ಬಸವತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆಯ, ವಿಜಯಪುರ ಜಿಲ್ಲಾಘಟಕದಿಂದ ಏರ್ಪಾಡು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಬಸವತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆಯ, ವಿಜಯಪುರ ಜಿಲ್ಲಾಘಟಕದಿಂದ ಅದರ ಗೌರವಾಧ್ಯಕ್ಷೆ ಡಾ ಸರಸ್ವತಿ ಪಾಟೀಲ ಇವರ ಸ್ವಗೃಹದಲ್ಲಿ ರವಿವಾರ ಸಂಜೆ ಅರಿವಿನ ಮನೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಎರಡು ಅನುಭಾವಗಳು ನಡೆದಿದ್ದು ಅತ್ಯಂತ ವಿಶೇಷ. ಜೊತೆಗೆ ಆಶೀರ್ವಚನವನ್ನು ಸೇರಿಸಿದರೆ ಮೂರು ಅನುಭಾವಗಳನ್ನು ಈ ಒಂದೇ ಒಂದು ವೇದಿಕೆಯಲ್ಲಿ ಎಲ್ಲರಿಗೂ ಉಣಬಡಿಸಿದ್ದು ಅರ್ಥಪೂರ್ಣವಾಗಿತ್ತು. ಅನುಭಾವ1.
‘ವಚನಗಳ ಮೌಲಿಕ ಸಂದೇಶ ಮತ್ತು ಪ್ರಸ್ತುತತೆ’ ಈ ವಿಷಯವನ್ನು ಕುರಿತು ಮೊದಲ ಅನುಭಾವವನ್ನು ನೀಡಿದಂಥವರು ನಿವೃತ್ತ ಉಪನ್ಯಾಸಕಿ ಶರಣೆ ಡಾ. ಮೀನಾಕ್ಷಿ ಪಾಟೀಲ ಮೇಡಂ ಅವರು ಸಹಾಯಕ ಸಂಶೋಧಕರು ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಬೆಂಗಳೂರು. ಇವರಿಂದ ವಿಷಯ ಮಂಡಣೆಯೂ ಅನುಭಾವದ ಎತ್ತರದ ನಿಟ್ಟಿನಲ್ಲಿ ಎಲ್ಲರಿಗೂ ಮನಸ್ಸಿನ ಆಳದಲ್ಲಿ ಶೋಭಿಸುವ ಹಾಗೆ ಮಾಡಿದರು.
ಅನುಭಾವ 2: ‘ಕ್ರಾಂತಿಗಂಗೋತ್ರಿ ಅಕ್ಕನಾಗಮ್ಮ ಅವರ ಜೀವನದರ್ಶನ’ವನ್ನು ಕುರಿತು ಉಪನ್ಯಾಸ ನೀಡಿದಂಥವರು ಶರಣೆ ಶಿಲ್ಪಾ ಭಸ್ಮೆ ಅವರು. ಶಿಕ್ಷಕಿಯರು ಹಾಗೂ ಗೌರವಕಾರ್ಯದರ್ಶಿಗಳು ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ,ಇವರು ಮೂರ್ತಿ ಚಿಕ್ಕದಾದರೂ ಕೀರ್ತಿದೊಡ್ಡದು, ಎನ್ನುವಂತೆ ಚಿಕ್ಕ ವಯಸ್ಸಿನಲ್ಲಿ ಅಪಾರ ಸಾಧನೆಯನ್ನು ಮಾಡಿದಂಥಹ ಇವರು ಅತ್ಯಂತ ನಿರರ್ಗಳವಾಗಿ ಅನುಭಾವವನ್ನು ಹಂಚಿಕೊಂಡದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯ ಅತ್ತಿವೇರಿ ಬಸವರಾಜೇಶ್ವರಿ ಅಮ್ಮನವರನ್ನು ಪರಿಚಯಿಸಿದ ಡಾ.ಸರಸ್ವತಿ ಪಾಟೀಲ ಮೇಡಂ ಅವರಿಗೆ ಗೌರವ ಸಮರ್ಪಿಸಿದರು.
ಶರಣೆ ಕಲಾವತಿ ಪಟ್ಟಣಶೆಟ್ಟಿ ಪ್ರಾರ್ಥಿಸಿದರು. ಡಾ. ಶಾರದಾಮಣಿ ಹುಣಶ್ಯಾಳ ಸ್ವಾಗತಿಸಿದರು. ಶಿವಶಂಕರ ಕೋನರಡ್ಡಿ ಪರಿಚಯಿಸಿದರು. ಶರಣೆ ಬನಶ್ರೀ ಹತ್ತಿ ನಿರ್ವಹಿಸಿದರು. ವಿಜಯಪುರ ಘಟಕದ ಜಿಲ್ಲಾ ಅಧ್ಯಕ್ಷ ಆರ್. ಎಸ್ ಬಿರಾದಾರ ಶರಣು ಸಮರ್ಪಿಸಿದರು. ಶರಣೆ ಬ್ಯಾಳಿ ವಚನ ಮಂಗಳ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸಿದ್ದಪ್ಪಾ ಪಡನಾಡ, ರೇಖಾ ಬಿರಾದಾರ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಪಾಟೀಲ, ಸುಜಾತಾ ಹಳಕಟ್ಟಿ, ತ್ರಿವೇಣಿ ಬುರ್ಲಿ, ರತ್ನಕ್ಕಾ ಬಿರಾದಾರ, ಗೀತಾ ದೇಸಾಯಿ ಸೇರಿದಂತೆ 89 ಶರಣ ಶರಣೆಯರು ಭಾಗವಹಿಸಿದ್ದರು.

