ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನೇತ್ರದಾನ ಜಾಗೃತಿ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನೇತ್ರ ದಾನ ಮಹಾದಾನ ಆ ನಿಟ್ಟಿನಲ್ಲಿ ನೇತ್ರದ ದಾನದಿಂದ ಸಾವಿನ ನಂತರ ನಮ್ಮ ಕಣ್ಣುಗಳು ಬೇರೆಯವರ ಮೊದಲ ನೋಟವಾಗುತ್ತವೆ ಎಂದು ಶ್ರೀ.ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ನೇತ್ರಶಾಸ್ತ್ರ ವಿಭಾಗದ ರಮ್ಯಾ ಕಾರಜೋಳ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಬಿ.ಎಲ್.ಡಿ.ಇ ಶ್ರೀ.ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ನೇತ್ರಶಾಸ್ತ್ರ ವಿಭಾಗದ ನೇತ್ರದಾನ ಪಾಕ್ಷಿಕ ಆಚರಣೆ ಹಾಗೂ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಸಹಯೋಗದಲ್ಲಿ ಸೆ.೦೩ ರಂದು ‘ನೇತ್ರದಾನ ಮಾಡಿ ಇಬ್ಬರ ಅಂಧರ ಬಾಳಿಗೆ ಬೆಳಕಾಗಿರಿ’ ಎಂಬ ಧ್ಯೇಯ ವಾಕ್ಯದಡಿ ನೇತ್ರದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಈ ವೇಳೆಯಲ್ಲಿ ಮಾತನಾಡಿದ ಅವರು, ನೇತ್ರದಾನದ ಮಹತ್ವ ಮತ್ತು ಇದರಿಂದಾಗುವ ಪ್ರಯೋಜನಗಳು ಮತ್ತು ಅವುಗಳ ಸಂರಕ್ಷಣೆ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ಡಾ.ಅನೀಲ ಭೀ.ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾನಗಳಲ್ಲಿ ಶ್ರೇಷ್ಟ ನೇತ್ರ ದಾನ ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ನೇತ್ರದಾನಕ್ಕೆ ಮಂದಾಗಿ ಇತರರ ಬಾಳಿಗೆ ಬೆಳಕಾಗುವುದು ಅಮೂಲ್ಯವಾದದ್ದು, ಪ್ರತಿಯೊಬ್ಬರು ನೇತ್ರದಾನಕ್ಕೆ ನೊಂದಾಯಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಧರ್ಮಗುರು ಪ್ರಸಾದ ಎಂ.ಪಿ, ಡಾ.ಮಿಲನ್ ರಾಠೋ ವೈದ್ಯಾಧಿಕಾರಿಗಳು ಮಹಾವಿದ್ಯಾಲಯದ ಬೋಧಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

