ಮುದ್ದೇಬಿಹಾಳ: ಸಾಮೂಹಿಕ ವಿಹಾಹಗಳಿಂದ ಸಾಕಷ್ಟು ಬಡ ಜನತೆಗೆ ಅನುಕೂಲಗಳಾಗುತ್ತವೆ. ಈ ಬಾರಿ ಬರದ ಛಾಯೆ ಎಲ್ಲೆಡೆ ಆವರಿಸಿದ್ದು ಮಠದ ಸದ್ಭಕ್ತರಿಗೆ ಅನುಕೂಲಕರವಾಗಲೆಂದು ವಿಶೇಷ ಪೂಜೆ ಮತ್ತು ಸಾಮೂಹಿಕ ವಿವಾಹಗಳನ್ನು ನಡೆಸುತ್ತಿರುವದಾಗಿ ತಾಲೂಕಿನ ಯರಝರಿಯ ಯಲ್ಲಾಲಿಂಗ ಮಠದ ಸಾಮೂಹಿಕ ವಿಹಾಹಗಳಿಂದ ಸಾಕಷ್ಟು ಬಡ ಜನತೆಗೆ ಅನುಕೂಲಗಳಾಗುತ್ತವೆ ಎಂದು ಮಲ್ಲಾರಲಿಂಗ ಪ್ರಭುಗಳು ಹೇಳಿದರು.
ತಾಲೂಕಿನ ಯರಝರಿ ಗ್ರಾಮದ ಶ್ರೀ ಮಠದಲ್ಲಿ ನವರಾತ್ರೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮನುಷ್ಯರಿಗೆ ದೈವದ ಮೇಲೆ ನಂಬಿಕೆ ಕಡಿಮೆಯಾಗಿದೆ. ಮೊಬೈಲ್‌ನಲ್ಲಿ ಬರುವ ಹಾಳು ಮೂಳುಗಳನ್ನು ನೋಡಿಕೊಂಡು ಕೆಲವರು ದೇವರಿಗೆ ಕೈ ಮುಗಿವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಮಹಿಳೆಯರು ದೇವರ ಸ್ವರೂಪ. ಅವರನ್ನು ಹಿಂಸಿಸಬಾರದು. ಮನೆ ಬೆಳಗಲು ಬರುವ ದೇವತೆಯರನ್ನು ವರದಕ್ಷಿಣೆ ರೂಪದಲ್ಲಿ ಕಿರುಕುಳ ಕೊಡುತ್ತಿರುವದರಿಂದ ಮಳೆ ಬಾರದೆ ಬೆಳೆ ಇಲ್ಲದೇ ಪರದಾಡುವಂತಾಗಿದೆ. ನಾಡಿನ ಪ್ರತಿಯೊಬ್ಬರೂ ಶಕ್ತಿ ದೇವತೆಯ ಆರಾಧನೆ ಮಾಡಿ ಮಳೆಗಾಗಿ ಪ್ರಾರ್ಥಿಸುವಂತೆ ತಿಳಿಸಿದರು.
ಸಮಾಜದಲ್ಲಿ ಮಠ ಮಾನ್ಯಗಳ ಪಾತ್ರ ಬಹಳ ಮುಖ್ಯವಾದದ್ದು. ಮಠಗಳು ಯಾವತ್ತೂ ಧರ್ಮ ರಕ್ಷಣೆಯ ಕಾರ್ಯ ಮಾಡುತ್ತಲೇ ಬಂದಿವೆ. ಯರಝರಿ ಮಠವೂ ಕೂಡ ಪ್ರತೀ ವರ್ಷ ದಸರಾ ಹಬ್ಬದ ಅಂಗವಾಗಿ ಪ್ರತಿನಿತ್ಯ ದೇವಿಯ ಪುರಾಣ ಪ್ರವಚನಗಳ ಸಹಿತ ಸಾಮೂಹಿಕ ವಿವಾಹಗಳನ್ನು, ಸರ್ವಧರ್ಮ ಸಮ್ಮೇಳನದ ಜೊತೆಗೆ ಧರ್ಮ ಜಾಗೃತಿ ಮೂಡಿಸುತ್ತ ಬರುತ್ತಿದೆ. ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚು ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳುವ ಮೂಲಕ ಬಡವರಿಗೆ ಸೇವೆ ನೀಡಲಿದೆ ಎಂದರು.
ತಂಗಡಗಿ ಅನ್ನದಾನಿ ಭಾರತಿ ಅಪ್ಪಣ್ಣ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿ, ಈ ದೇಹ ಭೂಮಿಗೆ ಬಂದಿದ್ದು ಯಾತಕ್ಕೆ ಎಂಬುದನ್ನು ಪ್ರತಿಯೊಬ್ಬ ಮನುಜ ಅರ್ಥಮಾಡಿಕೊಳ್ಳಬೇಕು. ಕಾಮ, ಲೋಭ, ಮದ-ಮತ್ಸರಗಳನ್ನು ತೊಡೆದುಹಾಕಿ ಇತರರಿಗಾಗಿ, ಮೂಕ ಪ್ರಾಣಿಗಳಿಗೆ ಉಪಕಾರ ಮಾಡುತ್ತ ಜೀವಿಸಿದಲ್ಲಿ ಮಾತ್ರ ಮನಿಷ್ಯನ ಬದುಕಿಗೊಂದು ಅರ್ಥವಿದೆ ಎಂದರು.
ಭಾಜಪಾ ಮುಖಂಡ ಮಲಕೇಂದ್ರಗೌಡ ಪಾಟೀಲ ಮಾತನಾಡಿದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ ಮಾತನಾಡಿದರು.
ಹುಲ್ಲೂರಿನ ಆರೂಢ ಮಠದ ಸ್ವಾಮೀಜಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಜಿಪಂ ಮಾಜಿ ಸದಸ್ಯ ಹೇಮರೆಡ್ಡಿ ಮೇಟಿ, ಮುತ್ತಣ್ಣ ಹುಗ್ಗಿ ವಕೀಲರು, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಕೊಪ್ಪ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು. ಮಹಾಂತೇಶ ಪಟ್ಟಣದ ಕಾರ್ಯಕ್ರಮ ನಿರ್ವಹಿಸಿದರು. ಒಟ್ಟು ೬ ನವ ಜೋಡಿ ದಾಂಪತ್ಯಕ್ಕೆ ಕಾಲಿರಿಸಿದರು.
Related Posts
Add A Comment