ಶಿವಶರಣೆ ಅಕ್ಕಮಹಾದೇವಿ ಮೂರ್ತಿ ಪ್ರಾಣ ಪ್ರತಿಷ್ಟಾಪನೆಯ 3ನೇಯ ವಾರ್ಷಿಕೋತ್ಸವ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಹಾಶಿವಶರಣೆ ಅಕ್ಕಮಹಾದೇವಿಯವರ ಮೂರ್ತಿ ಪ್ರಾಣ ಪ್ರತಿಷ್ಟಾಪನೆಯ ಮೂರನೇ ವರ್ಷದ ವಾರ್ಷಿಕೋತ್ಸವ ಭಕ್ತಿಭಾವದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಮಲ್ಲಯ್ಯನ ದೇವಸ್ಥಾನದಲ್ಲಿ ಶ್ರಾವಣ ಶುಕ್ರವಾರದ ಅಂಗವಾಗಿ ಮಹಾಶಿವಶರಣೆ ಅಕ್ಕಮಹಾದೇವಿಯವರ ಮೂರ್ತಿ ಪ್ರಾಣ ಪ್ರತಿಷ್ಟಾಪನೆಯ ಮೂರನೇ ವರ್ಷದ ವಾರ್ಷಿಕೋತ್ಸವ ಹಲವಾರು ವೈಶಿಷ್ಟ್ಯಗಳಿಂದ ಗಮನಸೆಳೆಯಿತು.
ಸಾಕ್ಷಾತ್ ಅಕ್ಕಮಹಾದೇವಿಯೇ ಕುಳಿತಿರುವಂತೆ ಅಕ್ಕಮಹಾದೇವಿ ವೇಷಧಾರಿಯನ್ನು ಟ್ರ‍್ಯಾಕ್ಟರನಲ್ಲಿ ಕುಳ್ಳಿರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ಸಕಲ ವಾದ್ಯ ವೈಭವ, ಸುಮಂಗಲೆಯರ ಕಳಶ, ಶ್ರೀಶೈಲ ಮಲ್ಲಯ್ಯನ ಗೀತೆಗಳಿಗೆ ಮುದ್ದುಮಕ್ಕಳ ಕೋಲಾಟ, ಮಾತೆಯರಿಂದ ಅಕ್ಕಮಹಾದೇವಿಯ ವಚನ ವೈಭವ ನೋಡುಗರ ಮನಸೆಳೆದವು. ನಂತರ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಜರುಗಿತು.
ಕಸ್ತೂರಿ ರೋಡಗಿ, ಶರಣಮ್ಮ ಬಿರಾದಾರ, ರೇಣುಕಾ ಬಿರಾದಾರ, ಪಾರ್ವತಿ ಉಕುಮನಾಳ, ಕಮಲಾಬಾಯಿ ರೋಡಗಿ, ಶಾಂತಾಬಾಯಿ ಗಬ್ಬೂರ, ಅನಿತಾ ಬಿರಾದಾರ, ಭಾಗೀರಥಿ ಆಲಗೂರ, ನೀಲಮ್ಮಕೊಟೀನ, ಶಂಕ್ರೆಮ್ಮ ಬಸರಕೋಡ, ಪಾರ್ವತಿ ಹಚಡದ, ಭಾರತಿ ಗಬ್ಬೂರ, ಕಲಾವತಿ ಮನಗೂಳಿ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಬಿ.ಎಸ್.ಪೊಲೇಶಿ, ಶರಣಯ್ಯ ಮಂಗಲಗಿ, ಕಸಾಪ ಮಾಜಿಅಧ್ಯಕ್ಷ ಜಿ.ಪಿ.ಬಿರಾದಾರ, ಹಣಮಂತ ಹಿರೂರ, ಶಿವಾನಂದ ಹೊನ್ನಳ್ಳಿ, ಮಲ್ಲನಗೌಡ ಬಿರಾದಾರ, ಸಿದ್ದು ಹದರಿ, ಉಮೇಶ ರೋಡಗಿ, ದಾವಲಸಾಬ ಗಂಗೂರ, ಬಸವರಾಜ ಬಮ್ಮನಳ್ಳಿ, ವಿಜಯಕುಮಾರ ತಳವಾರ, ಬಸವರಾಜ ನಾಟೀಕಾರ, ಜಾವೀದ ಮಕಾನದಾರ, ಪರಶುರಾಮ ನಾಯ್ಕೋಡಿ ಇದ್ದರು.

