ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕ್ರೀಡಾಕೂಟವು ಗೆಲುವು–ಸೋಲಿನಾಚೆಗೆ ವಿದ್ಯಾರ್ಥಿಗಳಲ್ಲಿ ಶಿಸ್ತು, ತಾಳ್ಮೆ, ನಾಯಕತ್ವ ಹಾಗೂ ಸವಾಲುಗಳನ್ನು ಎದುರಿಸುವ ಮನೋಭಾವ ಬೆಳೆಸುವ ವೇದಿಕೆಯಾಗಿದೆ. ಸಮಗ್ರ ಶಿಕ್ಷಣದಲ್ಲಿ ಕ್ರೀಡೆಗೆ ಅವಿಭಾಜ್ಯ ಸ್ಥಾನವಿದೆ ಎಂದು ಬಸವನಬಾಗೇವಾಡಿ ತಾಲ್ಲೂಕಿನ ನೂತನ ದೈಹಿಕ ಶಿಕ್ಷಣ ಪರಿವೀಕ್ಷಕ ರುದ್ರಪ್ಪ ನರೇಗಲ್ಲ ಹೇಳಿದರು.
ಮಂಗಳವಾರ ಆಲಮಟ್ಟಿಯ ಶಾಲಾ ಮೈದಾನದಲ್ಲಿ ಚಿಮ್ಮಲಗಿ ಭಾಗ–೧ಎ ಸರ್ಕಾರಿ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಆಯೋಜಿಸಿದ್ದ ಆಲಮಟ್ಟಿ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸಂಗಮೇಶ ಬಿರಾದಾರ ಕ್ರೀಡಾಜ್ಯೋತಿ ಸ್ವೀಕರಿಸಿದರು.
ಚಿಮ್ಮಲಗಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ದೇವೇಂದ್ರಪ್ಪ ಕಾರಬಾರಿ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಣ ಸಂಯೋಜಕ ಯು.ವೈ. ಬಶೆಟ್ಟಿ, ಎಂ.ವಿ. ಗಬ್ಬೂರ, ಸುರೇಶ ಹುರಕಡ್ಲಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಲೀಂ ದಡೇದ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಎಂ. ಮುಲ್ಲಾ, ಬಿ.ಎಸ್. ಯರವಿನತೆಲಿಮಠ, ಬಿ.ಡಿ. ಚಲವಾದಿ, ಸಿ.ಎಸ್. ಚಿಮ್ಮಲಗಿ, ರವಿಶಂಕರ ಕೋತಿನ, ಎಚ್.ಎಫ್. ಕಟ್ಟಿಮನಿ, ರಾಘವೇಂದ್ರ ಕುಲಕರ್ಣಿ, ಶಿವಾಜಿ ಕಟ್ಟಿಮನಿ, ತುಕಾರಾಂ ಕಟ್ಟಿಮನಿ, ನಾಗೇಶ ಮಹೇಂದ್ರಕರ, ಕೆ.ಎಸ್. ಮಾಳಗೊಂಡ, ಎಲ್.ಸಿ. ಚಲವಾದಿ, ಎನ್.ಬಿ. ದಾಸರ, ಪ್ರಕಾಶ ಇಜೇರಿ, ದೇವು ವಾಲಿಕಾರ ಉಪಸ್ಥಿತರಿದ್ದರು.
ಆಲಮಟ್ಟಿಯಲ್ಲಿ ಚಿಮ್ಮಲಗಿ ಭಾಗ ೧ ಎ ಶಾಲೆಯ ಆಶ್ರಯದಲ್ಲಿ ಜರುಗಿದ ಆಲಮಟ್ಟಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ತಂದ ಕ್ರೀಡಾ ಜ್ಯೋತಿಯನ್ನು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂಗಮೇಶ ಬಿರಾದಾರ, ಯು.ವೈ. ಬಶೆಟ್ಟಿ, ದೇವೇಂದ್ರಪ್ಪ ಕಾರಬಾರಿ ಸ್ವೀಕರಿಸಿದರು

