ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಿರ್ವಹಣೆಯಲ್ಲಿರುವ ಅಖಿಲ ಭಾರತ ಸಮನ್ವಿತ ಒಣ ಬೇಸಾಯ ಸಂಶೋಧನಾ ಯೋಜನೆಯಡಿ ಆನ್ ಫಾರ್ಮ್ ರಿಸರ್ಚ್ ಪ್ರೋಗ್ರಾಂ ಯೋಜನೆಯಲ್ಲಿ ಖಾಲಿ ಇರುವ ಯಂಗ್ ಪ್ರಫೊಶನಲ್ -೧ ತಾತ್ಕಾಲಿಕ ಹುದ್ದೆಯ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಾತ್ಕಾಲಿಕವಾಗಿ ಹುದ್ದೆ ನೀಡಲಾಗುತ್ತದೆ.
ಹಿಟ್ನಳ್ಳಿಯ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರ ಕಚೇರಿಯಲ್ಲಿ ಸೆ. ೯ ರಂದು ಬೆಳಿಗ್ಗೆ ೧೦.೩೦ ಕ್ಕೆಸಂದರ್ಶನ ನಡೆಯಲಿದೆ.
ಹುದ್ದೆಗೆ ಅಗತ್ಯವಿರುವ ಶೈಕ್ಷಣಿಕ ವಿದ್ಯಾರ್ಹತೆ, ಮಾಸಿಕ ವೇತನ ಮತ್ತು ಇತರೆ ನಿಯಮಾವಳಿಗಳ ಮಾಹಿತಿಗಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ hಣಣಠಿs://siಣes.googಟe.ಛಿom/
ಚಿ/uಚಿsಜ.iಟಿ/ಟಿeತಿs/ಣemಠಿoಡಿಚಿಡಿಥಿ-ಚಿಠಿಠಿoiಟಿಣmeಟಿಣ-ಟಿoಣiಜಿiಛಿಚಿಣioಟಿ-ಛಿiಡಿಛಿuಟಚಿಡಿs ಗೆ ಭೇಟಿ ನೀಡಬಹುದು.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕೆ ಸಂದರ್ಶನಕ್ಕೆ ಹಾಜರಾಗಲು ಕೋರಲಾಗಿದೆ.
ಹೆಚ್ಚಿನ ವಿವರಗಳಿಗೆ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ, ವಿಜಯಪುರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
