Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕಷ್ಟದ ಮೇಲೆ ಕಷ್ಟಗಳು ಬಂದಾಗ ಹೊಂದಿಕೊಂಡು ಹೋಗಬೇಕು

ಭಾವನಾಜೀವಿಯ ಭಾವಾಂತರಂಗ

ವಿಜಯಪುರ ಜಿಲ್ಲೆಯಲ್ಲಿ ೨.೯೭ ಲಕ್ಷ ಎಎಸ್‌ಡಿಡಿಒ ಮತದಾರರು ಪತ್ತೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ವಿಜಯಪುರ ಜಿಲ್ಲೆಯಲ್ಲಿ ೨.೯೭ ಲಕ್ಷ ಎಎಸ್‌ಡಿಡಿಒ ಮತದಾರರು ಪತ್ತೆ
(ರಾಜ್ಯ ) ಜಿಲ್ಲೆ

ವಿಜಯಪುರ ಜಿಲ್ಲೆಯಲ್ಲಿ ೨.೯೭ ಲಕ್ಷ ಎಎಸ್‌ಡಿಡಿಒ ಮತದಾರರು ಪತ್ತೆ

By No Comments5 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕರಡು ಮತದಾರರ ಪಟ್ಟಿ ಪ್ರಕಟ | ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ ೨೩ ಕೊನೆಯ ದಿನ | ಅಂಕಿ-ಅಂಶ ಬಿಡುಗಡೆಗೊಳಿಸಿದ ಡಿಸಿ ಡಾ.ಆನಂದ ಕೆ.

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕರಡು ಮತದಾರರ ಪಟ್ಟಿಯನ್ನು ಸೋಮವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ತಿಳಿಸಿದರು. ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಕಚೇರಿಗಳು, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಈ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ತಿಳಿಸಿದರು. ಸೆ. ೨೩ ಆಕ್ಷೇಪಣೆಗೆ ಕೊನೆ ದಿನ: ಮತದಾರರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕರಡು ಪಟ್ಟಿಯನ್ನು ಪರಿಶೀಲಿಸಿ, ಯಾವುದೇ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ಆಗಸ್ಟ್ ೨೪ ರಿಂದ ಸೆಪ್ಟೆಂಬರ್ ೨೩ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಹೊಸ ಮತದಾರರ ನೋಂದಣಿ: ಕರಡು ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರು ನಮೂನೆ-೬ರ ಮೂಲಕ ಮತದಾರರ ನೋಂದಣಾಧಿಕಾರಿಗಳು, ಬಿಎಲ್‌ಒ ಅಥವಾ ವೋಟರ್ ಸರ್ವಿಸ್ ಪೋರ್ಟಲ್ ಮೂಲಕ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ೨೦೨೬ರ ಅಕ್ಟೋಬರ್ ೧ಕ್ಕೆ ೧೮ ವರ್ಷ ತುಂಬುವ ಯುವ ಮತದಾರರೂ ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
೧೬,೮೪,೯೬೮ ಮತದಾರರು:
ಮತದಾರರ ಪಟ್ಟಿ ಪರಿಷ್ಕರಣೆಯ ನಂತರ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು ೧೬,೮೪,೯೬೮ ಮತದಾರರಿದ್ದಾರೆ. ಈ ಪೈಕಿ ೮,೫೭,೬೧೯ ಪುರುಷರು, ೮,೨೭,೧೭೦ ಮಹಿಳೆಯರು ಹಾಗೂ ೧೭೯ ಇತರರಿದ್ದಾರೆ ತಿಳಿಸಿದರು. ಮತಗಟ್ಟೆಗಳ ಸಂಖ್ಯೆ ಏರಿಕೆ: ಮತಗಟ್ಟೆಗಳ ದೃಢೀಕರಣ ಕಾರ್ಯದ ನಂತರ ಜಿಲ್ಲೆಯಲ್ಲಿ ೬೭ ಹೊಸ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ ೨,೧೫೯ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿ ಪರಿಷ್ಕರಣೆಯ ಅಂಗವಾಗಿ ಮತಗಟ್ಟೆಗಳ ಪುನರ್ರಚನೆ ಪ್ರಕ್ರಿಯೆ ಪೂರ್ಣಗೊಂಡಿದೆ. ೧,೨೦೦ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಗಳನ್ನು ವಿಭಜಿಸಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಿದೆ. ಕಟ್ಟಡಗಳ ಸ್ಥಳ ಬದಲಾವಣೆ ಹಾಗೂ ಹೆಸರು ಬದಲಾವಣೆ ಕೈಗೊಳ್ಳಲಾಗಿದೆ. ಈ ಪುನರ್‌ರಚನೆ ಪ್ರಕ್ರಿಯೆಯ ನಂತರ ಜಿಲ್ಲೆಯ ಒಟ್ಟು ಮತಗಟ್ಟೆಗಳ ಸಂಖ್ಯೆ ೨,೦೯೨ ರಿಂದ ೨,೧೫೯ಕ್ಕೆ ಹೆಚ್ಚಳವಾಗಿದೆ. ಈ ಪುನರ್ರಚನೆಯ ಮೂಲಕ ಜಿಲ್ಲೆಯಾದ್ಯಂತ ಒಟ್ಟು ೬೭ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು, ೪ ಮತಗಟ್ಟೆಗಳ ಕಟ್ಟಡ ಸ್ಥಳ ಬದಲಾಯಿಸಲು ಹಾಗೂ ೩ ಮತಗಟ್ಟೆಗಳ ಹೆಸರು ಬದಲಾಯಿಸಲು ಕ್ರಮ ಕೈಗೊಳ್ಳಲಾಗಿದೆ. ತಿಳಿಸಿದ್ದಾರೆ.
ಕ್ಷೇತ್ರವಾರು ವಿವರಗಳಂತೆ, ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ೨೪೬ ಮತಗಟ್ಟೆಗಳಿದ್ದು, ೮ ಹೊಸ ಮತಗಟ್ಟೆಗಳನ್ನು ಸ್ತಾಪಿಸಲಾಗಿದೆ ಹಾಗೂ ೨ ಮತಗಟ್ಟೆಗಳ ಕಟ್ಟಡ ಸ್ಥಳ ಬದಲಾವಣೆಯಾಗಿ ಒಟ್ಟು ಸಂಖ್ಯೆ ೨೫೪ಕ್ಕೇರಿದೆ. ದೇವರಹಿಪ್ಪರಗಿ ಕ್ಷೇತ್ರದಲ್ಲಿ ಹಾಲಿ ೨೫೨ ಮತಗಟ್ಟೆಗಳಿದ್ದು, ೪ ಹೊಸ ಮತಗಟ್ಟೆಗಳು ಸೇರ್ಪಡೆಯಾಗಿ ಒಟ್ಟು ೨೫೬ ಆಗಿವೆ. ಬಸವನಬಾಗೇವಾಡಿ ಕ್ಷೇತ್ರದಲ್ಲಿ ಹಾಲಿ ೨೩೧ ಮತಗಟ್ಟೆಗಳಿದ್ದು, ೧೩ ಹೊಸ ಮತಗಟ್ಟೆಗಳನ್ನು ಪ್ರಸ್ತಾಪಿಸುವ ಮೂಲಕ ಒಟ್ಟು ಸಂಖ್ಯೆ ೨೪೪ ತಲುಪಿದೆ. ಬಬಲೇಶ್ವರ ಕ್ಷೇತ್ರದಲ್ಲಿ ಪ್ರಸ್ತುತ ೨೪೪ ಮತಗಟ್ಟೆಗಳಿದ್ದು, ೧೫ ಹೊಸ ಮತಗಟ್ಟೆಗಳನ್ನು ಸೇರ್ಪಡೆಗೊಳಿಸಿ ಒಟ್ಟು ೨೫೯ಕ್ಕೇರಿಸಲಾಗಿದೆ. ಬಿಜಾಪುರ ನಗರ ಕ್ಷೇತ್ರದಲ್ಲಿ ಹಾಲಿ ೨೮೫ ಮತಗಟ್ಟೆಗಳಿದ್ದು, ೨ ಹೊಸ ಮತಗಟ್ಟೆಗಳನ್ನು ಪ್ರಸ್ತಾಪಿಸಿ ಒಟ್ಟು ಸಂಖ್ಯೆ ೨೮೭ ಆಗಿದೆ. ನಾಗಠಾಣ ಕ್ಷೇತ್ರದಲ್ಲಿ ಹಾಲಿ ೨೯೯ ಮತಗಟ್ಟೆಗಳಿದ್ದು, ೭ ಹೊಸ ಮತಗಟ್ಟೆಗಳು ಸೇರ್ಪಡೆಯಾಗಿವೆ, ಜೊತೆಗೆ ೨ ಮತಗಟ್ಟೆಗಳ ಸ್ಥಳ ಬದಲಾವಣೆ ಹಾಗೂ ೩ ಮತಗಟ್ಟೆಗಳ ಹೆಸರು ಬದಲಾವಣೆಗೆ ಪ್ರಸ್ತಾಪಿಸಲಾಗಿದ್ದು, ಒಟ್ಟು ಸಂಖ್ಯೆ ೩೦೬ ತಲುಪಿದೆ. ಇಂಡಿ ಕ್ಷೇತ್ರದಲ್ಲಿ ಪ್ರಸ್ತುತ ೨೬೮ ಮತಗಟ್ಟೆಗಳಿದ್ದು, ೯ ಹೊಸ ಮತಗಟ್ಟೆಗಳನ್ನು ಪ್ರಸ್ತಾಪಿಸುವ ಮೂಲಕ ಒಟ್ಟು ಸಂಖ್ಯೆ ೨೭೭ ಆಗಿದೆ. ಅದೇ ರೀತಿ ಸಿಂದಗಿ ಕ್ಷೇತ್ರದಲ್ಲಿ ಹಾಲಿ ೨೬೭ ಮತಗಟ್ಟೆಗಳಿದ್ದು, ೯ ಹೊಸ ಮತಗಟ್ಟೆಗಳು ಸೇರ್ಪಡೆಯಾಗಿ ಒಟ್ಟು ಸಂಖ್ಯೆ ೨೭೬ಕ್ಕೇರಿದೆ. ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಹಾಗೂ ಮತದಾರರ ಅನುಕೂಲಕ್ಕಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆ ಪುನರ್ ರಚನೆ ಕೈಗೊಳ್ಳಲಾಗಿದೆ ಎಂದವರು ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ: ಕರಡು ಮತದಾರರ ಪಟ್ಟಿ :
ಜಿಲ್ಲೆಯಾದ್ಯಂತ ಒಟ್ಟು ೨,೧೫೯ ಮತಗಟ್ಟೆಗಳಿದ್ದು, ಮುದ್ದೇಬಿಹಾಳ ಕ್ಷೇತ್ರದಲ್ಲಿ ೨೫೪ ಮತಗಟ್ಟೆಗಳಿದ್ದು, ೯೭,೧೧೩ ಪುರುಷ, ೯೫,೧೫೭ ಮಹಿಳೆ ಮತ್ತು ೨೫ ಇತರೆ ಸೇರಿದಂತೆ ಒಟ್ಟು ೧,೯೨,೨೯೫ ಮತದಾರರಿದ್ದಾರೆ. ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ೨೫೬ ಮತಗಟ್ಟೆಗಳಿದ್ದು, ೧,೦೨,೮೦೫ ಪುರುಷ, ೯೭,೩೯೮ ಮಹಿಳೆ ಮತ್ತು ೨೬ ಇತರೆ ಸೇರಿದಂತೆ ಒಟ್ಟು ೨,೦೦,೨೨೯ ಮತದಾರರಿದ್ದಾರೆ. ಬಸವನಬಾಗೇವಾಡಿ ಕ್ಷೇತ್ರದಲ್ಲಿ ೨೪೪ ಮತಗಟ್ಟೆಗಳಿದ್ದು, ೯೯,೧೭೬ ಪುರುಷ, ೯೭,೨೨೦ ಮಹಿಳೆ ಮತ್ತು ೨೨ ಇತರೆ ಸೇರಿದಂತೆ ಒಟ್ಟು ೧,೯೬,೪೧೮ ಮತದಾರರಿದ್ದಾರೆ. ಬಬಲೇಶ್ವರ ಕ್ಷೇತ್ರದಲ್ಲಿ ೨೫೯ ಮತಗಟ್ಟೆಗಳಿದ್ದು, ೧,೦೨,೫೪೩ ಪುರುಷ, ೯೮,೯೩೫ ಮಹಿಳೆ ಮತ್ತು ೯ ಇತರು ಸೇರಿದಂತೆ ಒಟ್ಟು ೨,೦೧,೪೮೭ ಮತದಾರರಿದ್ದಾರೆ. ಬಿಜಾಪುರ ನಗರ ಕ್ಷೇತ್ರದಲ್ಲಿ ೨೮೭ ಮತಗಟ್ಟೆಗಳಿದ್ದು, ೧,೦೩,೦೩೬ ಪುರುಷ, ೧,೦೭,೬೬೫ ಮಹಿಳೆ ಮತ್ತು ೪೧ ಇತರೆ ಸೇರಿದಂತೆ ಒಟ್ಟು ೨,೧೦,೭೪೨ ಮತದಾರರಿದ್ದಾರೆ.
ನಾಗಠಾಣ ಕ್ಷೇತ್ರದಲ್ಲಿ ೩೦೬ ಮತಗಟ್ಟೆಗಳಿದ್ದು, ೧,೨೨,೭೧೦ ಪುರುಷ, ೧,೧೫,೮೩೬ ಮಹಿಳೆ ಮತ್ತು ೧೧ ಇತರೆ ಸೇರಿದಂತೆ ಒಟ್ಟು ೨,೩೮,೫೫೭ ಮತದಾರರಿದ್ದಾರೆ. ಇಂಡಿ ವಿಧಾನಸಭಾ ಮತ ಕ್ಷೇತ್ರದಲ್ಲಿ ೨೭೭ ಮತಗಟ್ಟೆಗಳಿದ್ದು, ೧,೧೭,೫೫೪ ಪುರುಷ, ೧,೦೮,೯೯೫ ಮಹಿಳೆ ಮತ್ತು ೨೦ ಇತರೆ ಸೇರಿದಂತೆ ಒಟ್ಟು ೨,೨೬,೫೬೯ ಮತದಾರರಿದ್ದಾರೆ. ಸಿಂದಗಿ ವಿಧಾನಸಭಾ ಮತಕ್ಷೇತ್ರದಲ್ಲಿ ೨೭೬ ಮತಗಟ್ಟೆಗಳಿದ್ದು, ೧,೧೨,೬೮೨ ಪುರುಷ, ೧,೦೫,೯೬೪ ಮಹಿಳೆ ಮತ್ತು ೨೫ ಇತರೆ ಸೇರಿದಂತೆ ಒಟ್ಟು ೨,೧೮,೬೭೧ ಮತದಾರರಿದ್ದಾರೆ. ಕಾಗುಣಿತ ದೋಷ ೨೦,೩೫೦ ಮತದಾರರು ಹಾಗೂ ಮ್ಯಾಪಿಂಗ್ ಆಗದ ೪,೧೭೯ ಸೇರಿದಂತೆ ಒಟ್ಟು ೨೪,೫೨೯ ಮತದಾರರಿಗೆ ನೋಟಿಸ್ ನೀಡಲಾಗುತ್ತಿದ್ದು, ನಿಗದಿತ ದಿನಾಂಕದಂದು ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ಸೂಚಿಸಲಾಗಿದೆ ಎಂದವರು ತಿಳಿಸಿದರು.
೨,೯೭,೧೪೬ ಎಎಸ್‌ಡಿಡಿಒ ಮತದಾರರು:
ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದಂತೆ ಜಿಲ್ಲೆಯ ೮ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಮನೆ-ಮನೆ ಸಮೀಕ್ಷೆ ಹಾಗೂ ಪರಿಶೀಲನೆ ಕಾರ್ಯದಲ್ಲಿ ಗೈರು ಹಾಜರಿರುವವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತಪಟ್ಟವರು, ಈಗಾಗಲೇ ನೋಂದಾಯಿಸಿಕೊಂಡಿರುವ (ಡುಪ್ಲಿಕೇಟ್) ಹಾಗೂ ಇತರೆ ವರ್ಗಗಳಿಗೆ ಸೇರಿದ ಒಟ್ಟು ೨,೯೭,೧೪೬ ಎಎಸ್‌ಡಿಡಿಒ ಮತದಾರರನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕ್ಷೇತ್ರವಾರು ಎಎಸ್‌ಡಿಡಿಒ ಮತದಾರರ ಗುರುತಿಸಲಾಗಿದ್ದು ಆ ಪೈಕಿ,
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ೨,೯೩೭ ಮತದಾರರು ಗೈರು ಹಾಜರಿದ್ದು, ೧೯,೪೧೨ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. ೮,೮೫೮ ಮಂದಿ ಮೃತಪಟ್ಟಿದ್ದು, ೪,೭೬೦ ಡುಪ್ಲಿಕೇಟ್ ಹಾಗೂ ೨೩ ಇತರೆ ಪ್ರಕರಣಗಳು ಕಂಡುಬಂದಿದ್ದು, ಒಟ್ಟು ೩೫,೯೯೦ ಎಎಸ್‌ಡಿಡಿಒ ಮತದಾರರನ್ನು ಗುರುತಿಸಲಾಗಿದೆ ಎಂದವರು ತಿಳಿಸಿದರು.
ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ೮೪೦ ಮತದಾರರು ಗೈರು ಹಾಜರಿದ್ದು, ೧೮,೬೭೨ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. ೭,೯೫೫ ಮಂದಿ ಮೃತಪಟ್ಟಿದ್ದು, ೩,೦೧೭ ಡುಪ್ಲಿಕೇಟ್ ಹಾಗೂ ೬೭ ಇತರೆ ಪ್ರಕರಣಗಳು ಕಂಡುಬಂದಿದ್ದು, ಒಟ್ಟು ೩೦,೫೫೧ ಎಎಸ್‌ಡಿಡಿಒ ಮತದಾರರನ್ನು ಗುರುತಿಸಲಾಗಿದೆ. ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ೧,೪೭೮ ಮತದಾರರು ಗೈರು ಹಾಜರಿದ್ದು, ೧೩,೦೨೭ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. ೬,೦೫೨ ಮಂದಿ ಮೃತಪಟ್ಟಿದ್ದು, ೪,೪೫೫ ಡುಪ್ಲಿಕೇಟ್ ಹಾಗೂ ೪೨ ಇತರೆ ಪ್ರಕರಣಗಳು ಕಂಡುಬಂದಿದ್ದು, ಒಟ್ಟು ೨೫,೦೫೪ ಎಎಸ್‌ಡಿಡಿಒ ಮತದಾರರನ್ನು ಗುರುತಿಸಲಾಗಿದೆ.
ಬಬಲೇಶ್ವರ ಮತಕ್ಷೇತ್ರದಲ್ಲಿ ೧,೪೭೧ ಮತದಾರರು ಗೈರು ಹಾಜರಿದ್ದು, ೧೫,೧೬೦ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. ೫,೨೭೬ ಮಂದಿ ಮೃತಪಟ್ಟಿದ್ದು, ೨,೩೪೬ ಡುಪ್ಲಿಕೇಟ್ ಹಾಗೂ ೩೯ ಇತರೆ ಕಂಡುಬಂದಿದ್ದು, ಒಟ್ಟು ೨೪,೨೯೨ ಎಎಸ್‌ಡಿಡಿಒ ಮತದಾರರನ್ನು ಗುರುತಿಸಲಾಗಿದೆ. ಬಿಜಾಪುರ ನಗರ ಮತಕ್ಷೇತ್ರದಲ್ಲಿ ೩೮,೫೨೦ ಮತದಾರರು ಗೈರು ಹಾಜರಿದ್ದು, ೨೪,೬೯೩ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. ೮,೦೭೬ ಮಂದಿ ಮೃತಪಟ್ಟಿದ್ದು, ೮,೩೨೮ ಡುಪ್ಲಿಕೇಟ್ ಹಾಗೂ ೧೨೦ ಇತರೆ ಕಂಡುಬದಿದ್ದು, ಒಟ್ಟು ೭೯,೭೩೭ ಎಎಸ್‌ಡಿಡಿಒ ಮತದಾರರನ್ನು ಗುರುತಿಸಲಾಗಿದೆ.
ನಾಗಠಾಣ ಮತಕ್ಷೇತ್ರದಲ್ಲಿ ೮,೩೬೮ ಮತದಾರರು ಗೈರು ಹಾಜರಿದ್ದು, ೨೨,೫೨೧ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. ೬,೫೮೮ ಮಂದಿ ಮೃತಪಟ್ಟಿದ್ದು, ೨,೯೭೮ ಡುಪ್ಲಿಕೇಟ್ ಹಾಗೂ ೭೧ ಇತರೆ ಪ್ರಕರಣಗಳು ಕಂಡುಬಂದಿದ್ದು, ಒಟ್ಟು ೪೦,೫೨೬ ಎಎಸ್‌ಡಿಡಿಒ ಮತದಾರರನ್ನು ಗುರುತಿಸಲಾಗಿದೆ. ಇಂಡಿ ಮತಕ್ಷೇತ್ರದಲ್ಲಿ ೨,೮೨೭ ಮತದಾರರು ಗೈರು ಹಾಜರಿದ್ದು, ೧೭,೭೫೨ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. ೫,೯೭೯ ಮಂದಿ ಮೃತಪಟ್ಟಿದ್ದು, ೨,೨೬೯ ಡುಪ್ಲಿಕೇಟ್ ಹಾಗೂ ೭೯ ಇತರೆ ಪ್ರಕರಣಗಳು ಕಂಡುಬಂದಿದ್ದು, ಒಟ್ಟು ೨೮,೯೦೬ ಎಎಸ್‌ಡಿಡಿಒ ಮತದಾರರನ್ನು ಗುರುತಿಸಲಾಗಿದೆ. ಸಿಂದಗಿ ಮತಕ್ಷೇತ್ರದಲ್ಲಿ ೨,೬೫೧ ಮತದಾರರು ಗೈರು ಹಾಜರಿದ್ದು, ೨೦,೯೩೨ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. ೫,೯೮೪ ಮಂದಿ ಮೃತಪಟ್ಟಿದ್ದು, ೨,೪೩೯ ಡುಪ್ಲಿಕೇಟ್ ಹಾಗೂ ೮೪ ಇತರೆ ಪ್ರಕರಣಗಳು ಕಂಡುಬAದಿದ್ದು, ಒಟ್ಟು ೩೨,೦೯೦ ಎಎಸ್‌ಡಿಡಿಒ ಮತದಾರರನ್ನು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು ೨,೯೭,೧೪೬ ಎಎಸ್‌ಡಿಡಿಒ ಮತದಾರರು ಜಿಲ್ಲೆಯಾದ್ಯಂತ ಒಟ್ಟು ೫೯,೦೯೨ ಮತದಾರರು ಗೈರು ಹಾಜರಿದ್ದು, ೧,೫೨,೧೬೯ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. ೫೪,೭೬೮ ಮಂದಿ ಮೃತಪಟ್ಟಿದ್ದು, ೩೦,೫೯೨ ಡುಪ್ಲಿಕೇಟ್ ಹಾಗೂ ೫೨೫ ಇತರೆ ಪ್ರಕರಣಗಳು ಕಂಡುಬಂದಿದ್ದು, ಒಟ್ಟು ೨,೯೭,೧೪೬ ಎಎಸ್‌ಡಿಡಿಒ ಮತದಾರರನ್ನು ಗುರುತಿಸಲಾಗಿದೆ ಮತದಾರರ ಪಟ್ಟಿಯಲ್ಲಿ ವರ್ಷದಲ್ಲಿ ೪ ಬಾರಿ ಜನವರಿ-೧,ಏಪ್ರಿಲ್-೧,ಜುಲೈ-೧ ಹಾಗೂ ಅಕ್ಟೋಬರ್ -೧ ರಂದು ಸೇರ್ಪಡೆ ಮಾಡಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ. ತಿಳಿಸಿದರು.

BIJAPUR NEWS congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕಷ್ಟದ ಮೇಲೆ ಕಷ್ಟಗಳು ಬಂದಾಗ ಹೊಂದಿಕೊಂಡು ಹೋಗಬೇಕು

ಭಾವನಾಜೀವಿಯ ಭಾವಾಂತರಂಗ

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 25, 2026

ಗುತ್ತಿ ಬಸವಣ್ಣ ಕಾಲುವೆಗೆ ನೀರು ಆಗ್ರಹಿಸಿ ರೈತರ ಪ್ರತಿಭಟನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕಷ್ಟದ ಮೇಲೆ ಕಷ್ಟಗಳು ಬಂದಾಗ ಹೊಂದಿಕೊಂಡು ಹೋಗಬೇಕು
    In ವಿಶೇಷ ಲೇಖನ
  • ಭಾವನಾಜೀವಿಯ ಭಾವಾಂತರಂಗ
    In ಭಾವರಶ್ಮಿ
  • ವಿಜಯಪುರ ಜಿಲ್ಲೆಯಲ್ಲಿ ೨.೯೭ ಲಕ್ಷ ಎಎಸ್‌ಡಿಡಿಒ ಮತದಾರರು ಪತ್ತೆ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 25, 2026
    In ದಿನಪತ್ರಿಕೆ
  • ಗುತ್ತಿ ಬಸವಣ್ಣ ಕಾಲುವೆಗೆ ನೀರು ಆಗ್ರಹಿಸಿ ರೈತರ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಬಣಜಿಗರ ಸಮಾವೇಶ: ಅಭಿನಂದನಾ ಸಮಾರಂಭ
    In (ರಾಜ್ಯ ) ಜಿಲ್ಲೆ
  • ನಾನು ಏನನ್ನಾದರೂ ಸಾಧಿಸಬಲ್ಲೆ ಎನ್ನುವುದೇ ಯಶಸ್ಸಿನ ಮಂತ್ರ
    In (ರಾಜ್ಯ ) ಜಿಲ್ಲೆ
  • ಮಹಿಳಾ ವಿವಿ ಕುಲಸಚಿವರಾಗಿ ಡಾ.ಅಜೂರ್ ಅಧಿಕಾರ ಸ್ವೀಕಾರ
    In (ರಾಜ್ಯ ) ಜಿಲ್ಲೆ
  • ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ :₹30.52 ಲಕ್ಷ ದಂಡ
    In (ರಾಜ್ಯ ) ಜಿಲ್ಲೆ
  • ಅರ್ಥಪೂರ್ಣವಾಗಿ ಜರುಗಿದ ಅರಿವಿನ ಮನೆ ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.