ಭಾರತ ಕಮ್ಯುನಿಸ್ಟ್ ಪಕ್ಷ (ಮ್ಯಾಕ್ಸ್೯ವಾದಿ) ವತಿಯಿಂದ ಮುಖ್ಯಮಂತ್ರಿ ಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತ ಕಮ್ಯುನಿಸ್ಟ್ ಪಕ್ಷ (ಮ್ಯಾಕ್ಸ್೯ವಾದಿ) ವತಿಯಿಂದ ವಿಜಯಪುರ ಜಿಲ್ಲೆ ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವಂತೆ ಆಗ್ರಹಿಸಿ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ ಮಾತನಾಡಿ, ವಿಜಯಪುರ ಸಂಪೂರ್ಣ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು ಹಾಗೂ ಬರ ಪರಿಹಾರ ಕೆಲಸಗಳು ಪ್ರಾರಂಭಿಸಬೇಕು. ಪ್ರತಿ ಎಕರೆಗೆ ಬೆಳೆ ಹಾನಿ ಎಂದು ೫೦ ಸಾವಿರ ರೂ.ಗಳು ರೈತರಿಗೆ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಣ್ಣಾರಾಯ ಇಳಗೇರ, ಲಕ್ಷ್ಮಣ ಹಂದ್ರಾಳ, ಸುರೇಶ ಜಿ ಬಿ, ಸುರೇಖಾ ರಜಪೂತ್, ಖಾಜಾಸಾಬ್ ಕೋಲಾರ್, ಸಾಯಬಣ್ಣ ಹಂದಿಗನೂರ, ಗೋಪಾಲ ಶೀವಗದ್ದಿಗೆ, ರೇವಣಸಿದ್ದ ಪೂಜಾರಿ, ಮಹೇಶ ಗದ್ದಿಗೆ ಮತ್ತಿತರರು ಉಪಸ್ಥಿತರಿದ್ದರು.

