ಮಹರ್ಷಿ ವಾಲ್ಮೀಕಿಯವರ ಜಯಂತಿಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಭಿಮತ
ವಿಜಯಪುರ: ರಾಮಾಯಣ ಮಹಾಕಾವ್ಯವವನ್ನು ರಚಿಸಿದವರು ವಾಲ್ಮೀಕಿಯವರು. ಅವರು ರಾಮಾಯಣದಲ್ಲಿ ಉಲ್ಲೇಖಿಸಿರುವ ಅಂಶಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ. ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪವಾಗಿವೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿಯವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ,ಅವರು ಮಾತನಾಡಿದರು.
ರಾಮಾಯಣ ಎಂಬ ಮಹಾಕಾವ್ಯವನ್ನು ರಚಿಸಿದ್ದು ವಾಲ್ಮೀಕಿಯವರು. ನಿಸರ್ಗದೊಂದಿಗೆ ಸಂಪರ್ಕ ಹೊಂದಿದ್ದ ಅವರಲ್ಲಿ ಕವಿತ್ವ ಭಾವನೆ ಇತ್ತು. ರಾಮಾಯಣ ಎಂಬ ಮಹಾಕಾವ್ಯವು ಇವರ ಕವಿತ್ವ ಭಾವನೆಯ ಕೊಡುಗೆಯಾಗಿದೆ. ಬ್ರಾತೃತ್ವ ಭಾವನೆ, ರಾಜನೀತಿ, ಮನೋಧರ್ಮ, ಮಾನವೀಯ ಮೌಲ್ಯ,ಪ್ರಜಾಪ್ರಭುತ್ವ ರಾಮಾಯಣ ಮಹಾಕಾವ್ಯವು ಪರಿಚಯಿಸಿದೆ ಎಂದು ಹೇಳಿದರು. ವಿಶ್ವಕ್ಕೆ ರಾಮಾಯಣ ಎಂಬ ಅತಿದೊಡ್ಡದಾದ ಕಾವ್ಯವನ್ನು ಕೊಡುಗೆ ನೀಡಿದ್ದಾರೆ. ರಾಮಾಯಣದಲ್ಲಿ ಒಳಗೊಂಡಿರುವ ತತ್ವಾದರ್ಶ ಕೊಡುಗೆ ಅಪಾರವಾಗಿದ್ದು, ಅವರು ನೀಡಿರುವ ಆದರ್ಶ ವಿಚಾರ-ತತ್ವಾದಾರ್ಶಗಳು ನಮ್ಮ ದೇಶ ಮಾತ್ರವಲ್ಲದೇ ಮಲೇಶಿಯಾ, ಕಾಂಬೋಡಿಯಾ ಸೇರಿದಂತೆ ಬೇರೆ-ಬೇರೆ ದೇಶಗಳಲ್ಲಿ ಪ್ರಚಲಿತದಲ್ಲಿವೆ. ಲವ-ಕುಶರಿಗೆ ಗುರುವಾಗಿದ್ದವರು.ಅವರ ತತ್ವಗಳನ್ನು ಜೀವನದಲ್ಲಿ ಪಾಲನೆ ಮಾಡಬೇಕು.ಮಹಾನ್ ಸಂತರ ಹೇಳಿರುವ ವಿಚಾರಗಳು ಪಾಲಿಸೋಣ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ ಅವರು ಮಾತನಾಡಿದರು.
ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆಯ ಉಪ ನಿರ್ದೇಶಕರಾದ ಡಾ. ಅಶೋಕ ಎಸ್. ಘೋಣಸಗಿ ವಿಶೇಷ ಉಪನ್ಯಾಸ ನೀಡಿ ಆದಿಕವಿ ಮಹರ್ಷಿ ವಾಲ್ಮೀಕಿ ಭಾರತಕ್ಕೆ ವಿಶ್ವಕ್ಕೆ ಮಹಾನ್ ಅದ್ಭುತ ಹಾಗೂ ಶ್ರೇಷ್ಠ ಕಾವ್ಯವವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ, ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಪೂರ್ಣಿಮಾ, ಭೀಮಾಶಂಕರ ಲಕ್ಷ್ಮೀಪುರ, ಅಂಕಿತಾ, ಲಕ್ಷ್ಮೀ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಆಕಾಶ ಹತ್ತರಕಿಹಾಳ, ಕೀರ್ತಿ, ರಕ್ಷಿತಾ ಹಾಗೂ ಐಶ್ವರ್ಯ ತಾಳಿಕೋಟಿ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸನ್ಮಾನಿಸಿದರು.
ಜಯಂತಿ ಕಾರ್ಯಕ್ರಮದಲ್ಲಿ ವಿಜಯಪುರದ ವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಎನ್ ಎಚ್ ನಾಗೂರ, ಜಿಲ್ಲಾ ಪಂಚಾಯತಿಯ ಯೋಜನಾ ವಿಭಾಗದ ಅಧಿಕಾರಿ ಎ.ಬಿ ಅಲ್ಲಾಪೂರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪುಂಡಲೀಕ ಮಾನವರ, ಸಮಾಜ ಕಲ್ಯಾಣ ಇಲಾಖೆ ಮಂಟೂರ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ವಿರೇಶ ವಾಲಿ ಸಂಗೀತ ಪ್ರಸ್ತುತಪಡಿಸಿದರು. ಸಂಗೀತಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.