ಉದಯರಶ್ಮಿ ದಿನಪತ್ರಿಕೆ
ಇಂಡಿ: ಕೂಡಲೆ ಇಂಡಿ ತಾಲೂಕನ್ನು ಬರಗಾಲ ತಾಲೂಕು ಎಂದು ಘೋಷಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಹಸಿರು ಸೇನೆ ಹಾಗೂ ರೈತ ಸಂಘದ ಪದಾಧಿಕಾರಿಗಳು ಶುಕ್ರವಾರ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಎಸ್.ಬಿ. ಕೆಂಬೋಗಿ ಮಾತನಾಡಿ, ತಕ್ಷಣವೇ ಸರಕಾರ ಬರಗಾಲ ಘೋಷಿಸಲು ಕ್ರಮ ಕೈಗೊಳ್ಳದಿದ್ದರೆ ತಾಲ್ಲೂಕು ಕಚೇರಿ ಮುಂದೆ ಹಾಗೂ ಬಸವೇಶ್ವರ ವೃತ್ತದಲ್ಲಿ ಉಗ್ರ ಧರಣಿ ಸತ್ಯಾಗ್ರಹ ನಡೆಸಲಾಗುವುದು. ತಾಲೂಕಿನಾದ್ಯಂತ ಕುಡಿಯುವ ನೀರಿನ ತೀವ್ರ ಅಭಾವ ಸೃಷ್ಟಿಯಾಗಿದ್ದು, ಬಿತ್ತನೆ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿವೆ. ಇಡೀ ತಾಲೂಕಿಗೆ ಸರ್ಕಾರ ಅನ್ಯಾಯ ಎಸಗಿದೆ” ಎಂದು ದೂರಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ್ ನಾವದಗಿ, ತಮ್ಮಾರಾಯ ಆಸಂಗಿ, ಹನುಮಂತ್‌ಸಿಂಗ್ ರಜಪೂತ್, ಮಲ್ಲಿಕಾರ್ಜುನ ಹೊರ್ತಿ, ಬಸುಗೌಡ ಪಾಟೀಲ, ಅದೃಷ್ಟಪ್ಪ ವಾಲಿ, ಭೀಮರಾಯ ಪೂಜಾರಿ, ಪರಪ್ಪ ಕೆಂಭೋಗಿ, ಸಿದ್ದಣ್ಣ ತಳವಾರ ಸೇರಿದಂತೆ ತಾಲೂಕಿನ ನೂರಾರು ರೈತ ಬಾಂಧವರು ಉಪಸ್ಥಿತರಿದ್ದರು.

