ಉದಯರಶ್ಮಿ ದಿನಪತ್ರಿಕೆ
ಇಂಡಿ: ಸೆ.೫ ರಿಂದ ಇಂಡಿ ತಾಲೂಕಿನಲ್ಲಿ ಪ್ರಜಾ ಸೇವಾ ಅಂದೋಲನ ನಡೆಯಲಿದ್ದು ಅಂದು ರೈತರು, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ನಿಗದಿತ ನಮೂನೆಯಲ್ಲಿ ಲಿಖಿತ ರೂಪದಲ್ಲಿ ಸಂಬಂಧಪಟ್ಟ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮದವರು ಪಾಲ್ಗೊಳ್ಳಲು ಶಾಸಕ ಯಶವಂತರಾಯಗೌಡ ಪಾಟೀಲರು ತಿಳಿದರು.
ನಗರದ ತಾ.ಪಂ ಸಬಾಭವನದಲ್ಲಿ ನಡೆದ ಕುಡಿಯುವ ನೀರು ಮತ್ತು ಪ್ರಜಾ ಸೇವೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.
ಇಂಡಿ ನಗರದಲ್ಲಿ ಸೆ. ೫ ರಂದು ಪ್ರಜಾ ಸೇವೆ ಕಾರ್ಯಕ್ರಮ ೧ ನೇ ಶನಿವಾರ ಶ್ರೀ ಶಾಂತೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆಯಲಿದೆ ಎಂದರು.
ತಾಲೂಕಿನಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಕೃಷ್ಣಾ ಕಾಲುವೆಯ ನೀರು ಮತ್ತು ಅದರ ನಿರ್ವಹಣೆ ಕುರಿತು ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಕ್ರಮ ವಹಿಸಬೇಕು. ಎಲ್ಲಿಯೂ ನೀರಿನ ತೊಂದರೆ ಯಾಗದಂತೆ ಜಾಗರೂಕತೆ ವಹಿಸಲು ತಿಳಿಸಿದರು.
ಭಾರತ ಜೋಡೊ ಅಭಿಯಾನ, ಶಿಕ್ಷಕರ ದಿನಾಚರಣೆ, ಹಾಗೂ ವಿಜಿ ರಾಮಜಿ ಯೋಜನೆ ಕುರಿತು ಚರ್ಚಿಸಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಬರ ಪರಿಸ್ಥಿತಿ ಕುಡಿಯುವ ನೀರಿನ ಲಭ್ಯತೆ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ತಾ.ಪಂ ಇಒ ಮಹಾದೇವಪ್ಪ ಏವೂರ ಮಾತನಾಡಿ ಎರಡನೆಯ ಶನಿವಾರ ಅಥರ್ಗಾ ಗ್ರಾಮದ ಗ್ರಾ.ಪಂ ಕಾರ್ಯಾಲಯ ಸಬಾಭವನದಲ್ಲಿ ಮೂರನೆಯ ಶನಿವಾರ ಸಾಲೋಟಗಿ ಗ್ರಾಮದ ಶ್ರೀ ಶಿವಯೋಗೀಶ್ವರ ದೇವಸ್ಥಾನದ ಆವರಣದಲ್ಲಿ ನಾಲ್ಕನೆಯ ಶನಿವಾರ ಹೊರ್ತಿ ಗ್ರಾಮದ ಗ್ರಾ.ಪಂ ಕಾರ್ಯಾಲಯದಲ್ಲಿ ಪ್ರಜಾ ಸೇವಾ ಕಾರ್ಯಕ್ರಮ ನಡೆಯಲಿದೆ ಎಂದರು.
ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಮೂರ್ತಿ, ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಯೋಜನಾಧಿಕಾರಿ ನಂದೀಪ ರಾಠೋಡ, ಸಂಜಯ ಖಡಗೇಕರ, ಪ್ರಕಾಶ ರಾಠೋಡ, ಎಇಇ ಹೆಸ್ಕಾಂ ಎಸ್.ಆರ್.ಮೆಂಡೆಗಾರ, ತೋಟಗಾರಿಕೆಯ ಸತೀಶ ಬಡಿಗೇರ, ಲೋಕೋಪಯೋಗಿ ಇಲಾಖೆಯ ದಯಾನಂದ ಮಠ, ಕೆಬಿಜೆಎನ್ ಎಲ್ ಅಧಿಕಾರಿಗಳಾದ ಸುರೇಶ ಯಾತನೂರ, ಎಸ್.ಎಂ. ಅಲ್ದಿ, ಎನ್.ವಿ.ಕಾಟೇ, ಸಂತೋಷ ದಾಯಿಗೋಡೆ, ಪಿ.ಎಂ.ಪೂಜಾರಿ ಮತ್ತಿತರರಿದ್ದರು.

