ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಅಣ್ಣ ತಂಗಿಯ ಬಾಂಧವ್ಯ ಇವರದು ಶರೀರ ಕರಗಿದರೂ ಅವರ ಬಾಂಧವ್ಯ ಕರಗುವಂತಹದಲ್ಲಾ. ಸಹೋದರತ್ವ ಅಂದರೆ ತಂಗಿ ಶರಣೆ ಮುಕ್ತಾಯಕ್ಕ ಅಣ್ಣ ಅಜಗಣ್ಣ ರಂತಿರಬೇಕು ಎಂದು ಐನಾಪೂರ ಹಿರೇಮಠದ ಉಪಮನ್ಯು ಶಿವಾಚಾರ್ಯರು ಹೇಳಿದರು.
ಆಲಮೇಲ ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಇಂದು ನಾವೆಲ್ಲರೂ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದೇವೆ ಅದು ಅಪಾಯದ ಅಂಚಿನಲ್ಲಿ ನಮ್ಮನ್ನು ತಂದೊಡ್ಡಿದೆ ಹಾಗಾಗಿ ನಮ್ಮ ಭಾರತೀಯ ಸಂಸ್ಕೃತಿಯ ಪರಂಪರೆ ಆಚಾರ ವಿಚಾರಗಳನ್ನು ಉಳಿಸಿಕೊಂಡು ಹೋಗಿ ನಮ್ಮ ಮುಂದಿನ ಯುವ ಜನತೆಗೆ ಜಾಗೃತಿ ಮಾಡಬೇಕಾಗಿದೆ. ಅಂತಹ ಕಾರ್ಯವನ್ನು ಬಾಲಭಾರತಿ ಶಾಲೆಯು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕವಿವಾಣಿ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕುದರತ್ ಅಲಿ ಭೂಸನೂರ ಮಾತನಾಡಿ, ಹೆಣ್ಣಿಗೆ ಸಮಾಜದ ಪ್ರತಿ ಪುರುಷರು ಅಣ್ಣ-ತಮ್ಮಂದಿರಾಗಿ ಅವಳಿಗೆ ಪ್ರತಿ ಹೆಜ್ಜೆಯಲ್ಲೂ ರಕ್ಷೆ ನೀಡಿದಾಗ ಮಾತ್ರ ಈ ರಕ್ಷಾ ಬಂಧನ ಹಬ್ಬಕ್ಕೆ ನಿಜ ಅರ್ಥ ಬರುವುದು ಎಂದರು.
ಈ ವೇಳೆ ಅರವಿಂದ ಕುಲಕರ್ಣಿ, ಅಲೋಕ ಬಡದಾಳ, ಮುಖ್ಯ ಶಿಕ್ಷಕ ಲಕ್ಷೀಪುತ್ರ ಕಿರನಳ್ಳಿ ಮಾತನಾಡಿದರು.
ಪಾಲಕ ಪ್ರತಿನಿಧಿ ತಿಪ್ಪಣ್ಣ ಕನ್ನೊಳ್ಳಿ , ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ಸೀತಾ ಆರೇಶಂಕರ, ಸರುಬಾಯಿ ಬಂಡಗರ, ಸುನೀತಾ ಗುಂಡದ, ಅಂಜಲಿ ಕನ್ನೊಳ್ಳಿ ಉಪಸ್ಥಿತರಿದ್ದರು.

