ದೇವರಹಿಪ್ಪರಗಿ: ಮಹರ್ಷಿ ವಾಲ್ಮೀಕಿ ರಾಮಾಯಣ ಎಂಬ ಸುಂದರ ಮಹಾಕಾವ್ಯವನ್ನು ರಚಿಸುವುದರ ಮೂಲಕ ಕವಿಗಳ ಕವಿ ಎಂದು ಇತಿಹಾಸದಲ್ಲಿ ಹೆಸರಾಗಿದ್ದಾನೆ ಎಂದು ಕಾಂಗ್ರೆಸ್ ಧುರೀಣ ಸಾಯಿಕುಮಾರ ಬಿಸನಾಳ ಹೇಳಿದರು.
ತಾಲ್ಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಶನಿವಾರ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು. ಜಗತ್ತಿನಲ್ಲಿ ಸತ್ವ ಮತ್ತು ಮೌಲ್ಯಯುತ ಸಾಹಿತ್ಯ ಸೃಷ್ಟಿಗೆ ಅಡಿಪಾಯವಾದ ರಾಮಾಯಣವನ್ನು ರಚಿಸುವುದರ ಮೂಲಕ ಮಹರ್ಷಿ ವಾಲ್ಮೀಕಿಯವರು ಮಮತೆ, ಭಾತೃತ್ವ, ತ್ಯಾಗ, ಮಮಕಾರ, ದೇಶಪ್ರೇಮ, ಅಳಿಲು ಸೇವೆ, ಪಿತೃ-ಮಾತೃ-ಭಾತೃ ವಾಕ್ಯ ಪರಿಪಾಲನೆಯಂತಹ ಮಾನವೀಯ ಮೌಲ್ಯಗಳನ್ನು ಇಡೀ ಮಾನವಕುಲಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇಂಥ ಕವಿಯನ್ನು ಮಹಾಕವಿ ಕಾಳಿದಾಸ ‘ಕವಿಗಳಕವಿ’ ಎಂದು ಗೌರವಿಸಿ ಶ್ಲಾಘಿಸಿದ್ದಾನೆ ಎಂದರು.
ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಮಳಸಿದ್ದಯ್ಯ ಹಿರೇಮಠ ಪೂಜೆ ಸಲ್ಲಿಸಿದರು. ನಂತರ ಪ್ರಸಾದ ವಿತರಿಸಲಾಯಿತು.
ಶಿವಪ್ಪ ಪೂಜಾರಿ, ವಿಠ್ಠಲ ದೇಗಿನಾಳ, ವಿದ್ಯಾಧರ ಸಂಗೋಗಿ, ಶರಣಬಸು ದೇಗಿನಾಳ, ಶಿವಪದ್ಮ ಹಳ್ಳಿ, ಅಪ್ಪಣ್ಣ ಗಣಜಲಿ, ರಾಜು ದೇಗಿನಾಳ, ಬಸವರಾಜ ಗಣಜಲಿ, ಅಂಬಾದಾಸ ಮಾನೆ, ಗೋವಿಂದ ದಳವಾಯಿ, ಸದಾಶಿವ ಜಂಬಗಿ, ಲಾಲೂ ಮುಲ್ಲಾ, ನಬಿಸಾಬ್ ಮುಲ್ಲಾ, ರಫೀಕ್ ಮುಲ್ಲಾ, ಸೇರಿದಂತೆ ಗ್ರಾಮಸ್ಥರು ಇದ್ದರು.
Related Posts
Add A Comment