Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಎಸ್ಐಆರ್ ಪೂರ್ಣ: ಸೆ.23ರೊಳಗೆ ಆಕ್ಷೇಪಣೆ ಸಲ್ಲಿಸಿ :ಭೋಸಗಿ

ಮಕ್ಕಳಿಗೆ ಸಂಸ್ಕಾರ ನೀಡುವ ಬಾಲಭಾರತಿ ಶಾಲೆ ಕಾರ್ಯ ಶ್ಲಾಘನೀಯ

ಕಾರ್ಪೊರೇಟ್ ಲೋಕದಲ್ಲಿ ಹುಟ್ಟೂರಿನವರು ಕೊಟ್ಟ ಪುಲಕ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕಾರ್ಪೊರೇಟ್ ಲೋಕದಲ್ಲಿ ಹುಟ್ಟೂರಿನವರು ಕೊಟ್ಟ ಪುಲಕ!
(ರಾಜ್ಯ ) ಜಿಲ್ಲೆ

ಕಾರ್ಪೊರೇಟ್ ಲೋಕದಲ್ಲಿ ಹುಟ್ಟೂರಿನವರು ಕೊಟ್ಟ ಪುಲಕ!

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಡಿ.ಎನ್.ಸೊಲ್ಯೂಷನ್ಸ್ ಉದ್ಘಾಟನೆ ಸಂದರ್ಭದಲ್ಲಿ ಸಚಿವ ಎಂ.ಬಿ.ಪಾಟೀಲರಿಗೆ ವಿಜಯಪುರದ ನೌಕರರ ಭೇಟಿ

ಉದಯರಶ್ಮಿ ದಿನಪತ್ರಿಕೆ

ಬೆಂಗಳೂರು: ಯಾವುದೋ ಒಂದು ಪ್ರತಿಷ್ಠಿತ ಕಂಪನಿಯ ಉದ್ಘಾಟನೆಯೋ, ಮತ್ತೊಂದು ಕಂಪನಿಯೊಂದಿಗೆ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ ಒಡಂಬಡಿಕೆಯೋ ನಡೆಯುತ್ತಿದೆ ಎಂದರೆ ಕೈಗಾರಿಕಾ ಸಚಿವರಿಗೆ ಸಹಜವಾಗಿಯೇ ಖುಷಿಯಾಗುತ್ತದೆ. ಇದರಲ್ಲಿ ಎರಡು ಮಾತಿಲ್ಲ, ನಿಜ. ಆದರೆ, ದೇವನಹಳ್ಳಿ ತಾಲ್ಲೂಕಿನ ಕುಂದಾಣದಲ್ಲಿ ಮೊನ್ನೆ ನಡೆದ ಡಿ.ಎನ್.ಸೊಲ್ಯೂಷನ್ಸ್ ಕಂಪನಿಯ ತಯಾರಿಕಾ ಸ್ಥಾವರ ಮತ್ತು ಆರ್ & ಡಿ ಘಟಕಗಳ ಉತ್ಪಾದನೆಯಲ್ಲಿ ಎಂ ಬಿ ಪಾಟೀಲರು ರೋಮಾಂಚನಗೊಳ್ಳಲು ಇದ್ದ ಕಾರಣವೇ ಬೇರೆ ಎಂದರೆ ನೀವು ನಂಬಬೇಕು.
ಡಿ.ಎನ್.ಸೊಲ್ಯೂಷನ್ಸ್ ಅಂದರೆ ಇದು ದಕ್ಷಿಣ ಕೊರಿಯಾದ ಒಂದು ಅಗ್ರಮಾನ್ಯ ಕಂಪನಿ; ಮಶೀನ್ ಟೂಲ್ಸ್ ಕ್ಷೇತ್ರದಲ್ಲಿ ಇದರದು ದೊಡ್ಡ ಹೆಸರು. ಈ ಕಂಪನಿ ನಮ್ಮಲ್ಲೀಗ 600 ಕೋಟಿ ರೂಪಾಯಿ ಸುರಿದು ತನ್ನ ಎರಡೂ ಸ್ಥಾವರಗಳನ್ನು ಹೊಸದಾಗಿ ನಿರ್ಮಿಸಿದೆ. ಕಂಪನಿಯವರು ಸಹಜವಾಗಿಯೇ ಸಚಿವರನ್ನು ಉದ್ಘಾಟನೆಗೆ ಆಮಂತ್ರಿಸಿದ್ದರು.
ಆದರೆ, ಕಂಪನಿಯ ಕ್ಯಾಂಪಸ್ಸಿನಲ್ಲಿ ಎಂ ಬಿ ಪಾಟೀಲರಿಗೆ ಎದುರಾದ ದೃಶ್ಯವೇ ಬೇರೆ. ಅಂದರೆ, ಅವರು ಅಲ್ಲಿಗೆ ಹೋಗುತ್ತಿದ್ದಂತೆಯೇ, ಸಮವಸ್ತ್ರ ತೊಟ್ಟುಕೊಂಡು ಶಿಸ್ತಿನ ಸಿಪಾಯಿಗಳಂತೆ ನಿಂತಿದ್ದ 30-40 ಉದ್ಯೋಗಿಗಳ ಗುಂಪು ಇವರಿಗೆ ಮುತ್ತಿಗೆ ಹಾಕಿತು; ಆದರೆ ಅದು ಪ್ರತಿಭಟನೆಯ ಮುತ್ತಿಗೆಯಲ್ಲ, ಬದಲಿಗೆ ಅಂತರಾಳದ ಅಭಿಮಾನದ ಮುತ್ತಿಗೆ!
ಇವರೆಲ್ಲ ಯಾರೆಂದರೆ, ಮೂಲತಃ ವಿಜಯಪುರ ಜಿಲ್ಲೆಯ ಬೇರೆ ಬೇರೆ ಭಾಗಗಳಿಗೆ ಸೇರಿದವರು. ಇದಕ್ಕಿಂತ ಹೆಚ್ಚಾಗಿ ಎಂ ಬಿ ಪಾಟೀಲ ಅವರ ಪ್ರತಿಷ್ಠಿತ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯ ಬೇರೆ ಬೇರೆ ಕಾಲೇಜುಗಳಲ್ಲಿ ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಇತ್ಯಾದಿ ಕೋರ್ಸುಗಳನ್ನು ಓದಿರುವವರು. ಸಚಿವರ ಸಲಹೆ ಮೇರೆಗೆ ನಡೆದ ಕ್ಯಾಂಪಸ್ ಸಂದರ್ಶನದಲ್ಲೇ ಇವರೆಲ್ಲ ಆಯ್ಕೆಯಾಗಿದ್ದಾರೆ. ಡಿ.ಎನ್.ಸೊಲ್ಯೂಷನ್ಸ್ ಕಂಪನಿಯಲ್ಲಿ ಇವರೆಲ್ಲ ಮೆರಿಟ್ ಮೇಲೆ ಉದ್ಯೋಗಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇದನ್ನೆಲ್ಲ ತಿಳಿದು ಸಚಿವರು ಪುಳಕಿತರಾದರು! ಇದಕ್ಕೆ ತಕ್ಕಂತೆ ಆ ಗುಂಪಿನಲ್ಲಿದ್ದವರಿಗೂ, ಆಹಾ… ಇವರು ನಮ್ಮೂರಿನ ಸಚಿವರ..’ ಎನ್ನುವ ಅಭಿಮಾನ ತುಂಬಿ ತುಳುಕುತ್ತಿತ್ತು. ಈ ಗುಂಪಿನ ಬಳಿಗೆ ಯಾವುದೇ ಹಮ್ಮುಬಿಮ್ಮಿಲ್ಲದೆ ಹೋದ ಸಚಿವರು, ಅವರೊಂದಿಗೆ ಕುಶಲೋಪರಿ ನಡೆಸಿದರು; ಕೈ ಕುಲುಕಿದರು; ಯಾವುದೇ ಶಿಷ್ಟಾಚಾರವಿಲ್ಲದೆ ಅವರೊಂದಿಗೆ ಲೋಕಾಭಿರಾಮವಾಗಿ ಮಾತನಾಡಿದರು;ನೀವೆಲ್ಲರೂ ನಮ್ಮ ವಿಜಯಪುರದವರು ಅಂತ ಕೇಳಿ ತುಂಬಾ ಸಂತೋಷವಾಯ್ತು, ನೀವು ಕಂಪನಿಗೆ ಒಳ್ಳೆಯ ಹೆಸರು ತರಬೇಕು; ನೀವೂ ಸಾಧನೆ ಮಾಡಬೇಕು, ನಮ್ಮ ಹುಡುಗರು ಹಾರ್ಡ್ ವರ್ಕ್ಸ್ ಅಂತ ಹೇಳಿನಿ.. ಜೋಪಾನ.. ಊರಿನ ಹುಡುಗರಿಗೂ ಇಲ್ಲಿರುವ ಅವಕಾಶಗಳ ಬಗ್ಗೆ ತಿಳಿಸಿ’ ಎಂದರು.
ಇದನ್ನು ಕಂಡು ಕಂಪನಿಯ ಅಧಿಕಾರಿಗಳು ಮತ್ತು ಉಳಿದ ಸಿಬ್ಬಂದಿ ವರ್ಗ ಮೂಕವಿಸ್ಮಿತವಾಯಿತು. ಹೀಗೆ ಕಾರ್ಪೊರೇಟ್ ಪ್ರಪಂಚವು ಅಂತರಂಗದ ಆನಂದದ ಹೊನಲಿಗೆ ಸಾಕ್ಷಿಯಾಯಿತು. `ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎನ್ನುವ ಮಾತಿನ ಮೂರ್ತರೂಪ ಅಲ್ಲಿ ಅರಳಿತ್ತು!

BIJAPUR NEWS congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಎಸ್ಐಆರ್ ಪೂರ್ಣ: ಸೆ.23ರೊಳಗೆ ಆಕ್ಷೇಪಣೆ ಸಲ್ಲಿಸಿ :ಭೋಸಗಿ

ಮಕ್ಕಳಿಗೆ ಸಂಸ್ಕಾರ ನೀಡುವ ಬಾಲಭಾರತಿ ಶಾಲೆ ಕಾರ್ಯ ಶ್ಲಾಘನೀಯ

ಮೂರು ತಾಲೂಕುಗಳಿಗೆ ಮಾತ್ರ ಬರ ಘೋಷಣೆಗೆ ಆಕ್ರೋಶ

ಎಸ್ಐಆರ್: ಅರ್ಹ ಮತದಾರರ ಹಕ್ಕು ರಕ್ಷಣೆಗೆ ಮತ ಕಾವಲು ಸಮಿತಿ ಆಗ್ರಹ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಎಸ್ಐಆರ್ ಪೂರ್ಣ: ಸೆ.23ರೊಳಗೆ ಆಕ್ಷೇಪಣೆ ಸಲ್ಲಿಸಿ :ಭೋಸಗಿ
    In (ರಾಜ್ಯ ) ಜಿಲ್ಲೆ
  • ಮಕ್ಕಳಿಗೆ ಸಂಸ್ಕಾರ ನೀಡುವ ಬಾಲಭಾರತಿ ಶಾಲೆ ಕಾರ್ಯ ಶ್ಲಾಘನೀಯ
    In (ರಾಜ್ಯ ) ಜಿಲ್ಲೆ
  • ಕಾರ್ಪೊರೇಟ್ ಲೋಕದಲ್ಲಿ ಹುಟ್ಟೂರಿನವರು ಕೊಟ್ಟ ಪುಲಕ!
    In (ರಾಜ್ಯ ) ಜಿಲ್ಲೆ
  • ಮೂರು ತಾಲೂಕುಗಳಿಗೆ ಮಾತ್ರ ಬರ ಘೋಷಣೆಗೆ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಎಸ್ಐಆರ್: ಅರ್ಹ ಮತದಾರರ ಹಕ್ಕು ರಕ್ಷಣೆಗೆ ಮತ ಕಾವಲು ಸಮಿತಿ ಆಗ್ರಹ
    In (ರಾಜ್ಯ ) ಜಿಲ್ಲೆ
  • ನುಲಿಯ ಚಂದಯ್ಯ ಜಯಂತಿ ಅರ್ಥಪೂರ್ಣ ಆಚರಣೆ
    In (ರಾಜ್ಯ ) ಜಿಲ್ಲೆ
  • ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ
    In (ರಾಜ್ಯ ) ಜಿಲ್ಲೆ
  • ಸ್ನಾತಕೋತ್ತರ ಕೋರ್ಸ್ಗಳ ಪ್ರವೇಶಕ್ಕೆ ಸೆ.೧೫ ವರೆಗೆ ಅವಕಾಶ
    In (ರಾಜ್ಯ ) ಜಿಲ್ಲೆ
  • ಕರ್ತವ್ಯದ ಜೊತೆ ಬಾಂಧವ್ಯಕ್ಕೂ ಬೆಲೆ; ಸಿಬ್ಬಂದಿಗೆ ರಾಖಿ ಕಟ್ಟಿದ ಅಧಿಕಾರಿ
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿ ರಾವುತರಾಯನ ಅಲಂಕಾರ ಕಾರ್ಯ ಸಂಪನ್ನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.