ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅನೌಪಚಾರಿಕ ಶಿಕ್ಷಣ ಸಂಸ್ಥೆ ಬಿಜಾಪುರ ನಗರ ಸ್ಲಂ ಅಭಿವೃದ್ದಿ ಸಮಿತಿ(ರಿ) ಹಾಗೂ ಡಾ|| ಬಿ ಆರ್ ಅಂಬೇಡ್ಕರ ನಗರದ ನಿವಾಸಿಗಳು ಅಂಬೇಡ್ಕರ ನಗರವನ್ಮು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಲು ಒತ್ತಾಯಿಸಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಅಭಿಯಂತರರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ವೇಳೆ ಬಿಜಾಪುರ ನಗರ ಸ್ಲಂ ಅಬಿವೃದ್ದಿ ಸಮಿತಿ ಅಧ್ಯಕ್ಷರಾದ ಮುತ್ತು ಬೋವಿ ಮಾತನಾಡಿ, ಕಂದಾಯ ಗ್ರಾಮ ಮಾಡಿದರೆ ಮೂಲಭೂತ ಸೌಕರ್ಯಗಳು ಸರ್ಕಾರದಿಂದ ದೊರೆಯುತ್ತವೆ. ಹಾಗೂ ಅಲ್ಲಿ ವಾಸಿಸುತ್ತಿರುವ ಎಲ್ಲ ನಿವಾಸಿಗಳಿಗೆ ಹಕ್ಕು ಪತ್ರ ದೊರೆಯುತ್ತವೆ. ಕಾರಣ ಮುಂದಿನ ಕಾರ್ಯಕ್ಕೆ ದಾಖಲಾತಿಗಳು ರವಾನಿಸಬೇಕೆಂದು ಕೋರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಲ್ಲಾದ ಪಾಟೀಲ ರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಬದಲ್ಲಿ ಮಿನಾಕ್ಷಿ ಕಾಲೆಬಾಗ, ಭಾರತಿ ಶಿವಣಗಿ, ಲಕ್ಷೀಂಬಾಯಿ ಆನೆಕಲ್, ಸ್ಲಂ ಸಮಿತಿ ಸದಸ್ಯರು ಮತ್ತು ಬಿ ಆರ್ ಅಂಬೇಡ್ಕರ ನಗರದ ನಿವಾಸಿಗಳಾದ ಕೃಷ್ಣಾ ಪ್ರಭಾಕರ, ರವಿ ವಾಲಿಕಾರ, ಪ್ರಕಾಶ ಕಳ್ಳೆನ್ನವರ, ಸುಬಾಸ ವಾಲಿಕಾರ, ಮಹಾಂತೇಶ ಸಿಂದ್ರೆ, ವಿಶಾಲ ಪ್ರಭಾಕರ, ಬಾಸ್ಕರ ನಾಗರಳ್ಳಿ, ಅಶೋಕ ವಾಲಿಕಾರ, ಸಾವಿತ್ರಿ ಪುಜಾರಿ, ಶಾಂತಾಬಾಯಿ ಕಳ್ಳೆನ್ನವರ, ಜಾನಕಿ ಕಳ್ಳಿಮನಿ, ಮಹ್ಮದಇಸಾಕ ಜಮಾದಾರ, ಕಾಮಿನಿ ಕಸಬೆ, ಸೇರಿದಂತೆ ಅನೇಕ ಸದಸ್ಯರು ಬಾಗವಹಿಸಿದ್ದರು.

