ದೇವರಹಿಪ್ಪರಗಿ: ನವೆಂಬರ್ ೧ರಿಂದ ಮತಕ್ಷೇತ್ರದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಹವಾಲು ಆಲಿಸುವುದರೊಂದಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ತಿಳಿಸಿದ್ದಾರೆ.
ನ.೧ರಂದು ಬೆಳಿಗ್ಗೆ ೦೯ಗಂಟೆಗೆ ಮಾರ್ಕಬ್ಬಿನಹಳ್ಳಿ, ೧೧ ಗಂಟೆಗೆ ಸಾತಿಹಾಳ, ೦೧ ಗಂಟೆಗೆ ಯಾಳವಾರ, ೦೩ಗಂಟೆಗೆ ಕುದರಿಸಾಲವಾಡಗಿ, ೦೫ಗಂಟೆಗೆ ವಡವಡಗಿ, ಸಂಜೆ ೦೭ಗಂಟೆಗೆ ಹೂವಿನಹಿಪ್ಪರಗಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಜನಸ್ಪಂದನ ಸಭೆ ನಡೆಸಲಾಗುತ್ತಿದೆ.
ನ.೨ರಂದು ಬೆಳಿಗ್ಗೆ ೦೯ಗಂಟೆಗೆ ದಿಂಡವಾರ, ೧೧ಗಂಟೆಗೆ ರೆಬಿನಾಳ, ಮದ್ಯಾಹ್ನ ೦೧ಗಂಟೆಗೆ ಬ್ಯಾಕೋಡ, ೦೩ಗಂಟೆಗೆ ಹುಣಶ್ಯಾಳ ಪಿಬಿ, ಸಂಜೆ ೦೫ಗಂಟೆಗೆ ಕಣಕಾಲ, ೦೭ಗಂಟೆಗೆ ಇಟಗಿ, ಸಭೆ ನಡೆಯಲಿವೆ. ಅದರಂತೆ ನ.೩ರಂದು ಬೆಳಿಗ್ಗೆ ೦೯ ಗಂಟೆಗೆ ತುಂಬಗಿ, ೧೧ಗಂಟೆಗೆ ಬಮ್ಮನಳ್ಳಿ, ಮದ್ಯಾಹ್ನ ೦೧ಗಂಟೆಗೆ ಬ. ಸಾಲವಾಡಗಿ, ೦೩ಗಂಟೆಗೆ ಕೊಡಗಾನೂರ, ಸಾಯಂಕಾಲ ೦೫ಗಂಟೆಗೆ ಬಂಟನೂರ ಹಾಗೂ ಸಂಜೆ ೦೭ ಗಂಟೆಗೆ ಅಸ್ಕಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಸಭೆ ನಡೆಸಲಾಗುತ್ತಿದೆ.
ಸಭೆಯಲ್ಲಿ ಸರಕಾರದ ಸೌಲಭ್ಯಗಳು ಗ್ರಾಮೀಣ ಪ್ರದೇಶದಲ್ಲಿ ತಲುಪಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ಜೊತೆಗೆ ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆ ಬಗ್ಗೆ ಕಾರ್ಯಕರ್ತರೊಂದಿಗೆ ಮುಕ್ತ ಸಂವಾದ ಹಮ್ಮಿಕೊಳ್ಳಲಾಗಿದೆ. ಆದ ಕಾರಣ ದೇವರಹಿಪ್ಪರಗಿ ಮತಕ್ಷೇತ್ರದ ಗ್ರಾಮ ಪಂಚಾಯಿತ ವ್ಯಾಪ್ತಿಯಲ್ಲಿ ಬರುವ ಬ್ಲಾಕ್ ಅಧ್ಯಕ್ಷರು, ಅಂಗ ಘಟಕದ ಅಧ್ಯಕ್ಷರು, ಗ್ರಾಮ ಪಂಚಾಯಿತ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಗ್ರಾಮ ಮಟ್ಟದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಕ್ಷದ ಸಂಘಟನೆ ಕುರಿತು ತಮ್ಮ ಸಲಹೆ ಸೂಚನೆ ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment