ಗುರುಪೂರ್ಣಿಮಾ ಮಹೋತ್ಸವ, ಕನ್ನಡ ಉಳಿಸಿ ಉಪನ್ಯಾಸ ಮಾಲಿಕೆ & ಜಿಲ್ಲಾ ಯುವಗೋಷ್ಟಿ ಕಾರ್ಯಕ್ರಮದಲ್ಲಿ ಮಯೂರ ತಿಳಗೂಳಕರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್ಕಾರ ದ್ವಿಭಾಷಾ ನೀತಿಯಿಂದ ಕನ್ನಡವನ್ನು ಪರೋಕ್ಷವಾಗಿ ನಿರ್ಲಕ್ಷ್ಯಿಸಿ ಇಂಗ್ಲಿಷ ಭಾಷೆ ಕಲಿಕೆಗೆ ಪ್ರೋತ್ಸಾಹ ಕೊಡುತ್ತಿದೆ ಎಂದು ಮಯೂರ ತಿಳಗೂಳಕರ ಹೇಳಿದರು.
ನಗರದ ದರ್ಬಾರ್ ಸಭಾಭವನದಲ್ಲಿ ರವಿವಾರ ದಿನಾಂಕ 30 ರಂದು ನಡೆದ ಗುರುಪೂರ್ಣಿಮಾ ಮಹೋತ್ಸವ ಮತ್ತು ಕನ್ನಡ ಉಳಿಸಿ ಉಪನ್ಯಾಸ ಮಾಲಿಕೆ ಹಾಗೂ ಜಿಲ್ಲಾ ಯುವಗೋಷ್ಟಿ ಕಾರ್ಯಕ್ರಮದಲ್ಲಿ ಅವರು ಮಾತಾಡಿ ದ್ವಿಭಾಷಾ ನೀತಿಯಿಂದಾಗಿ ಕನ್ನಡ ಭಾಷೆಯಮೇಲಾಗುವ ಪರಿಣಾಮ ಕುರಿತು ವಿವರಿಸಿದರು.
“ಭಾರತೀಯ ಸಾಹಿತಿಗಳ ಸಾಹಿತ್ಯ ಸೇರಿ ಒಂದು ತೂಕವಾದರೆ ವೇದವ್ಯಾಸರ ಸಾಹಿತ್ಯ ಮತ್ತೊಂದು ತೂಕವೆಂದು” ಆನಂದ ಗೋಡಸೆ ವೇದವ್ಯಾಸ ಸಾಹಿತ್ಯ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವಗೋಷ್ಟಿ ಸ್ಪರ್ಧೆಯು ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕ ಕುಲಕರ್ಣಿ ವಹಿಸಿದ್ದರು. ನಿರೂಪಣೆ – ರಾಹುಲ್ ಮರಳಿ , ಪ್ರಾರ್ಥನೆ ಸೌಮ್ಯ ಕುಲಕರ್ಣಿ , ವಂದನೆ ಅನಿಲ ಬಳುಂಡಗಿ ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ನಾರಾಯಣ ಬಾಬಾನಗರ, ಸುಕಾಂತ ಕುಲಕರ್ಣಿ, ಶ್ರೀರಂಗ ಪುರಾಣಿಕ, ಸತೀಶ ಮಣ್ಣೂರು, ಶಾಂಭವಿ ಕುಲಕರ್ಣಿ, ದಾನೇಶ್ವರಿ ಆಲಾಳೆ, ಸೋನು ಕುಲಕರ್ಣಿ ಸೇರಿದಂತೆ ಮುಂತಾದವರು ಉಪಸ್ಥಿತರಾಗಿದ್ದರು.

