ದೇವರಹಿಪ್ಪರಗಿ: ಕನ್ನಡಪರ ಸೇರಿದಂತೆ ಪಟ್ಟಣದ ಎಲ್ಲ ಪ್ರಗತಿಪರ ಸಂಘಟನೆಗಳ ಸಹಕಾರದಿಂದ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸೋಣ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಶುಕ್ರವಾರ ಜರುಗಿದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ, ಶರಣ ಸಾಹಿತ್ಯ, ಚುಟುಕು ಸಾಹಿತ್ಯ ಪರಿಷತ್‌ಗಳು, ದಲಿತಪರ ಸಂಘಟನೆಗಳ ಸಲಹೆ ಸೂಚನೆಗಳನ್ನು ಪಾಲಿಸುವ ಮೂಲಕ ಕನ್ನಡ ನಾಡು, ನುಡಿಗೆ ಸೇವೆ ಸಲ್ಲಿಸಿದ ಪ್ರಮುಖರು ಹಾಗೂ ವಿವಿಧ ರಂಗಗಳ ಸಾಧಕರು ಸೇರಿದಂತೆ ಕನ್ನಡ ಭಾಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಜರುಗಲಿದೆ. ಜೊತೆಗೆ ಮುಖ್ಯವಾಗಿ ಕರ್ನಾಟಕಕ್ಕೆ ೫೦ರ ಸಂಭ್ರಮದ ಅಂಗವಾಗಿ ಅವಿಸ್ಮರಣೀಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶಿಷ್ಟವಾಗಿ ಆಚರಿಸೋಣ ಎಂದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಆರ್.ಕೊಕಟನೂರ, ಸಿಆರ್‌ಪಿ ವಿಜಯಲಕ್ಷ್ಮಿ ನವಲಿ, ತಾಲ್ಲೂಕು ಶಿಕ್ಷಕರ ಸಂಘದ ಸಂಘದ ಕಾರ್ಯದರ್ಶಿ ಜಿ.ಪಿ.ಬಿರಾದಾರ, ಕನ್ನಡಪರ ಸಂಘಟನೆಗಳ ಪ್ರಕಾಶ ಡೋಣೂರಮಠ, ರಹಿಮಾನ ಕಣಕಾಲ, ಚಂದ್ರಶೇಖರ ದಾನಗೊಂಡ ಮಾತನಾಡಿದರು.
ಶಿರಸ್ತೇದಾರ ಸುರೇಶ ಮ್ಯಾಗೇರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಭಾಸ್ ಬಸವರೆಡ್ಡಿ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಶೋಕ ಹೆಗಡೆ, ಕಾಲೇಜು ಅಧೀಕ್ಷಕ ಜಗನ್ನಾಥ ಸಜ್ಜನ, ಶ್ರೀನಿವಾಸ ಪವಾರ, ಬಸವರಾಜ ತಳಕೇರಿ, ಫಿರೋಜ್ ಮುಲ್ಲಾ, ಎನ್.ಎಮ್.ದಫೇದಾರ, ಎಚ್.ಕೆ.ಪಾಟೀಲ, ಶಿವಾನಂದ ಮರೋಳ, ಇಮಾಮ್‌ಸಾಬ್ ಮುಲ್ಲಾ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ಸಿಬ್ಬಂದಿ ಇದ್ದರು.
Related Posts
Add A Comment