ವಿಜಯಪುರ: ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಸ್ವಚ್ಛತೆ, ಶುಚಿತ್ವ ಮತ್ತು ನೈರ್ಮಲಕ್ಕಾಗಿ ನೀಡುವ ಕಾಯಕಲ್ಪ ಪ್ರಶಸ್ತಿ ವಿಜಯಪುರ ಜಿಲ್ಲೆಯ ೪೦ ಆರೋಗ್ಯ ಸಂಸ್ಥೆಗಳಿಗೆ ಲಭಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡುವ ಆಸ್ಪತ್ರೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರದಿಂದ ೨೦೧೫ ರಿಂದ ಕಾಯಕಲ್ಪ ಪ್ರಶಸ್ತಿ ನೀಡಲಾಗುತ್ತಿದ್ದು, ೨೦೧೯-೨೦ನೇ ಸಾಲಿನಲ್ಲಿ ಜಿಲ್ಲೆಯ ೧೫ ಆರೋಗ್ಯ ಸಂಸ್ಥೆಗಳಿಗೆ, ೨೦೨೦-೨೧ನೇ ಸಾಲಿನಲ್ಲಿ ೨೦ ಆರೋಗ್ಯ ಸಮಸ್ಥೆಗಳಿಗೆ ಪ್ರಶಸ್ತಿ ದೊರಕಿದ್ದು, ಈ ವರ್ಷ ೨೦೨೩ನೇ ಸಾಲಿನಲ್ಲಿ ಜಿಲ್ಲೆಯ ೪೦ ಆರೋಗ್ಯ ಸಂಸ್ಥೆಗಳಿಗೆ ಕಾಯಕಲ್ಪ ಪ್ರಶಸ್ತಿ ದೊರೆತಿದೆ.
ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕಾ ಆಸ್ಪತ್ರೆಗಳ ವಿಭಾಗದಲ್ಲಿ ತಾಲೂಕಾ ಆಸ್ಪತ್ರೆ ಬ.ಬಾಗೇವಾಡಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಪ್ರಾಥಮಿಕ ಆರೋಗ್ಯ ಕೇಂದ್ರ ವಿಭಾಗದಲ್ಲಿ ಜಿಲ್ಲೆಯಲ್ಲಿ ಪ್ರಾ.ಆ.ಕೇಂದ್ರ ತಿಕೋಟಾ ಅತ್ಯೂತ್ತಮ ಪ್ರಾ.ಆ.ಕೇಂದ್ರ, ಎಂದು ಪ್ರಶಸ್ತಿ ಪಡೆದಿರುತ್ತದೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವಿಭಾಗದಲ್ಲಿ ಬಾಗಲಕೋಟ ಮತ್ತು ಬಿಜಾಪುರ ಕ್ಲಸ್ಟರ್ ಮಟ್ಟದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ದರ್ಗಾ ಅತ್ಯುತ್ತಮ ನ.ಪ್ರಾ.ಆ.ಕೇಂದ್ರ ಪ್ರಶಸ್ತಿ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ವಿಭಾಗದಲ್ಲಿ ಎಸ್‌ಸಿ-ಎಚ್‌ಡಬ್ಲೂಸಿ ಕಗ್ಗೋಡ ಜಿಲ್ಲೆಗೆ ಪ್ರಥಮ ಸ್ಥಾನ, ಯಂಬತ್ನಾಳ ೧sಣ ರನ್ನರ್‌ಅಪ್ ಕಾಯಕಲ್ಪ ಪ್ರಶಸ್ತಿ ಪಡೆದಿದೆ.
ಜಿಲ್ಲಾ ಆಸ್ಪತ್ರೆ ವಿಭಾಗದಲ್ಲಿ ಜಿಲ್ಲಾ ಆಸ್ಪತ್ರೆ ವಿಜಯಪುರವು ಸಮಾಧಾನಕರ ಪ್ರಶಸ್ತಿಯನ್ನು ಪಡೆದಿರುತ್ತದೆ. ತಾಲೂಕಾ ಆಸ್ಪತ್ರೆ/ಸಮುದಾಯ ಆರೋಗ್ಯ ಕೇಂದ್ರ ವಿಭಾಗದಲ್ಲಿ ತಾಲೂಕಾ ಆಸ್ಪತ್ರೆ ಬ.ಬಾಗೇವಾಡಿಯು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದರೆ, ಸಮುದಾಯ ಆರೋಗ್ಯ ಕೇಂದ್ರಗಳಾದ ಚಡಚಣ, ಕಾಳಗಿ, ತಡವಲಗಾ, ನಾಲತವಾಡ ಮತ್ತು ನಿಡಗುಂದಿ ಸಮಾಧಾನಕರ ಪ್ರಶಸ್ತಿಯನ್ನು ಪಡೆದಿರುತ್ತವೆ. ಪ್ರಾಥಮಿಕ ಆರೋಗ್ಯ ಕೇಂದ್ರ ವಿಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತಿಕೋಟಾ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರೆ, ಹೂ.ಹಿಪ್ಪರಗಿ, ಮುಳವಾಡ, ರೋಣಿಹಾಳ, ತೆಲಗಿ, ಗೊಳಸಂಗಿ, ಹೊರ್ತಿ, ಇಂಚಗೇರಿ, ಲಚ್ಯಾಣ, ಚಿಕ್ಕಬೇವನೂರು, ಹೊನವಾಡ, ಹೊನ್ನೂಟಗಿ, ನಾಗಠಾಣ, ಶಿವಣಗಿ ಮತ್ತು ಇನಚಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಮಾಧಾನಕರ ಕಾಯಕಲ್ಪ ಪ್ರಶಸ್ತಿಯನ್ನು ಪಡೆದಿರುತ್ತವೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವಿಭಾಗದಲ್ಲಿ ಬಾಗಲಕೋಟ ಮತ್ತು ಬಿಜಾಪುರ ಕ್ಲಸ್ಟರ್ ಮಟ್ಟದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ದರ್ಗಾ ಅತ್ಯುತ್ತವಮ ನ.ಪ್ರಾ.ಆ.ಕೇಂದ್ರ ಮತ್ತು ಶಾಂತಿನಗರ ಸಮಾಧಾನಕರ ಪ್ರಶಸ್ತಿಯನ್ನು ಪಡೆದಿರುತ್ತವೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ವಿಭಾಗದಲ್ಲಿ Sಅ-ಊWಅ ಕಗ್ಗೋಡ ಜಿಲ್ಲೆಗೆ ಪ್ರಥಮ ಸ್ಥಾನ, ಯಂಬತ್ನಾಳ ೧sಣ ರನ್ನರ್‌ಅಪ್ ಇಂಗಳಗೇರಿ ಮತ್ತು ಹಿತ್ನಳ್ಳಿ ಎಲ್.ಟಿ ಕೇಂದ್ರಗಳು ೨ಟಿಜ ರನ್ನರ್‌ಅಪ್ ಪ್ರಶಸ್ತಿಯನ್ನು ಪಡೆದಿದೆ. ಡೋಣೂರ, ಹೆಬ್ಬಾಳ, ಯಾರನಾಳ, ಶಿರನಾಳ, ಜುಮನಾಳ, ಮಖನಾಪುರ, ಐನಾಪುರ, ಯಲಗುರ್, ರೂಡಗಿ, ಹುಳ್ಳುರ್, ಬಳಬಟ್ಟಿ ಮತ್ತು ಗಂಗನಳ್ಳಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಸಮಾಧಾನಕರ ಪ್ರಶಸ್ತಿಯನ್ನು ಪಡೆದಿವೆ.
ಪ್ರಶಸ್ತಿ ವಿಜೇತ ಎಲ್ಲ ಆರೋಗ್ಯ ಸಂಸ್ಥೆಗಳ ಆಡಳಿತ ವೈದ್ಯಾಧಿಕಾರಿಗಳಿಗೆ, ಸಿಬ್ಬಂದಿವರ್ಗದವರಿಗೆ ಹಾಗೂ ಜಿಲ್ಲಾ ಗುಣಮಟ್ಟ ಭರವಸೆ ವಿಭಾಗದ ಸಿಬ್ಬಂದಿಗಳಾದ ಜಿಲ್ಲಾ ಆಸ್ಪತ್ರೆ ಗುಣಮಟ್ಟ ಭರವಸೆ ವ್ಯವಸ್ಥಾಪಕರಾದ ನೂರಹ್ಮದ ನಿಡಗುಂಡಿ ಮತ್ತು ಆಡಳಿತ ಮತ್ತು ಕಾರ್ಯಕ್ರಮ ಸಹಾಯಕರಾದ ಈರಪ್ಪ ಹೊನಗೇಕರ ಹಾಗೂ ಸದರಿ ವರ್ಷದಲ್ಲಿ ಕಾರ್ಯನಿರ್ವಹಿಸಿದ ಡಾ.ಸಂತೋಷ ಕಂಚ್ಯಾಣಿ ಅವರಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಶಿಂಧೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಬಸವರಾಜ ಹುಬ್ಬಳ್ಳಿ ಮತ್ತು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ರಾಜೇಶ್ವರಿ ಗೋಲಗೇರಿ ಅವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Related Posts
Add A Comment