ಇಂಡಿಯಲ್ಲಿ ಮುಂದುವರೆದ ಬಿಜೆಪಿ ಧರಣಿ ಸತ್ಯಾಗ್ರಹ
ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಧರಣಿ ಸತ್ಯಾಗ್ರಹ ಮುಂದುವರೆದಿದೆ.
ಬುಧವಾರ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಎಸ್.ಬಿ.ಕಂಬೋಗಿ ಮತ್ತು ಸಂಗಡಿಗರು, ಕರವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ ಮತ್ತು ಸಂಗಡಿಗರು, ಮಹಿಳಾ ಮೋರ್ಚಾ ಅಧ್ಯಕ್ಷೆ ಬಸಮ್ಮ ಮರಡಿ, ಜೆಡಿ ಎಸ್ ಪಕ್ಷದ ತಾಲೂಕಾ ಅಧ್ಯಕ್ಷ ಬಿ.ಡಿ.ಪಾಟೀಲ, ಅಯೂಬ ನಾಟಿಕಾರ, ಡಾ|| ರಮೇಶ ರಾಠೋಡ ತಮ್ಮ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಮಾಜಿ ಸಚಿವ ಮತ್ತು ಬಿಜೆಪಿ ಧುರೀಣ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ ಇಂಡಿ ತಾಲೂಕಿನಲ್ಲಿ ಮಳೆಯ ಕೊರತೆ ಮತ್ತು ಕೃಷಿ ಪರಿಸ್ಥಿತಿಯನ್ನು ಪ್ರತ್ಯೇಕವಾಗಿ ಮರುಪರಿಶೀಲಿಸುವದು ಅಗತ್ಯವಾಗಿದೆ ಎಂದರು.
ಬಿಜೆಪಿಯ ರಾಜ್ಯ ಒ.ಬಿ ಸಿ ಮೋರ್ಚಾ ಉಪಾಧ್ಯಕ್ಷ ವಿವೇಕ ಡಬ್ಬಿ ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ, ಕಾಸುಗೌಡ ಬಿರಾದಾರ, ಮಲ್ಲಿಕಾರ್ಜುನ ಕಿವಡೆ, ಶೀಲವಂತ ಉಮರಾಣಿ, ದೇವೆಂದ್ರ ಕುಂಬಾರ, ಶಂಕರಗೌಡ ಪಾಟೀಲ, ಅನೀಲ ಜಮಾದಾರ, ಅನೀಲಗೌಡ ಬಿರಾದಾರ, ಸಂತೋಷ ಪಾಟೀಲ, ರಾಮಸಿಂಗ ಕನ್ನೊಳ್ಳಿ, ಮಹೇಶ ಹೂಗಾರ, ಮಲ್ಲು ಗುಡ್ಲ, ಶಿವಯೋಗಿ ರೂಗಿಮಠ, ಪ್ರಶಾಂತ ಗವಳಿ, ಮಂಜು ದೇವರ, ಶ್ರೀಶೈಲಗೌಡ ಪಾಟೀಲ, ಮಲ್ಲು ಪಡನೂರ ಈರಣ್ಣಗೌಡ ಪಾಟೀಲ, ಗಜಾನನ ಗಿಣ್ಣಿ, ಜೆಟ್ಟು ಮರಡಿ, ಮಹೇಶ ಹೂಗಾರ ಮತ್ತಿತರಿದ್ದರು.

