ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಎಲ್ಲ ರೈತ ಸಂಘಗಳು ಕೆ ಆರ್ ಎಸ್ ಪಕ್ಷ ಮತ್ತು ಬಿಜೆಪಿ ಕಾರ್ಯಕರ್ತರು ರೈತರು ಪಕ್ಷಾತೀತವಾಗಿ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾಜಿ ಶಾಸಕ ರವಿಕಾಂತ ಪಾಟೀಲ ಮಾತನಾಡಿ, ದೇವೆಗೌಡರು ಪ್ರಧಾನಿಯಾಗಿದ್ದಾಗ ಸಿಂದಗಿಯ ಶಾಸಕ ಎಂ.ಸಿ.ಮನಗೂಳಿಯವರು ಮತ್ತು ನಾನು ಕೂಡಿ ಅನೇಕ ಹೋರಾಟ ಮಾಡಿದ ಫಲವಾಗಿ ಸಿಂದಗಿ ಇಂಡಿ ತಾಲೂಕಿನಲ್ಲಿ ಗುತ್ತಿ ಬಸವಣ್ಣ ಕಾಲುವೆ ಆಗಿದೆ. ನಂತರ ೨೦೧೩ ರಿಂದ ಈಚೆಗೆ ಯಾವದೇ ಸರಕಾರ ಬಂದರೂ ಸ್ಥಳೀಯ ಶಾಸಕರು ಕಾಲುವೆಯ ಕೊನೆಯ ಭಾಗದ ವರೆಗೆ ನೀರು ಹರಿಸದೇ ಇರುವದು ಈ ಭಾಗದ ದುರ್ದೈವ ಎಂದರು.
ಜೆಡಿ ಎಸ್ ಧುರೀಣ ಬಿ.ಡಿ.ಪಾಟೀಲ ಮಾತನಾಡಿ, ಗುತ್ತಿ ಬಸವಣ್ಣ ಕಾಲುವೆ ನಿರ್ಮಿಸಲು ಕೋಟ್ಯಾಂತರ ಹಣ ಖರ್ಚಾಗಿದೆ. ಅನೇಕ ರೈತರು ಜಮೀನು ಕಳೆದುಕೊಂಡಿದ್ದಾರೆ. ಆದರೆ ಸರಕಾರ ಕಾಲುವೆಯಲ್ಲಿ ನೀರು ಹರಿಸಲು ಪ್ರಯತ್ನಿಸದೇ ಇರುವದು ದುರ್ದೈವ. ಗುತ್ತಿ ಎಂಬಲ್ಲಿ ಎಂಟು ಮೋಟಾರು ಅಳವಡಿಸಿ ಕೇವಲ ಎರಡನ್ನು ಮಾತ್ರ ಉಪಯೋಗಿಸಿ ಅಧಿಕಾರಿ ರೈತರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದರು.
ಬಿಜೆಪಿ ಧುರೀಣ ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಬಾಳು ಮುಳಜಿ, ಅನೀಲಗೌಡ ಬಿರಾದಾರ,ಬಸವರಾಜ ಹಂಜಗಿ, ರಿಝ ಪಾಂಡೆ, ಸಂತೋಷ ಮಾಳಾಬಾಗಿ ದೇವೆಂದ್ರ ಕುಂಬಾರ, ಪ್ರಶಾಂತ ಲಾಳಸಂಗಿ, ಸಿದ್ದಪ್ಪ ಅಗಸರ ಮಾತನಾಡಿದರು.
ಶಿರಸ್ತೆದಾರ ಎಸ್.ಆರ್ ಮುಜಗೊಂಡ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಕೆಂಚಪ್ಪ ನಿಂಬಾಳ, ಎಚ್.ಎಮ್ ಸಯ್ಯದ, ಸಂತೋಷ ಪಾಟೀಲ, ಮಹೇಶ ಹೂಗಾರ,ಸಿಕಂದರ ಬೋರಾಮಣಿ, ಮಂಜು ದೇವರ, ಅಶೋಕ ಅಕಲಾದಿ, ಆನಂದ ಕಾಂಬಳೆ ಮತ್ತಿತರಿದ್ದರು.
ಅಧಿಕಾರಿಗಳ ಭರವಸೆ
ನಂತರ ರೈತರು ಕೆಬಿಜೆಎನ್ ಎಲ್ ಅಧಿಕಾರಿಗಳು ಬಂದು ನೀರು ಬಿಡುವ ಕುರಿತು ಸತ್ಯಾಗ್ರಹ ಸ್ಥಳಕ್ಕೆ ಬಂದು ಒತ್ತಾಯ ಮಾಡಿದ ಪರಿಣಾಮ ಒಂದು ತಾಸಿನ ನಂತರ ಎಇಇ ಸುರೇಶ ಯಾತನೂರ ಬಂದು ಒಂದು ವಾರದಲ್ಲಿ ಕೊನೆಯ ಭಾಗದ ವರೆಗೂ ನೀರು ಹರಿಸುವದಾಗಿ ಅಶ್ವಾಸನೆ ನೀಡಿದ ಪರಿಣಾಮ ಪ್ರತಿಭಟನೆ ಹಿಂದೆ ಪಡೆದರು.

