ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾದ ಎಚ್.ಟಿ.ಕುಲಕರ್ಣಿ ಗುರುಗಳ ಸ್ಮರಣಾರ್ಥ, ಎಚ್.ಟಿ.ಕುಲಕರ್ಣಿ ಪ್ರತಿಷ್ಠಾನದ ವತಿಯಿಂದ ಸೆ.೬ರಂದು ಮಾಂಗಲ್ಯ ಭವನದಲ್ಲಿ ಗುರುಸ್ಮರಣೆ ಕಾರ್ಯಕ್ರಮ ಹಾಗೂ ದೇಹದಾನ, ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ ಎಂದು ನಿವೃತ್ತ ದೈಹಿಕ ಶಿಕ್ಷಕ ಎಸ್.ಎಸ್.ಮಲ್ಲೇದ ಹೇಳಿದರು,
ಸಿಂದಗಿ ನಗರದ ಬಸವ ಪಟ್ಟಣದಲ್ಲಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುರುಗಳ ಬೋಧನೆ, ಆದರ್ಶ ಹಾಗೂ ಸಮಾಜಮುಖಿ ಸೇವಾ ಮನೋಭಾವವನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗುರುಗಳು ತಮ್ಮ ಶಿಷ್ಯರ ಬದುಕಿನಲ್ಲಿ ಬೀರಿದ ಪ್ರಭಾವವನ್ನು ಸ್ಮರಿಸುವುದರ ಜೊತೆಗೆ, ಅವರ ಸಮಾಜಸೇವೆಯ ಆಶಯವನ್ನು ಮುಂದುವರಿಸುವ ನಿಟ್ಟಿನಲ್ಲಿ ದೇಹದಾನ ಮತ್ತು ರಕ್ತದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ವೇಳೆ ಸುಭಾಸ ಪಾಟೀಲ ಮಾತನಾಡಿ, ಗುರುರಾಜ ಪಡಶೆಟ್ಟಿ, ಮಹಾಂತೇಶ ನೂಲಾನವರ, ಶೈಲಜಾ ಸ್ಥಾವರಮಠ ಮಾತನಾಡಿ, ಎಚ್.ಟಿ.ಕುಲಕರ್ಣಿ ಗುರುಗಳೊಂದಿಗೆ ಶಿಕ್ಷಣ ಪಡೆದ ಎಲ್ಲ ಶಿಷ್ಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗುರುಗಳ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಅವರ ಎಲ್ಲ ಶಿಷ್ಯ ಬಳಗ ಪ್ರತಿ ನಿತ್ಯ ಸಿಂದಗಿಯ ಸಂಗಮೇಶ್ವರ ದೇವಸ್ಥಾನದಲ್ಲಿ ಸೇರಿಕೊಂಡು ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಸಿದ್ದು ಹದನೂರ, ನಾನಾಗೌಡ ಶಿವಣಗಿ, ಲಕ್ಷ್ಮಣ ಬಿರಗೊಂಡ, ಗೌರೀಶ ಹಯ್ಯಾಳಕರ, ಮಹಾಂತೇಶ ಕಲಶೆಟ್ಟಿ, ಉಸ್ಮಾನ ನಧಾಫ್, ಮುತ್ತು ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಅಲ್ಲಾಪೂರ, ಸಾಗರ ಕಮತಗಿ, ಬಸವರಾಜ ಹಿರಬಾಶೆಟ್ಟಿ, ಶಾಂತೂ ರಾಣಾಗೋಳ, ರಾಘವೇಂದ್ರ ಜೋಷಿ, ಎಂ.ಬಿ.ಮಂದೇವಾಲಿ, ಸಂತೋಷ ಹೈಯಾಳಕರ, ಸಿದ್ದು ಉಪ್ಪಾರ, ರಾಜಶೇಖರ ಜೇವರಗಿ, ವಿಕ್ರಮ ಕುಲಕರ್ಣಿ, ಭಾಗೇಶ ಗೋಲಗೇರಿ, ಶಿವಾನಂದ ಶಿವಣಗಿ, ಇರ್ಷಾದ ನೇವಾರ, ಪ್ರಶಾಂತ ಕೆಂಭಾವಿ, ಎಸ್.ಎಲ್.ಸುಂಬಡ, ರಾಜಶೇಖರ ಬುಳ್ಳಾ ಸೇರಿದಂತೆ ಅವರ ಶಿಷ್ಯ ಬಳಗ ಉಪಸ್ಥಿತರಿದ್ದರು.

