎಸ್. ಎಸ್. ಗೌಡರ, ಅಮೇರಿಕದ ತುಲೇನ್ ವಿವಿಯ ಡಾ. ಡಿ. ಎಸ್. ಎ ಮಾಜಿದ್, ಕೊಲ್ಕೋತ್ತಾದ ಡಾ. ಎ. ಕೆ. ಚಂದ್ರ ಮುಂತಾದವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಈ ಸಮ್ಮೇಳನದಲ್ಲಿ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶರೀರ ಕ್ರಿಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಕುಶಾಲ್ ಕೆ., ದಾಸ ಅವರು ಸಮ್ಮೇಳನದ ವೈಜ್ಞಾನಿಕ ಸಲಹೆಗಾರರಾಗಿದ್ದಾರೆ. ಕೊಲ್ಕೋತ್ತಾ ವಿವಿಯ ಡಾ. ಎ. ಕೆ. ಚಂದ್ರ ಮತ್ತು ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚಾರ್ಯೆ ಮತ್ತು ಶರೀರಕ್ರಿಯಾ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಸುಮಂಗಲ ಪಾಟೀಲ ಮುಂತಾದವರು ಪಾಲ್ಗೋಳ್ಳಲಿದ್ದಾರೆ ಎಂದು ಶರೀರ ಕ್ರಿಯಾ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಮತ್ತು ಸಂಘಟನಾ ಕಾರ್ಯದರ್ಶಿ ಡಾ, ಲತಾ ಎಂ. ಮುಳ್ಳೂರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
Related Posts
Add A Comment