ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಸರ್ವಜನಪೂಜಿತ ರಾವುತರಾಯನ ಅಲಂಕಾರ(ಬಣ್ಣ)ಕಾರ್ಯ ಸಂಪನ್ನಗೊಂಡಿದ್ದು, ವಿವಿಧ ಧಾರ್ಮಿಕ ಕಾರ್ಯಗಳ ನಂತರ ಬಂಡಿ ಉತ್ಸವದ ಮೂಲಕ ಸ್ವಸ್ಥಾನಕ್ಕೆ ಮರಳಲಿದ್ದಾನೆ.
ರಾವುತರಾಯ ಅಲಂಕಾರ ಕಾರಣವಾಗಿ ಮಲ್ಲಯ್ಯ ದೇವಸ್ಥಾನ ಪ್ರವೇಶಿಸಿದ್ದು ಸುಮಾರು ೪ ತಿಂಗಳು ತರುವಾಯ ಪುನಃ ಅದ್ದೂರಿ ಬಂಡಿ ಉತ್ಸವದೊಂದಿಗೆ ಸೆಪ್ಟೆಂಬರ್ ದಿ:೪ ರಂದು ಶುಕ್ರವಾರ ತನ್ನ ಮೂಲಸ್ಥಾನಕ್ಕೆ ಬರಲಿದ್ದಾನೆ. ಅದಕ್ಕಿಂತ ಮುಂಚೆ ಇದೇ ದಿ: ೩೦ರಂದು ಭಾನುವಾರ ಮಲ್ಲಾರಿ ಹೋಮ, ದಿ:೩೧ ರಂದು ಸೋಮವಾರ ಮಲ್ಲಯ್ಯನ ಹೋಮ ನಂತರ ಸೆಪ್ಟೆಂಬರ ೩ರಂದು ಗುರುವಾರ ಬಂಡಿ ತುಂಬುವ ಕಾರ್ಯ ಜರುಗಲಿದೆ ಎಂದು ಮಲ್ಲಯ್ಯ, ರಾವುತರಾಯ ದೇವಸ್ಥಾನ ಸಮಿತಿ ಪ್ರಕಟಣೆ ಮೂಲಕ ತಿಳಿಸಿದೆ.

