Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜನಸೇವೆಯೇ ನನ್ನ ಸಂಕಲ್ಪ, ರಾಷ್ಟ್ರಸೇವೆಯೇ ಪರಮ ಗುರಿ :ಪಾಂಡೆ

ಲಿಫ್ಟ್‌ ಇರಿಗೇಷನ್‌ ಪಂಪ್‌ಗಳನ್ನು ಐಸಿಸಿ ವ್ಯಾಪ್ತಿಯಿಂದ ಹೊರಗಿಡಿ

ಕಬ್ಬಿನ ಬೆಲೆ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚನೆ ಸ್ವಾಗತಾರ್ಹ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕಷ್ಟದ ಮೇಲೆ ಕಷ್ಟಗಳು ಬಂದಾಗ ಹೊಂದಿಕೊಂಡು ಹೋಗಬೇಕು
ವಿಶೇಷ ಲೇಖನ

ಕಷ್ಟದ ಮೇಲೆ ಕಷ್ಟಗಳು ಬಂದಾಗ ಹೊಂದಿಕೊಂಡು ಹೋಗಬೇಕು

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಸಂತೋಷ್ ರಾವ್ ಪೆರ್ಮುಡ.
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ:೯೭೪೨೮೮೪೧೬೦

ಉದಯರಶ್ಮಿ ದಿನಪತ್ರಿಕೆ

ದಯಾನಗರವೆಂಬ ಒಂದು ಹಳ್ಳಿಯಲ್ಲಿ ತಿಮ್ಮೇಶ ಎಂಬ ಬಡ ರೈತನೊಬ್ಬ ತನ್ನ ಸಣ್ಣ ಜಮೀನಿನಲ್ಲಿ ಸಣಪುಟ್ಟ ಕೃಷಿಯನ್ನು ಮಾಡಿಕೊಂಡು ಜೀವನವನ್ನು ಸಾಗಿಸುತ್ತಾ ಇದ್ದನು. ಹೀಗಿರುವಾಗ ತಿಮ್ಮೇಶನನ್ನು ಪ್ರತಿದಿನವೂ ಒಂದು ರೀತಿ ವಿಚಿತ್ರವಾದ ಸಮಸ್ಯೆಯು ಕಾಡುತ್ತಿತ್ತು. ಆ ಸಮಸ್ಯೆಯಿಂದ ಆತ ಹೊರ ಬರಲಾರದೆ ಬಹಳಷ್ಟು ಚಡಪಡಿಸುತ್ತಿದ್ದನು. ತನ್ನ ವಿಚಿತ್ರ ಸಮಸ್ಯೆಯನ್ನು ಪಟ್ಟಣದ ಖ್ಯಾತ ಮನೋವೈದ್ಯರ ಬಳಿ ತೋರಿಸಲು ನಿರ್ಧರಿಸುತ್ತಾನೆ. ಮಾರನೇ ದಿನ ಬೆಳಗಾಗುತ್ತಿದ್ದಂತೆಯೇ ಪಟ್ಟಣದಲ್ಲಿದ್ದ ಮನೋವೈದ್ಯರನ್ನು ಭೇಟಿ ಮಾಡಿ, ಸ್ವಾಮಿ ನನಗೆ ಪ್ರತಿ ದಿನವೂ ಒಂದು ವಿಚಿತ್ರವಾದ ಕನಸು ಬೀಳುತ್ತಿದೆ, ಆ ಕನಸಿನಲ್ಲಿ ಒಂದು ವಿಚಿತ್ರ ರೂಪದ ಮತ್ತು ದೊಡ್ಡ ಗಾತ್ರದ ಅತ್ಯಂತ ಕ್ರೂರಿ ದೆವ್ವವೊಂದು ನನ್ನನ್ನು ಕೊಲ್ಲಲು ಬರುತ್ತದೆ. ಇದರಿಂದಾಗಿ ನನಗೆ ಭಯವು ಪ್ರಾರಂಭವಾಗಿ ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ ಮತ್ತು ಮನಸ್ಸಿಗೆ ನೆಮ್ಮದಿಯೂ ಇಲ್ಲ. ನನ್ನ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗದೇ ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಎನಿಸಿಬಿಟ್ಟಿದೆ ಎಂದು ಹೇಳುತ್ತಾನೆ.


ತಿಮ್ಮೇಶನ ಸಮಸ್ಯೆಯನ್ನು ಅರಿತ ಆ ಮನೋವೈದ್ಯರು ನಿನ್ನ ಸಮಸ್ಯೆಯನ್ನು ನಾನು ಸರಿಪಡಿಸಬಲ್ಲೆ. ನಿರಂತರವಾದ ನನ್ನ ಚಿಕಿತ್ಸೆಯಿಂದ ಸುಮಾರು ಎರಡು ವರ್ಷಗಳಲ್ಲಿ ನೀನು ಪೂರ್ತಿ ಈ ಸಮಸ್ಯೆಯಿಂದ ಹೊರ ಬರುತ್ತೀಯ. ಆದರೆ ಈ ಚಿಕಿತ್ಸೆಗೆ ಕನಿಷ್ಠ ಎಂದರೂ ಎರಡೂವರೆ ಲಕ್ಷ ರೂಪಾಯಿ ಖರ್ಚಾಗುತ್ತದೆ, ನೀನು ನಿನ್ನ ಹಳ್ಳಿಗೆ ಹೋಗಿ ಆದಷ್ಟು ಬೇಗ ಅಷ್ಟೂ ಹಣವನ್ನು ಹೊಂದಿಸಿ ತೆಗೆದುಕೊಂಡು ಬಾ ನಾನು ನಿನಗೆ ಚಿಕಿತ್ಸೆಯನ್ನು ನೀಡುತ್ತೇನೆ ಎಂದು ಹೇಳುತ್ತಾರೆ. ಇದರಿಂದ ಆಶ್ಚರ್ಯಗೊಂಡ ತಿಮ್ಮೇಶನು, ಸ್ವಾಮೀ,ನನ್ನ ಈ ಸಮಸ್ಯೆಯನ್ನು ಗುಣಪಡಿಸುವ ಚಿಕಿತ್ಸೆಗೆ ಒಟ್ಟು ಎರಡೂವರೆ ಲಕ್ಷ ರೂಪಾಯಿಯೇ? ಅಷ್ಟೊಂದು ದೊಡ್ಡ ಮೊತ್ತದ ದುಡ್ಡನ್ನು ನಾನು ನಿಮಗೆ ನೀಡುವುದರ ಬದಲು, ಆ ಕ್ರೂರಿ ದೆವ್ವದ ಜೊತೆಗೆ ಗೆಳೆತನ ಮಾಡಿಕೊಂಡು ಅದರೊಂದಿಗೆ ಜೀವನ ಪೂರ್ತಿ ಬದುಕುತ್ತೇನೆ ಎಂದು ಹೇಳುತ್ತಾ ಅಲ್ಲಿಂದ ಆತ ಹೊರ ನಡೆದ.
ಜೀವನದಲ್ಲಿ ನಮಗೆ ನಿರಂತರವಾಗಿ ಕಷ್ಟದ ಮೇಲೆ ಕಷ್ಟಗಳು ಬರುತ್ತಿದ್ದಾಗ, ನಾವು ಆ ಕಷ್ಟಗಳಿಂದ ಹೊರಗೆ ಬರಲು ಪ್ರಯತ್ನಿಸದೇ ಆ ಕಷ್ಟಗಳೊಂದಿಗೇ ಹೊಂದಿಕೊಂಡು ಬದುಕುವುದನ್ನು ಅಭ್ಯಾಸ ಮಾಡಿಕೊಂಡು ಆ ಕಷ್ಟಗಳಿಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲೂ ಪ್ರಯತ್ನಿಸುವುದಿಲ್ಲ. ಕಷ್ಟಗಳು ಬಂದಾಗ ಮನುಷ್ಯನು ಅವುಗಳಿಂದ ಹೊರಬರಲು ಬೇರೆ ಬೇರೆ ದಾರಿಗಳನ್ನು ಕಂಡುಕೊಳ್ಳುತ್ತಾನೆ. ಆದರೆ ಅದೇ ಸಮಸ್ಯೆಗಳಿಗೆ ಪರಿಹಾರವೇ ಇಲ್ಲದೆ ಆತನನ್ನು ಜರ್ಜರಿತನನ್ನಾಗಿ ಮಾಡಿದಾಗ ಆತ ಅದರೊಂದಿಗೆ ಹೊಂದಿಕೊಂಡು ಬದುಕುವುದನ್ನು ಕಲಿಯುತ್ತಾನೆ. ಪರಿಹಾರವಿಲ್ಲದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅದರೊಂದಿಗೆ ಹೊಂದಿಕೊಂಡು ಮುನ್ನಡೆಯುವುದು ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದೇ.

BIJAPUR NEWS congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜನಸೇವೆಯೇ ನನ್ನ ಸಂಕಲ್ಪ, ರಾಷ್ಟ್ರಸೇವೆಯೇ ಪರಮ ಗುರಿ :ಪಾಂಡೆ

ಲಿಫ್ಟ್‌ ಇರಿಗೇಷನ್‌ ಪಂಪ್‌ಗಳನ್ನು ಐಸಿಸಿ ವ್ಯಾಪ್ತಿಯಿಂದ ಹೊರಗಿಡಿ

ಕಬ್ಬಿನ ಬೆಲೆ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚನೆ ಸ್ವಾಗತಾರ್ಹ

ಭರತ ನಾಟ್ಯ ಭಾರತೀಯ ಪರಂಪರೆ-ಸಂಸ್ಕೃತಿಯ ಪ್ರತಿಬಿಂಬ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜನಸೇವೆಯೇ ನನ್ನ ಸಂಕಲ್ಪ, ರಾಷ್ಟ್ರಸೇವೆಯೇ ಪರಮ ಗುರಿ :ಪಾಂಡೆ
    In (ರಾಜ್ಯ ) ಜಿಲ್ಲೆ
  • ಲಿಫ್ಟ್‌ ಇರಿಗೇಷನ್‌ ಪಂಪ್‌ಗಳನ್ನು ಐಸಿಸಿ ವ್ಯಾಪ್ತಿಯಿಂದ ಹೊರಗಿಡಿ
    In (ರಾಜ್ಯ ) ಜಿಲ್ಲೆ
  • ಕಬ್ಬಿನ ಬೆಲೆ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚನೆ ಸ್ವಾಗತಾರ್ಹ
    In (ರಾಜ್ಯ ) ಜಿಲ್ಲೆ
  • ಭರತ ನಾಟ್ಯ ಭಾರತೀಯ ಪರಂಪರೆ-ಸಂಸ್ಕೃತಿಯ ಪ್ರತಿಬಿಂಬ
    In (ರಾಜ್ಯ ) ಜಿಲ್ಲೆ
  • ಪ್ರಸಕ್ತ ಸಾಲಿಗೆ 7 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ
    In (ರಾಜ್ಯ ) ಜಿಲ್ಲೆ
  • ಬಿ.ಎಂ.ಪಾಟೀಲ್ ಪಬ್ಲಿಕ್ ಶಾಲೆಯಲ್ಲಿ ರಕ್ತದಾನ ಶಿಬಿರ
    In (ರಾಜ್ಯ ) ಜಿಲ್ಲೆ
  • ಅಂತರಂಗದ ರಾಕ್ಷಸ ನಾಶವೇ ವಿಜಯದಶಮಿ
    In (ರಾಜ್ಯ ) ಜಿಲ್ಲೆ
  • ಅಥಣಿ ಸರ್ಕಾರಿ ಕಾಲೇಜಿನಲ್ಲಿ ಆಕರ್ಷಕ ಅಣುಕು ಸಂಸತ್ ಕಲಾಪ
    In (ರಾಜ್ಯ ) ಜಿಲ್ಲೆ
  • ಕವಿಗಳ ಲೇಖನಿ ಸಮಾಜಕ್ಕೆ ಕೈಗನ್ನಡಿಯಾಗಲಿ :ಕುಚಬಾಳ
    In (ರಾಜ್ಯ ) ಜಿಲ್ಲೆ
  • ೩೭೧(ಜೆ) ಹೋರಾಟಕ್ಕೆ ತಳವಾರ ಸಮಾಜ & ದಸಂಸ ಬೆಂಬಲ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.