ಇಂಡಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ವೇಳೆ ಆಹಾರ ನಿರೀಕ್ಷಿಕ ಪರಮಾನಂದ ಹೂಗಾರ ಹಾಗೂ ಗ್ರಾಮೀಣ ಪೋಲಿಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಸೋಮೇಶ ಗೆಜ್ಜೆ ಹಾಗೂ ಪೊಲೀಸರು ದಾಳಿಗೈದು ಅಕ್ಕಿ ಹಾಗೂ ವಾಹನ ಜಪ್ತಿ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬರಗುಡಿ ಅಹಿರಸಂಗ ರಸ್ತೆಯಲ್ಲಿ ನಡೆದಿದೆ.
ಸೂರ್ಯಕಾಂತ ಗೌಡಗಾಂವ ಬಂಧಿತ ಆರೋಪಿ. ಹಾಗೂ ಈತನಿಗೆ ಸೋಲಾಪುರದ ಸೋಹೇಲ್ ಕಲಬುರಗಿ ಅಕ್ಕಿ ತರಲು ಹೇಳಿದ್ದ ಎನ್ನಲಾಗಿದೆ.
ಆರೋಪಿ ಟಾಟಾ ಎಸಿ ವಾಹನದಲ್ಲಿ 450 ಕೆಜಿ ಅಕ್ಕಿ ಸಾಗಾಟ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು ಅಕ್ಕಿ, ವಾಹನ ಜಪ್ತಿಗೈದಿದ್ದಾರೆ.
ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Posts
Add A Comment