ಸಿಂದಗಿ: ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರು ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಾಗೆಯೇ ಮಾನವೀಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ್ದರು ಎಂದು ಪ್ರಾಚಾರ್ಯ ವಿಮಲಕಾಂತ ಪಾಟೀಲ ಹೇಳಿದರು.
ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಪ.ಪೂ.ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡ ವಾಲ್ಮೀಕಿ ಜಯಂತಿ ಅಂಗವಾಗಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ವಾಲ್ಮೀಕಿ ಮಹರ್ಷಿ ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರದ್ದಾಗಿದ್ದು, ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ಸತತ ಪರಿಶ್ರಮವಿದ್ದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಉಪ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪಿ.ವ್ಹಿ.ಮಹಲಿನಮಠ, ಎನ್.ಬಿ.ಪೂಜಾರಿ, ಎಸ್.ಜಿ.ಮಾರ್ಸನಳ್ಳಿ, ಎಸ್.ಎಚ್.ಜಾಧವ, ಬಿ.ಬಿ.ಜಮಾದಾರ, ರಾಹುಲ ನಾರಾಯಣಕರ್, ಎನ್.ಎಂ.ಶೆಳ್ಳಗಿ, ವ್ಹಿ.ಕೆ.ಹಿರೇಮಠ, ಐ.ಎಸ್.ಶಿವಸಿಂಪಿಗೇರ್, ವ್ಹಿ.ಪಿ.ನಂದಿಕೋಲ, ಸುಭಾಸ ಹೊಸಮನಿ, ಆರ್.ಎಂ.ಕೊಳ್ಳೂರೆ, ನೀಲಕಂಠ ಮೇತ್ರಿ, ಅಡಿವೆಪ್ಪ ದಸ್ಮಾ, ಎ.ಬಿ.ಬಮ್ಮಣ್ಣಿ, ಭಾಗಮ್ಮ ಕೋರಿ, ಶರಣು ಹೂಗಾರ, ಗವಿಸಿದ್ದಪ್ಪ ಆನೆಗುಂದಿ, ಮೇಘಾ ಕಮರಡ್ಡಿ, ಲಕ್ಷ್ಮೀ ಕನ್ನೋಳ್ಳಿ, ಪ್ರಿಯಾಂಕಾ ಪಡಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು.
Related Posts
Add A Comment