ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆಯು ನೀಡುವ ‘ಪ್ರೊ. ಎಚ್.ಟಿ. ಪೋತೆ ವಿಮರ್ಶೆ ಹಸ್ತಪ್ರತಿ’ ರಾಜ್ಯಮಟ್ಟದ ಪ್ರಶಸ್ತಿಗೆ ಹಸ್ತಪ್ರತಿಗಳನ್ನು ಹಾಗೂ ದಿ. ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ನೀಡುವ ‘ಬೆರಗು ಪುಸ್ತಕ ಪ್ರಶಸ್ತಿ’ಗೆ ಪ್ರಕಟಿತ ಕೃತಿಗಳನ್ನು ಆಹ್ವಾನಿಸಿದೆ.
‘ಪ್ರೊ. ಎಚ್.ಟಿ. ಪೋತೆ ಹಸ್ತಪ್ರತಿ’ ಪ್ರಶಸ್ತಿಯು ₹10 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಮುದ್ರಣಕ್ಕೆ ಸಿದ್ಧವಾದ ವಿಮರ್ಶೆ ಮತ್ತು ವಿಚಾರ ಸಾಹಿತ್ಯಕ್ಕೆ ಸಂಬಂಧಿತ ಹಿನ್ನೆಲೆಯ ಹಸ್ತಪ್ರತಿಗಳನ್ನು ಆಯ್ಕೆಗಾಗಿ ಸಲ್ಲಿಸಬಹುದು. ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಟೈಪ್ ಮಾಡಿದ ಹಸ್ತಪ್ರತಿಗಳನ್ನು ಸ್ವೀಕರಿಸಲಾಗುವುದು.
ಆಸಕ್ತರು ಹಸ್ತಪ್ರತಿಯ ಎರಡು ಪ್ರತಿಗಳನ್ನು ವಿಜಯಲಕ್ಷ್ಮೀ ರಮೇಶ ಕತ್ತಿ, ಪ್ರಕಾಶಕರು, ಬೆರಗು ಪ್ರಕಾಶನ ಸಂಸ್ಥೆ, ವಿನಾಯಕ ನಗರ, ಆಲಮೇಲ–586202, ವಿಜಯಪುರ ಜಿಲ್ಲೆ, ಮೊ. 7795341335 ವಿಳಾಸಕ್ಕೆ ಅಕ್ಟೋಬರ್ 10ರೊಳಗೆ ಕಳುಹಿಸಬೇಕು.
ಬಾಕ್ಸ್
’ಬೆರಗು ಪುಸ್ತಕ ಪ್ರಶಸ್ತಿ–2025’ಕ್ಕೆ ಪ್ರಕಟಿತ ಕೃತಿಗಳ ಆಹ್ವಾನ
ದಿ. ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ನೀಡುವ ‘ಬೆರಗು ಪುಸ್ತಕ ಪ್ರಶಸ್ತಿ–2025’ಕ್ಕೆ 2025ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು ₹5 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಆಸಕ್ತ ಲೇಖಕರು ತಮ್ಮ ಕೃತಿಯ ಎರಡು ಪ್ರತಿಗಳನ್ನು ಅಕ್ಟೋಬರ್ 10ರೊಳಗೆ ಸಲ್ಲಿಸಬೇಕು. ಪಿಎಚ್.ಡಿ. ಪ್ರಬಂಧಗಳು ಹಾಗೂ ಸಂಪಾದಿತ ಕೃತಿಗಳನ್ನು ಹೊರತುಪಡಿಸಿ, ಕನ್ನಡದಲ್ಲಿ ಪ್ರಕಟವಾದ ಎಲ್ಲ ಪ್ರಕಾರದ ಪುಸ್ತಕಗಳನ್ನು ಪ್ರಶಸ್ತಿಗೆ ಸಲ್ಲಿಸಬಹುದು ಎಂದು ಬೆರಗು ಪ್ರಕಾಶನದ ಪ್ರಕಟಣೆ ತಿಳಿಸಿದೆ.

