ತಾಳಿಕೋಟಿ. ಪಟ್ಟಣದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ತಾಲೂಕಾ ಆಡಳಿತ ತಾಲೂಕ ಪಂಚಾಯತ ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ತಾಳಿಕೋಟಿ ಮತ್ತು ವಾಲ್ಮೀಕಿ ಸಮಾಜದ ವತಿಯಿಂದ ಸಡಗರದಿಂದ ಆಚರಿಸಲಾಯಿತು.
ಶನಿವಾರ ಪಟ್ಟಣದ ದೇವರ ಹಿಪ್ಪರಗಿ ರಸ್ತೆಯಲ್ಲಿರುವ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಸಮಾಜ ದಲಿತ ಪರ ಸಂಘಟನೆಗಳ ಸಹಯೋಗ ತಾಲೂಕ ಆಡಳಿತ ತಾಲೂಕ ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ ಮುದ್ದೇಬಿಹಾಳ ಹಾಗೂ ಪುರಸಭೆ ತಾಳಿಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ ಜಯಂತೋತ್ಸವವನ್ನು ಏರ್ಪಡಿಸಲಾಗಿತ್ತು. ನಂತರ ತಹಸಿಲ್ದಾರ್ ಕಾರ್ಯಾಲಯ ಸಭಾಂಗಣದಲ್ಲಿ ತಹಸಿಲ್ದಾರ್ ಕೀರ್ತಿ ಚಾಲಕ್ ಅವರು ಮಹರ್ಷಿ ವಾಲ್ಮೀಕಿ ಇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಪ್ರೇಮನಗೌಡ ಪಾಟೀಲ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಬೇಡ ಜನಾಂಗದಲ್ಲಿ ಜನಸಿದರೂ ಇಡೀ ವಿಶ್ವಕ್ಕೆ ಸಮಾಜಮುಖಿ ಚಿಂತನೆಯನ್ನು ನೀಡಿದ್ದಾರೆ. ಮಹಾನ್ ಗ್ರಂಥ ರಾಮಾಯಣ ರಚಿಸುವುದರ ಮೂಲಕ ದಾರ್ಶನಿಕ ಎನಿಸಿಕೊಂಡರು. ಅವರೊಬ್ಬ ಮಹಾ ತಪಸ್ವಿ. ಯಾವುದೇ ಜಾತಿ ವರ್ಗಕ್ಕೆ ಸೀಮಿತರಾದವರಲ್ಲ. ಅವರ ರಾಮಾಯಣ ಗ್ರಂಥದಿಂದ ಭಾರತದ ಸಂಸ್ಕೃತಿ ಶ್ರೀಮಂತವಾಗಿದೆ. ಅವರ ಆದರ್ಶಗಳು ಸಾರ್ವಕಾಲಿಕವಾದವುಗಳಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ ಮಾತನಾಡಿದರು.
ಈ ಸಮಯದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಿ .ಆರ್. ಬಿರಾದಾರ, ಪುರಸಭೆ ಮುಖ್ಯ ಅಧಿಕಾರಿ ಮೋಹನ ಜಾದವ, ನಿವೃತ್ತ ಶಿಕ್ಷಕ ಎಲ್. ಬಿ. ಕೊಡೆಕಲ್, ಪಿಎಸ್ಐ ಆರ್.ಎಸ್.ಭಂಗಿ, ಶಿಕ್ಷಕ ರಾಜು ವಿಜಾಪೂರ, ವಾಲ್ಮೀಕಿ ಸಮಾಜದ ಗಣ್ಯರಾದ ಕಾಶಿನಾಥ್ ಪಾಟೀಲ, ಸಂಜೀವಪ್ಪ ಬರದೇನಾಳ, ರಮೇಶ್ ವಣಿಕ್ಯಾಳ, ಕುಮಾರ ಅಸ್ಕಿ, ಯಮನಪ್ಪ ಬರ್ದೇನಾಳ, ಶ್ರೀಕಾಂತ್ ಕೊಡೆಕಲ್, ಜಗದೀಶ್ ಪಾಟೀಲ, ರಮೇಶ ಮೇಲಿನಮನಿ, ರಾಮಣ್ಣ ಕಟ್ಟಮನಿ, ಗೋಪಾಲ ಕಟ್ಟಿಮನಿ, ದುಂಡಪ್ಪ ಬಾಗೇವಾಡಿ, ಪ್ರಕಾಶ್ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಎನ್ .ವಿ .ಕೋರಿ, ಎಸ್. ಎಂ .ಕಲಬುರ್ಗಿ, ಎಸ್. ಎನ್ .ಮಲ್ಲಾಡೆ, ಶಿಕ್ಷಕ ಬಿ .ಆರ್. ಬಿರಾದಾರ, ಕಂದಾಯ ಇಲಾಖೆಯ ಮುನ್ನಾ ಅತ್ತಾರ ಮತ್ತಿತರರು ಇದ್ದರು.
Related Posts
Add A Comment