ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಚಾಂದಕವಟೆಯ ಎಸ್.ಬಿ.ಬಿ.ಕಂಠಿಗೊಂಡ ಪದವಿಪೂರ್ವ ಕಾಲೇಜಿನಲ್ಲಿ ೨೦೨೬-೨೭ನೆಯ ಸಾಲಿನ ಸಿಂದಗಿ, ದೇವರಹಿಪ್ಪರಗಿ ಹಾಗೂ ಆಲಮೇಲ ತಾಲೂಕುಗಳ ಪದವಿ ಪೂರ್ವ ಕಾಲೇಜುಗಳ ಗುಂಪು ಕ್ರೀಡಾಕೂಟದಲ್ಲಿ ಬಾಲಕರ ಖೋ-ಖೋ ಪ್ರಥಮ ಸ್ಥಾನ, ಬಾಲಕಿಯರ ಖೋ-ಖೋ ಪ್ರಥಮ ಸ್ಥಾನ, ಬಾಲಕಿಯರ ವಾಲಿಬಾಲ್ ಪ್ರಥಮ ಸ್ಥಾನ, ಬಾಲಕರ ಕಬಡ್ಡಿ ದ್ವಿತೀಯ ಸ್ಥಾನ, ಬಾಲಕಿಯರ ಕಬಡ್ಡಿ ದ್ವಿತೀಯ ಸ್ಥಾನ ಸೇರಿದಂತೆ ವಿವಿಧ ಪಂದ್ಯಾವಳಿಗಳಲ್ಲಿ ವಿಜಯ ಶಾಲಿಯಾದ ಕಾಲೇಜಿನ ಸುಮಾರು ೪೪ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಹಾಗೂ ಮಾರ್ಗದರ್ಶನ ಮಾಡಿದ ದೈಹಿಕ ಉಪನ್ಯಾಸಕ ಗವಿಸಿದ್ದಪ್ಪ ಆನೆಗುಂದಿ ಅವರಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಉತ್ತರಾಧಿಕಾರಿಗಳಾದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿ ಹರ್ಷವ್ಯಕ್ತಪಡಿಸಿ, ಗುಂಪು ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಾ.ರವಿ ಗೋಲಾ, ಪಿ.ವಿ.ಮಹಾಲಿನಮಠ, ಡಾ.ಶರಣಬಸವ ಜೋಗೂರ, ಎಸ್.ಎಚ್.ಜಾಧವ ಎಸ್.ಆರ್.ಬೂದಿಹಾಳ, ಎನ್.ಬಿ.ಪೂಜಾರಿ, ಪ್ರಸನ್ನ ಜೋಗೂರ, ಸುನಿಲ್ ಪಾಟೀಲ, ರಾಹುಲ ನಾರಾಯಣಕರ, ಉದಯ, ಚಂದ್ರು, ರೋಹಿತ್ ಶುಲ್ಫಿ, ದೊಡ್ಡಯ್ಯ, ಅರುಣಾ, ವಿಜಯಲಕ್ಷ್ಮಿ ಕನ್ನೊಳ್ಳಿ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

