ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯಲ್ಲಿ ಖೇಲೋ ಇಂಡಿಯಾ ಸಂವಾದ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಕಸಿತ ಭಾರತ್ ಯುವ ಸಂಪರ್ಕ ಹಾಗೂ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ “ಖೇಲೋ ಇಂಡಿಯಾ ಸಂವಾದ – ಖೇಲ್ ಕಿ ಬಾತ್ ಪಿಎಂ ಮೋದಿ ಕೆ ಸಾಥ್” ಕಾರ್ಯಕ್ರಮವನ್ನು ಜಿಲ್ಲೆಯ ಏಕೈಕ ಕಾಲೇಜಾಗಿ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಕಾಲೇಜಿನ ಎನ್.ಎಸ್.ಎಸ್ ಘಟಕ-೧, ೨ ಮತ್ತು ಐಕ್ಯೂಎಸಿ ವತಿಯಿಂದ ಆ.೨೭ರಂದು ಬೆಳಿಗ್ಗೆ ೧೦:೩೦ಕ್ಕೆ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚುವಲ್ ಭಾಷಣದ ನೇರ ಪ್ರಸಾರ ವೀಕ್ಷಿಸಲಾಯಿತು. ಕ್ರೀಡೆ, ಶಿಸ್ತು, ತಂಡದ ಕೆಲಸ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರದ ಕುರಿತು ಪ್ರಧಾನಿ ಕರೆ ನೀಡಿದರು.
ಈ ವೇಳೆ ಮೈ ಭಾರತ್ ಉಪಕ್ರಮ, ಯುವ ಸಂವಾದ ವೇದಿಕೆ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳಿಂದ ನಶಾ ಮುಕ್ತ ಯುವ ಪ್ರತಿಜ್ಞೆ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಅನಿಲ್ ಭಿ.ನಾಯಕ್, ಐಕ್ಯೂಎಸಿ ಸಂಯೋಜಕ ಡಾ. ಪಿ.ಎಸ್. ಪಾಟೀಲ್, ತಾಲ್ಲೂಕು ಮಟ್ಟದ ಎನ್ ಎಸ್ ಎಸ್ ನೋಡಲ್ ಅಧಿಕಾರಿ ರಾಜು ಬಿ. ಕಪಾಲಿ, ಕಾರ್ಯಕ್ರಮದ ಮಾಡರೇಟರ್ ಕುಶಾಲ್ ಕಲಗೊಂಡ, ಮೈ ಭಾರತ್ ಅಧಿಕಾರಿ ಗಣೇಶ್ ರಾಠೋಡ್, ರಾಷ್ಟ್ರೀಯ ಯುವ ಸ್ವಯಂಸೇವಕ ಅವಿನಾಶ್ ನಾಯಕ್, ಆಲ್ ಇಂಡಿಯಾ ರೇಡಿಯೋ ಜಿಲ್ಲಾ ವರದಿಗಾರ ಎನ್. ಗಂಗಾಧರ್, ಕಾಲೇಜಿನ ಎನ್ ಎಸ್ ಎಸ್ ಘಟಕ ೧&೨ ರ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಮಿಲನ್ ರಾಠೋಡ್, ಡಾ. ತರನ್ನುಮ್ ಜಬೀನ್ ಖಾನ್‌ಪ್ರೊ.ಕೃಷ್ಣಾ ಮಂಡ್ಲಾ, ಪ್ರೊ.ಪವನಕುಮಾರ್ ಮಹೀಂದ್ರಕರ್, ಡಾ. ಧರಮಗುರು ಪ್ರಸಾದ್ ಎಂ. ಪಿ. ಪ್ರೊ. ಶ್ವೇತಾ ಸವಣೂರ್, ಮಹಾವಿದ್ಯಾಲಯದ ಬೋಧಕರು,ಬೋಧಕೇತರ ಸಿಬ್ಬಂದಿ ಮತ್ತು ಎನ್ ಎಸ್ ಎಸ್ ಸ್ವಯಂಸೇವಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

