ಹೊನವಾಡ: ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶನಿವಾರ ಆಚರಿಸಲಾಯಿತು.
ರಾವಸಾಬ ಶೇಡ್ಯಾಳ ಶಿಕ್ಷಕರು ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ವ್ಹಿ ವ್ಹಿ ಎಸ್ ಪದವಿ ಪೂರ್ವ ಕಾಲೇಜನಲ್ಲಿ ನಡೆದ ಕಾರ್ಯಕ್ರಮದಲ್ಲಿ
ಪ್ರಾಧ್ಯಪಕರಾದ ಎಂ ಜಿ ಕುಲಕರ್ಣಿ ಮಾತನಾಡಿ, ಮಹನೀಯರುಗಳ ಜೀವನ ಸಾಧನೆ ಹಾಗೂ ಆದರ್ಶಗಳು ಪ್ರೇರಣೆ ನೀಡುತ್ತವೆ. ಅವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿರುತ್ತದೆ. ದೃಢ ನಿರ್ಧಾರ ಹಾಗೂ ನಿರಂತರ ಪ್ರಯತ್ನದಿಂದ ನಮ್ಮಲ್ಲಿರುವ ದುರ್ಗುಣಗಳನ್ನು ಮೆಟ್ಟಿ ಸದ್ಗುಣಗಳನ್ನು ಬೆಳಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಬದಲಾವಣೆ ಹೊಂದಲು ಸಾಧ್ಯ ಎಂಬುದನ್ನು ರತ್ನಾಕರ ಎಂಬ ಒಬ್ಬ ಸಾಮಾನ್ಯ ಬೇಟೆಗಾರ ವೃತ್ತಿಯ ವ್ಯಕ್ತಿ ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆ ಹೊಂದಿರುವುದೇ ಉತ್ತಮ ನಿದರ್ಶನ. ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಗ್ರಂಥವು ಇಡೀ ಜಗತ್ತಿಗೆ ಆದರ್ಶ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಸುವ ಶ್ರೇಷ್ಠ ಮಹಾ ಕಾವ್ಯವಾಗಿದೆ. ಮಹರ್ಷಿ ವಾಲ್ಮೀಕಿಯ ಜೀವನ ಸಂದೇಶಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಪ್ರಾಚಾರ್ಯರಾದ ಎಂ ಎ ಹಿರೇಮಠ, ಮಮತಾ ಹಿರೇಮಠ, ಮಂಜುನಾಥ್ ಪಾತ್ರೊಟ, ಐ ಕೆ ನದಾಫ, ನವೀನ್ ಹಿರೇಮಠ ಸೇರಿದಂತೆ ಮತ್ತಿತರರು ಇದ್ದರು.
Related Posts
Add A Comment