ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪ್ರಸಕ್ತ ಸಾಲಿನ (೨೦೨೬-೨೭) ಸ್ನಾತಕೋತ್ತರ ಹಾಗೂ ವ್ಯಾಲ್ಯು ಆಡೆಡ್ ಡಿಪ್ಲೊಮಾ, ಅಡ್ವಾನ್ಸ್ಡ್ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳ ಖಾಲಿ ಉಳಿದಿರುವ ಸೀಟುಗಳ ಭರ್ತಿಗಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಸೆ. ೧೫, ೨೦೨೬ರವರೆಗೆ ವಿಸ್ತರಿಸಲಾಗಿದೆ.
ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಸಂಗೀತ, ಮಹಿಳಾ ಅಧ್ಯಯನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸಮಾಜಕಾರ್ಯ, ಜೈವಿಕ ಮಾಹಿತಿ ವಿಜ್ಞಾನ, ಜೈವಿಕ ತಂತ್ರಜ್ಞಾನ, ಭೌತಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಸಂಖ್ಯಾಶಾಸ್ತ್ರ, ಆಹಾರ ಸಂಸ್ಕರಣೆ ಮತ್ತು ಪೋಷಣೆ, ಪ್ರಾಣಿಶಾಸ್ತ್ರ, ರಸಾಯನಶಾಸ್ತ್ರ, ಔಷಧೀಯ ರಸಾಯನಶಾಸ್ತ್ರ, ವಿದ್ಯುನ್ಮಾನ, ಎಂ.ಎಡ್., ಎಂ.ಪಿ.ಎಡ್., ಬಿ.ಪಿ.ಎಡ್. ಹಾಗೂ ವಾಣಿಜ್ಯಶಾಸ್ತ್ರ ವಿಷಯಗಳ ಸ್ನಾತಕೋತ್ತರ ಕೋರ್ಸ್ಗಳಲ್ಲಿ ಲಭ್ಯವಿರುವ ಸೀಟುಗಳಿಗೆ ಸೆ. ೧೫ರವರೆಗೆ ಈ ಕೋರ್ಸ್ಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು.
ಮೇಲ್ಕಂಡ ಯಾವುದೇ ವಿಭಾಗಗಳಲ್ಲಿ ಪ್ರವೇಶ ಪಡೆಯಲು ಈಗಾಗಲೇ ಯುಯುಸಿಎಂಎಸ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಇದುವರೆಗೆ ಪ್ರವೇಶ ಪಡೆಯದೇ ಇರುವವರು ಹಾಗೂ ಇನ್ನೂ ಅರ್ಜಿ ಸಲ್ಲಿಸದಿರುವವರು ಸೆ. ೧೫ರೊಳಗೆ ಯುಯುಸಿಎಂಎಸ್ hಣಣಠಿs://uuಛಿms.ಞಚಿಡಿಟಿಚಿಣಚಿಞಚಿ.gov.iಟಿ/ಐogiಟಿ/Iಟಿಜex ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಿದ ನಂತರ ಖಾಲಿ ಸೀಟುಗಳು ಲಭ್ಯವಿರುವ ಯಾವುದೇ ವಿಭಾಗ ಅಥವಾ ಸ್ನಾತಕೋತ್ತರ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಿ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತಿತಿತಿ.ಞsತಿu.ಚಿಛಿ.iಟಿ ವೆಬ್‌ಸೈಟ್ ಅಥವಾ ಸಂಬಂಧಿತ ಸ್ನಾತಕೋತ್ತರ ವಿಭಾಗವನ್ನು ಸಂಪರ್ಕಿಸಬಹುದು ಎಂದು ಕುಲಸಚಿವ ಡಾ. ವಿಜಯಕುಮಾರ್ ಬಿ. ಅಜೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
